Breaking News
Home / Recent Posts / ಪ್ರಜಾಧ್ವನಿ ಸಮಾವೇಶ ಮುಂದೂಡಿಕೆ

ಪ್ರಜಾಧ್ವನಿ ಸಮಾವೇಶ ಮುಂದೂಡಿಕೆ

Spread the love

ಪ್ರಜಾಧ್ವನಿ ಸಮಾವೇಶ ಮುಂದೂಡಿಕೆ

ಮೂಡಲಗಿ: ಪಟ್ಟಣದ ಶ್ರೀ ಬಸವರಂಗ ಮಂಟಪದ ಮೈದಾನದಲ್ಲಿ ಮಾ.15ರಂದು ನಿಗದಿಗೊಂಡ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ದ್ರುವನಾರಾಯಣ ನಿಧನದಿಂದಾಗಿ ಮಾ. 17ಕ್ಕೆ ಮುಂದೂಡಲಾಗಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ನಡೆಯಲಿರುವ ಸ್ಕ್ರೀನಿಂಗ್ ಕಮಿಟಿ ಸಭೆಗೆ ತೆರಳುತ್ತಿರುವ ಹಿನ್ನಲೆಯಲ್ಲಿ ಮಾ.17ರಂದು ಮೂಡಲಗಿಯಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮವು ಮತ್ತೇ ತಾತ್ಕಾಲಿವಾಗಿ ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ತಿಳಿಸಿದ್ದಾರೆ.
ಸಮಾವೇಶ ನಡೆಸುವ ಕುರಿತು ಈಗಾಗಲೆ ಎಲ್ಲ ತಯಾರಿಯನ್ನು ಮಾಡಿಕೊಳ್ಳಲಾಗಿತ್ತು ಆದರೆ ಅನಿವಾರ್ಯ ಕಾರಣದಿಂದ ಮುಂದೂಡಲಾದ ಪ್ರಜಾಧ್ವನಿ ಯಾತ್ರೆಯ ಸಮಾವೇಶವನ್ನು ಶೀಘ್ರದಲ್ಲಿ ಕೈಗೊಳ್ಳಲಾಗುತ್ತದೆ ಮತ್ತು ಕೂಡಲೇ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.


Spread the love

About inmudalgi

Check Also

ಫೆ. 19ರಿಂದ ಹೊನಕುಪ್ಪಿ ಚಂದ್ರಮ್ಮಾದೇವಿ ಜಾತ್ರೆ

Spread the loveಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮಾದೇವಿ ಜಾತ್ರೆಯು ಫೆ. 19ರಿಂದ ಫೆ. 23ರ ವರೆಗೆ ಜರುಗಲಿದ್ದು, ಜಾತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ