ಓದುವ ಹವ್ಯಾಸ ರೂಡಿಸಿಕೊಳ್ಳಬೇಕು-ಡಾ.ಶಂಕರ ತೇರದಾಳ
ಮೂಡಲಗಿ: ವಿದ್ಯಾರ್ಥಿಗಳು ಓದುವ ಹವ್ಯಾಸ, ಕೇಳುವ ಮನೋಭಾವ, ಬರೆಯುವ ಅಭಿಲಾಸೆ, ಮಾತನಾಡುವ ಕಲೆಯನ್ನು ರೂಡಿಸಿಕೊಂಡು ಸಮಾಝಕ್ಕೆ ಪೂರಕವಾದ ವ್ಯಕ್ತಿತ್ವನ್ನು ರೂಪಿಸಿಕೊಳ್ಳ ಬೇಕು ಎಂದು ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಶಂಕರ ತೇರದಾಳ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2023-24ನೇ ಸಾಲಿನ ವಾರ್ಷಿಕೋತ್ಸ ಸಮಾರಂಭದ ಮುಖ್ಯ ಅತಿಥಿಸ್ಥಾನದಿಂದ ಮಾತನಾಡಿದರು.
ಕರ್ನಾಟಕ ಸರಕಾರದ ಗುಪ್ತಚರ ಇಲಾಖೆಯ ಇನ್ಸಪೆಕ್ಟರ್ ಮಲ್ಲಪ್ಪ ಕೌಜಲಗಿ ಮಾತನಾಡಿ, ಪದವಿ ನಂತರ ಸ್ನಾತಕೋತ್ತರ ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತೇನೆ ಅಂದರೆ ಆಗುವುದಿಲ್ಲ ಪಿಯುಸಿ ಹಾಗೂ ಪದವಿ ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ ಗುರಿಗಳನ್ನು ಮೊದಲೇ ನಿರ್ಧರಿಸಿ ಎಲ್ಲ ವಿಷಯಗಳಲ್ಲಿ ಪ್ರಧಾನ ಪ್ರಾಶಸ್ತ್ಯ ಕೊಟ್ಟು ಅಧ್ಯಯನ ಮಾಡಿದರೆ ಯಶಸ್ಸು ಕಟ್ಟಿಟ ಬುತ್ತಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಎರಡರಲ್ಲೂ ಸಕ್ರಿಯವಾಗಿ ತೋಡಗಿಕೊಂಡರೆ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಸೇವಾ ನಿವೃತಿ ಹೊಂದಿದ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಪ್ರೊ.ಸಂಜಯ ಖೋತ ಅವರನ್ನು ಮತ್ತು ಪ್ರಾಧ್ಯಪಕ ಹುದ್ದೆಗೆ ಪದೋನ್ನತಿ ಹೊಂದಿದ ಡಾ.ಸುರೇಶ ಚಿತ್ರಗಾರ ಹಾಗೂ ಪಿಎಚ್ಡಿ ಪದವಿಯನ್ನು ಪಡೆದ ಗ್ರಂಥಪಾಲಕ ಡಾ.ಬಸವಂತ ಬರಗಾಲಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ನೂರಕ್ಕೆ ನೂರು ಅಂಕಗಳನ್ನು ಪಡೆದ ಶಿಕ್ಷಣ ವಿಷಯ ವಿದ್ಯಾರ್ಥಿಗಳನ್ನು, ಕಾಲೇಜಿಗೆ ಅತೀ ಹೆಚ್ಚು ಅಂಕಗಳನ್ನು ಪಡೆದ ಮತ್ತು ಯುನಿರ್ವಸಿನಿ ಬ್ಲೂ ಆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ವಿಷಯಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ವಿಷಯಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಿಂದ ಗ್ರಂಥಾಲಯ ಹಾಗೂ ಹಾಗೂ ಮಾಹಿತಿ ವಿಜ್ಞಾನ ವಿಭಾಗದಿಂದ ಪಿಎಚ್ಡಿ ಪದವಿ ಪಡೆದ ಡಾ.ಬಸವಂತ ಬರಗಾಲಿ ಅವರು ತಮ್ ಗ್ರಂಥವನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಪ್ರಾಚಾರ್ಯರ ಮೂಲಕ ಮಹಾವಿದ್ಯಾಲಯಕ್ಕೆ ಸಮರ್ಪಿಪಿಸಿದರು.
2023-24 ನೇ ಸಾಳಿನ ಮಹಾವಿದ್ಯಾಲಯದ ಆದರ್ಶ ವಿಧ್ಯಾರ್ಥಿಯಾಗಿ ಬೆಳವಿ, ವಿದ್ಯಾರ್ಥಿನಿಯಾಘಿ ಮೇಘಾ ಗುಡ್ಲಿ ಪಡೆದುಕೊಂಡರು.
ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಅನೀಲ ಸತರಡ್ಡಿ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪ್ರೊ.ಜಿ.ವಿ.ನಾಗರಾಜ, ಉಪಾಧ್ಯಕ್ಷ ಎಸ್.ಸಿ.ಮಂಟೂರ, ಡಾ.ಎಸ್.ಎಸ್.ಹೂಗಾರ, ಪ್ರೊ.ಎ.ಎಸ್.ಮಿಸಿನಾಯಕ, ಪ್ರೊ.ಎಲ್.ಪಿ.ಹಿಡಕಲ್, ಪ್ರೊ.ಸಿದ್ಧರಾಮ ಸವಸುದ್ದಿ, ಸವಿತಾ ಕೊತ್ತಲ, ಪ್ರೀತಿ ಬೆಳಗಲಿ, ಭಾರತಿ ತಳವಾರ, ವೆಂಕಟೇಶ ಪಾಟೀಲ, ರಾಜು ಸಪ್ತಸಾಗರ, ಮನೋಹರ ಲಮಾನಿ, ಬಿ.ಎಸ್.ಕಂಬಾರ, ಅರ್ಜುನ ಗಸ್ತಿ ಇದ್ದರು.