ಮೂಡಲಗಿ: ಭಾರತದಲ್ಲಿ ಅಸಂಕ್ರಾಮಿಕ ರೋಗದಿಂದ ಸಾಯುವವರ ಸಂಖ್ಯೆ ಅತಿಯಾಗಿ ಹೆಚ್ಚುತ್ತಿದ್ದು, ಅದಕ್ಕೆ ಮುಖ್ಯ ಕಾರಣಗಳಾದ ತಂಬಾಕು, ಸ್ಟಾರ್‍ಗುಟಕಾ ಸೇವನೆ, ಮದ್ಯಪಾನ, ಧೂಮಪಾನ ಚಟಗಳಿಂದ ಯುವಜನತೆ ಮುಕ್ತವಾಗಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಸಲಹೆಗಾರೆ ಶ್ವೇತಾ ಪಾಟೀಲ ಅಭಿಪ್ರಾಯ ಪಟ್ಟರು.
ಪಟ್ಟಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ, ರಾಷ್ಟ್ರೀಯ ತಂಬಾಕು ನಿಯಂತ್ರಣ ಘಟಕ ಹಾಗೂ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ -ವಾಣಿಜ್ಯ ಹಾಗೂ ಬಿ.ಸಿ.ಎ.ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುಥ್ ರೆಡ್‍ಕ್ರಾಸ್ ಘಟಕ, ರೋವರ್ಸ ಹಾಗೂP ಸ್ಕೌಟ್ಸ ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಂಬಾಕು ಹಾಗೂ ತಂಬಾಕು ಉತ್ಪನ್ನಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದ ಮುಖ್ಯಅತಿಥಿ ಸ್ಥಾನದಿಂದ ಮಾತನಾಡಿದ ಅವರು ಹೃದಯ ಸ್ಥಂಬನ, ಮಧುಮೇಹ ಕಾಮಾಲೆ, ಪಾಶ್ರ್ವ ವಾಯು, ಇವುಗಳು ಅಸಂಕ್ರಾಮಿಕ ರೋಗಗಲಾಗಿದ್ದು ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ರೋಗದೊಂದಿಗೆ ಅಸಂಕ್ರಾಮಿಕ ರೋಗಗಳು ಸಹ ಉಲ್ಬಣಗೊಳ್ಳುತ್ತವೆ ಎಂದು ಹೇಳಿದರಲ್ಲದೆ ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಯುವಜನತೆ ದೂರವಿರುವುದರಿಂದ ತಮ್ಮ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಟ್ಟು ಕೊಳ್ಳಬೇಕೆಂದು ಸಲಹೆ ನೀಡಿದರು.
ಆರೋಗ್ಯವೇ ಭಾಗ್ಯ, ಆರೋಗ್ಯವು ಎಲ್ಲ ಸಂಪತ್ತಿಗಿಂತಲೂ ಅತ್ಯಂತ ಮಹತ್ವವಾದ ಸಂಪತ್ತು ಎಂದು ಯುವ ಸಮೂದಾಯಕ್ಕೆ ತಿಳಿಹೇಳಿದರು.
ಸಮಾರಂಭದ ಅಧ್ಯಕ್ಷ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಜಿ.ವ್ಹಿ.ನಾಗರಾಜ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಸದೃಡಕಾಯವನ್ನು ಹೊಂದಿ ಸದೃಡ ಭಾರತವನ್ನು ಕಟ್ಟಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದಿನ ಕಾಲಕ್ಕೆ ಅವಶ್ಯಕವಾಗಿದೆ ಎಂದು ಹೇಳಿದರು
ಇನ್ನೋರ್ವ ಅತಿಥಿ ಶ್ರೀಮತಿ ಕವಿತಾ ರಾಜಣ್ಣವರ ಅವರು ತಂಬಾ ಕುಕುರಿತಾ ಪ್ರತಿಜ್ಞಾ ವಿಧಿ ಬೋದಿಸಿದರು.
ಸಮಾರಂಭದಲ್ಲಿ ಪ್ರೊ.ಎಸ್.ಎಮ್ ಗುಜಗೊಂಡ, ಡಾ.ವ್ಹಿ.ಆರ್. ದೇವರಡ್ಡಿ, ಡಾ.ಬಿ.ಎಂ. ಬರಗಾಲಿ. ಮನೋಹೆರ ಲಮಾಣಿ, ಕಲ್ಮೇಶ ಇಂಗಳೆ, ರಮೇಶ ಖಾನಪ್ಪಗೋಳ, ಸವಿತಾ ಕೊತ್ತಲ, ಪ್ರೊ. ಎಸ್.ಕೆ.ಸವಸುದ್ದಿ, ಅರ್ಜುನ ಗಸ್ತಿ, ಮೂಡಲಗಿಯ ಸಮುದಾಯ ಆರೋಗ್ಯ ಇಲಾಖೆಯ ಗೀತಾ ಡೋಣಿ ಮುಂತಾದವರು ಉಪಸ್ಥಿತರಿದ್ದರು.
ಪ್ರೊ. ಎಸ್.ಸಿ.ಮಂಟೂರು ಸ್ವಾಗತಿಸಿದರು. ಪ್ರೊ.ಪ್ರೀತಿ ಬೆಳಗಲಿ ನಿರೂಪಿಸಿದರು