Breaking News
Home / ಬೆಳಗಾವಿ / ‘ಗ್ರಾಮೀಣ ಭಾಗದಲ್ಲಿ ಎಂಇಎಸ್ ಕಾಲೇಜಿನ ಶೈಕ್ಷಣಿಕ ಕಾರ್ಯ ಶ್ಲಾಘನೀಯವಾಗಿದೆ

‘ಗ್ರಾಮೀಣ ಭಾಗದಲ್ಲಿ ಎಂಇಎಸ್ ಕಾಲೇಜಿನ ಶೈಕ್ಷಣಿಕ ಕಾರ್ಯ ಶ್ಲಾಘನೀಯವಾಗಿದೆ

Spread the love

ಮೂಡಲಗಿ: ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸವಲ್ಲಿ ಸಮರ್ಥರನ್ನಾಗಿಸುವ ನಿಟ್ಟಿನಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ಶೈಕ್ಷಣಿಕವಾಗಿ ಶ್ಲಾಘನೀಯ ಕಾರ್ಯ ಮಾಡುತ್ತಲಿದೆ’ ಎಂದು ಮಿಜೋರಾಂ ಕೇಂದ್ರಿಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ಪೀಠದ ಪ್ರಾಧ್ಯಾಪಕ ಪ್ರೊ. ಕೆ. ವಿದ್ಯಾಸಾಗರ ರೆಡ್ಡಿ ಹೇಳಿದರು.

ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 4ನೇ ಹಂತದ ಮೌಲ್ಯಮಾಪನ ಹಾಗೂ ಮಾನ್ಯತಾ (ನ್ಯಾಕ್) ಸಮಿತಿಯ ಅಧ್ಯಕ್ಷರಾಗಿದ್ದ ಅವರು ಮಹಾವಿದ್ಯಾಲಯದ ವಿವಿದಿ ವಿಭಾಗಳ ಪರಿವೀಕ್ಷಣೆಯ ನಂತರ ಸಮಾರೋಪ ಸಭೆಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಅವಶ್ಯವಿರುವ ಸೌಲಭ್ಯಗಳನ್ನು ಮಹಾವಿದ್ಯಾಲಯವು ಹೊಂದಿರುವುದು ವಿಶೇಷವಾಗಿದೆ ಎಂದರು.
ಮಹಾವಿದ್ಯಾಲಯವು ಬೋಧನೆ, ಸಂಶೋಧನಾತ್ಮ ಶೈಕ್ಷಣಿಕ ಚಟುವಟಿಕೆಗಳು, ಎನ್‍ಎಸ್‍ಎಸ್, ಸ್ಕೌಟ್ಸ್, ವೈಆರ್‍ಸಿ, ಸುಸಜ್ಜಿತ ಗ್ರಂಥಾಲಯದೊಂದಿಗೆ ಇ-ಲೈಬ್ರರಿ, ಇ-ಕಚೇರಿ ಮತ್ತು ಗಣಕಯಂತ್ರ, ಭೂಳೋಶಾಸ್ತ್ರ, ಭಾಷಾ ಪ್ರಯೋಗಾಲಯ, ಜಿಮ್ ಕೇಂದ್ರ, ಕ್ರೀಡಾ ಸಾಧನೆ, ಆಂತರಿಕ ಗುಣಮಟ್ಟದ ಖಾತರಿ ವ್ಯವಸ್ಥೆ, ವಸತಿ ನಿಲಯ ಸೇರಿದಂತೆ ಮಹಾವಿದ್ಯಾಲಯವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾವಿದ್ಯಾಲಯವು ಎಲ್ಲ ವಿಭಾಗಗಳಲ್ಲಿ ನವೀನತೆಯ ಪ್ರಯೋಗಳು ಮತ್ತು ಹಸಿರು ಪರಿಸರ ಹೊಂದಿರುವ ಆವರಣವು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದ್ದು ಇತರೆ ಕಾಲೇಜುಗಳಿಗೆ ಪ್ರೇರಣೆಯಾಗಿವೆ ಎಂದರು.
ನ್ಯಾಕ್ ಸಮಿತಿಯ ಸದಸ್ಯರಾದ ಹರಿಯಾಣದ ರೋಹ್ಟಕ್ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಗುಲಶನ್ ತನೇಜಾ, ಅರ್ಗತಲಾದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಮಿಯಾಕುಮಾರ ಪಾನ್ ಇವರು ಮಹಾವಿದ್ಯಾಲಯದ ವಿವಿಧ ವಿಭಾಗಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡಿದರು.
ಸಮಾರೋಪದ ಸಮಾರಂಭದಲ್ಲಿ ನ್ಯಾಕ್ ವರದಿಯನ್ನು ಪ್ರಾಚಾರ್ಯ ಜಿ.ವಿ. ನಾಗರಾಜ ಹಾಗೂ ಐಕ್ಯೂಎಸಿ ಸಂಯೋಜಕ ಡಾ. ಎಸ್.ಎಲ್. ಚಿತ್ರಗಾರ ಅವರಿಗೆ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಆರ್. ಸೋನವಾಲಕರ, ಉಪಾಧ್ಯಕ್ಷ ಆರ್.ಪಿ. ಸೋನವಾಲಕರ, ನ್ಯಾಕ್ ಸಂಯೋಜಕ ಪ್ರೊ. ಎಸ್.ಬಿ. ಖೊತ ಇವರ ಸಮ್ಮುಖದದಲ್ಲಿ ಹಸ್ತಾಂತರಿಸಿದರು.
ಸಂಸ್ಥೆಯ ನಿರ್ದೇಶಕರಾದ ಎಸ್.ಆರ್. ಸೋನವಾಲಕರ, ಬಿ.ಎಚ್. ಸೋನವಾಲಕ, ವ್ಹಿ.ಎ. ಸೋನವಾಲಕರ, ಎ.ವ್ಹಿ. ಹೊಸಕೋಟಿ, ಎ.ವೈ. ಸತರಡ್ಡಿ, ಸಂದೀಪ ಎಂ. ಸೋನವಾಲಕರ ಇದ್ದರು.
ನಿವೃತ್ತ ಪ್ರಾಚಾರ್ಯ ಪ್ರೊ. ಎಸ್.ಎಂ. ಗುಜಗೊಂಡ ಸ್ವಾಗತಿಸಿದರು, ಐಕ್ಯೂಎಸಿ ಸಂಯೋಜಕ ಡಾ. ಎಸ್.ಎಲ್. ಚಿತ್ರಗಾರ ವಂದಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ