ಮೂಡಲಗಿ:. ಪ್ರಜಾಪ್ರಭುತ್ವ ಯಶಸ್ಸಿಯಾಗಬೇಕಾದರೆ ಜನ ಪ್ರತಿನಿಧಿಗಳು ಜನರ ಹಾಗೂ ದೇಶದ ಆಶಯಗಳಿಗೆ ಮತ್ತು ಸಂವಿಧಾನದ ಕಟ್ಟಳೆಗಳಿಗೆ ಒಳಪಟ್ಟ ಕೆಲಸ ಮಾಡಿದರೆ ಮಾತ್ರ ಯಶಸ್ಸಿಯಾಗಲು ಸಾದ್ಯ ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪೆÇ್ರ.ಜಿ.ವ್ಹಿ. ನಾಗರಾಜ ಹೇಳಿದರು.
ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪ್ರಜಾಪ್ರಭುತ್ವದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಅತಿಥಿ ಪ್ರೊ.ವಿಷ್ಣು ಬಾಗಡೆ ಮಾತನಾಡಿ, ಪ್ರಜಾಪ್ರಭುತ್ವದ ಪ್ರಕಾರಗಳು ಸಂವಿಧಾನದ ರಚನೆ ಅದು ಒಳಗೊಂಡಿರುವ ಅಂಶಗಳು ಹಾಗೂ ಅದರ ಉಪಯೋಗ ಮತ್ತು ಪ್ರಯೋಜನೆ ಬಗ್ಗೆ ವಿದ್ಯಾರ್ಥಿಗಳಿಗೆ ಮನ ಮುಟ್ಟುವ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ಎಸ್.ಎಲ್. ಚಿತ್ರಗಾರ ಪೆÇ್ರ.ಎಸ್.ಸಿ.ಮಂಟೂರ, ಡಾ.ವ್ಹಿ.ಆರ್.ದೇವರಡ್ಡಿ, ಪ್ರೀತಿ ಬೆಳಗಲಿ., ಬಿ.ಎಸ್.ಕಂಬಾರ, ಗ್ರಂಥಪಾಲಕ ಡಾ.ಬಿ.ಎಂ.ಬರಗಾಲಿ, ರಾಜು ಸಪ್ತಸಾಗರ ಸಿದ್ಧರಾಮ ಸಂಸುದ್ದಿ, ಸುಭಾಸ ಖಾನಪ್ಪಗೋಳ, ಮನೋಹರ ಲಮಾಣಿ ಅರ್ಜುನ ಗಸ್ತಿ, ರಮೇಶ ಖಾನಪ್ಪಗೋಳ ಪಾಂಡು ಬುದ್ಧಿ, ಭಾರತಿ ತಳವಾರ ಮತ್ತಿತರರು ಇದ್ದರು.