Breaking News
Home / Recent Posts / ಸೇವಾ ನಿವೃತ್ತಿ ಹೊಂದಿದ ಪ್ರಾಚಾರ್ಯ ಪ್ರೊ.ಸಂಗಮೆಶ ಗುಜಗೊಂಡ ಅವರಿಗೆ ಸತ್ಕಾರ

ಸೇವಾ ನಿವೃತ್ತಿ ಹೊಂದಿದ ಪ್ರಾಚಾರ್ಯ ಪ್ರೊ.ಸಂಗಮೆಶ ಗುಜಗೊಂಡ ಅವರಿಗೆ ಸತ್ಕಾರ

Spread the love

ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಂಗಮೇಶ ಎಮ್.ಗುಜಗೊಂಡ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಸಂಸ್ಥೆಯ ಆಡಳಿತ ಮಂಡಳಿಯವರು ಸತ್ಕರಿಸಿ ಗೌರವಿಸಿದರು.

ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಂಗಮೇಶ ಎಮ್.ಗುಜಗೊಂಡ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಮೂಡಲಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗ, ವಿದ್ಯಾರ್ಥಿ ಬಳಗ ಹಾಗೂ ಅಭಿಮಾನಿ ಬಳಗದಿಂದ ಸತ್ಕಾರ ಸಮಾರಂಭ ಜರುಗಿತು.
ಸಮಾರಂಭ ಮುಖ್ಯ ಅತಿಥಿ ಸಂಸ್ಥೆಯ ಮಾಜಿ ನಿರ್ದೇಶಕ ವೆಂಕಟೇಶ ಟಿ.ಸೋನವಾಲಕರ ಮಾತನಾಡಿ, ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಅವರು ಸುದೀರ್ಘ 37 ವರ್ಷಗಳ ನಿಷ್ಕಳಂಕ ಹಾಗೂ ಕಪ್ಪು ಚುಕ್ಕೆ ಇಲ್ಲದ ಸೇವೆ, ಸರಳ ಸಜ್ಜನಿಕೆ ಜೀವನ, ಮೇದಾವಿತನದ ವ್ಯಕ್ತಿತ್ವ ನಮ್ಮ ಶಿಕ್ಷಣ ಸಂಸ್ಥೆಗೆ ಕಳಶ ಪ್ರಾಯವಾಗಿದೆ ಎಂದು ಬನ್ನಿಸಿದರು.
ಉತ್ತಮ ವಾಕ್ ಪಟುತ್ವ ಹೊಂದಿದ ಅವರು ಉತ್ತಮ ಭೋದನೆಯಿಂದ ಭೊಗೋಳಶಾಸ್ತ್ರ ವಿಷಯ ವಿದ್ಯಾರ್ಥಿಗಳ ಆಕರ್ಷಕಣೆಯ ವಿಷಯವಾಗಿತ್ತು ಎಂದರು.
ಖ್ಯಾತ ಮಕ್ಕಳ ಸಾಃಇತಿ ಆದ ಅವರ ಕಥೆ ಕವನಗಳು ಶಾಲಾ ಪಠ್ಯಗಳಲ್ಲಿ ಅಳವಡಿಸಿರುವದರಿಂದ ಮೂಡಲಗಿ ಹಾಗೂ ನಮ್ಮ ಶಿಕ್ಷಣ ಸಂಸ್ಥೆಯ ಹೆಸರನ್ನು ನಾಡಿನ ತುಂಬಾ ಬೆಳಿಸಿದ್ದು ನಮ್ಮ ಹೆಮ್ಮ ಎಂದರು.
ಸನ್ಮಾನ ಸ್ವೀಕರಿಸಿ ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಅವರು ಮಾತನಾಡಿ, ಮೂಡಲಗಿ ಶಿಕ್ಷಣ ಸಂಸ್ಥೆ ನನ್ನ ಪ್ರತಿಭೆಯನ್ನು ಗುರುತಿಸಿ ಅಕ್ಕರೆಯಿಂದ ಪ್ರಾಧ್ಯಾಪಕ ವೃತ್ತಿಗೆ ಅವಕಾಶ ಕೊಟ್ಟು ನನ್ನ ವ್ಯಕ್ತಿತ್ವ ರೂಪಗೊಳ್ಳಲು ಕಾರಣವಾಯಿತು. ನಾನು ವೃತ್ತಿಯಿಂದ ನಿವೃತ್ತಿ ಹೊಂದಿದರು ಭಾವ ಸಂಭಂದದಿಂದ ಪ್ರಾಣ ಇರುವವರೆಗೂ ನಿವೃತ್ತಿ ಹೊಂದುವದಿಲ್ಲ ಎಂದ ಅವರು ಆಡಳಿತ ಮಂಡಳಿ ಶಿಕ್ಷಣ ಶಿಕ್ಷಕೇತರ ಸಿಬ್ಬಂದಿ ಸಹಾಯ ಸಹಕಾರ ವಿದ್ಯಾರ್ಥಿಗಳ ಒಡನಾಟ ಸ್ಮರಣೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಆರ ಸೊನವಾಲಕರÀ ಮಾತನಾಡಿ, ಪ್ರೊ.ಸಂಗಮೇಶ ಗುಜಗೊಂಡ ಅವರ ಅವಿಸ್ಮರಣಿಯ ಸೇವೆಯನ್ನು ಸಂಸ್ಥೆ ಸ್ಥಿರಸಾಯಿಯಾಗಿ ಉಳಿಸಿಕೊಳ್ಳುತ್ತದೆ ಎಂದರು.
ಹಿರಿಯ ಪ್ರಾಧ್ಯಾಪಕ ಪ್ರೊ.ಜಿ.ವ್ಹಿ.ನಾಗರಾಜ ಮಾತನಾಡಿ, ಮೇರು ಪ್ರತಿಭೆಯನ್ನು ಹೊಂದಿದ ಪ್ರಾಚಾರ್ಯರು ಕೇವಲ ಭೋದನೆಗೆ ಸೀಮಿತವಾಗದೆ, ಸಾಹಿತಿ ಸಾಂಸ್ಕøತಿಕವಾಗಿ ನಾಡಿನ ತುಂಬಾ ಹೆಸರು ಮಾಡಿದ ಹೆಗ್ಗಳಿಕೆ ಅವರದಾಗಿದೆ ಎಂದರು.
ನಿವೃತ ಗ್ರಂಥಪಾಲಕ ಬಾಲಶೇಖರ ಬಂದಿ ಮಾತನಾಡಿ, ಪ್ರೊ.ಗುಜಗೊಂಡ ಅವರು ವೃತ್ತಿಯಿಂದ ಭೋಗೋಳ ಶಾಸ್ತ್ರ ಪ್ರಾಧ್ಯಾಕರಾದರೂ ಯಾವುದೇ ವಿಷಯ ಕೊಟ್ಟರು ನಿರ್ಗಗಳವಾಗಿ ಮಾತನಾಡುವ ಅವರ ಪಾಂಡಿತ್ಯದ ಪ್ರಭುತ್ವವನ್ನು ಗಮನಿಸಿದರೆ ಅವರನ್ನು ನಡೆದಾಡುವ ಜ್ಞಾನ ಗಂಗೋತ್ರಿಯಾಗಿದ್ದಾರೆ ಎಂದು ಬನ್ನಿಸಿದರು.
ಇದೇ ಸಂಧರ್ಭದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ವಿವಿಧ ಅಂಗಗಳಿಂದ ಹಳೆ ವಿದ್ಯಾರ್ಥಿಹಾಗೂ ಈಗಿನ ವಿದ್ಯಾರ್ಥಿ ಬಳಗ, ನಾಗರಿಕರು ಸತ್ಕರಿಸಿ ಗೌರವಿಸಿದರು.
ಸಮಾರಂಭ ವೇದಿಕೆಯಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವಿಜಯಕುಮಾರ ಸೋನವಾಲಕರ ಎಸ್.ಆರ್.ಸೋನವಾಲಕರ ಬಿ.ಎಚ್.ಸೋನವಾಲಕರ ಅನೀಲ ಸತರಡ್ಡಿ, ಎ.ವ್ಹಿ.ಹೋಸಕೋಟಿ, ಮಾಜಿ ನಿರ್ದೇಶಕ ಬಿ.ವಿ.ಗುಲಗಾಜಂಬಗಿ, ಅಶೋಕ ಹೊಸೂರ, ಎಸ್.ಎಂ.ಕಮದಾಳ ಇದ್ದರು. ಸಮಾರಂಭದಲ್ಲಿ ಉಪನ್ಯಾಸಕರಾದ ಡಾ.ವಿ.ಆರ್.ದೇವರಡ್ಡಿ, ಡಾ.ಎಸ್.ಎಲ್.ಚಿತ್ರಗಾರ, ಎಸ್.ಸಿ.ಮಂಟೂರ, ಲೋಕೇಶ ಹಿಡಕಲ್, ವಿಷ್ಟು ಬಾಗಡಿ, ಎ.ಎಸ್.ಮೀಸಿನಾಯಕ, ಸಿದ್ರಾಮ ಸವಸುದ್ದಿ, ಸವಿತಾ ಕೊತ್ತಲ್, ಪ್ರೀತಿಬೆಳಗಲಿ, ನಿವೃತ್ತ ಉಪನ್ಯಾಸಕರಾದ ಎಸ್.ಬಿ.ಖೋತ, ಡಾ.ಬಿ.ಸಿಪಾಟೀಲ, ವಿ.ಎಸ್.ಹಂಪಣ್ಣವರ, ಎಸ್.ಜಿ.ನಾಯಿಕ, ಎ.ಡಿ.ತಳವಾರ, ಎ.ಪಿ.ರಡ್ಡಿ, ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಮ್.ಕೆ.ಕಂಕಣವಾಡಿ, ಪಿಯು ಕಾಲೇಜ ಪ್ರಾಚಾರ್ಯ ಎಂ.ಎಸ್.ಪಾಟೀಲ, ಎಸ್.ಎಸ್.ಆರ್ ಪ್ರೌಢ ಶಾಲೆಯ ಉಪಪ್ರಾಚಾರ್ಯ ಬಿ.ಕೆ.ಕಾಡಪ್ಪಗೋಳ, ಪ್ರಾಥಮಿಕ ಶಾಲೆಯ ಜೆ.ಬಿ.ಓಂಕಾರ, ಗ್ರಂಥಪಾಲಕ ಬಸವಂತ ಬರಗಾಲಿ, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಅಭಿಮಾನಿ ಬಳಗದವರು ಇದ್ದರು


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ