ಮೂಡಲಗಿ: ಕನ್ನಡ ಮನಗಳಲ್ಲಿ ದಶಕಗಳಿಂದ ದೊಡ್ಡ ಸ್ಥಾನದಲ್ಲಿ ಆಶಿನರಾಗಿದ್ದ ಎಸ್.ಪಿ . ಬಾಲಸು ಬ್ರಹ್ಮಮಣ್ಯಂ ಎಂಬ ಹಿರಿಯ ಜೀವ ಅಗಲಿದ ಸುದ್ದೀಯು ಇಡಿ ಕರುನಾಡಿನ ಜನ ಕಂಬನಿ ಮಿಡಿಯುವಂತೆ ಮಾಡಿದೆ. ಮುಂದಿನ ಜನುಮದಲ್ಲಿ ಕನ್ನಡಿಗನಾಗಿ ಹುಟ್ಟುವೆ ಅನ್ನುವ ಅವರ ಮಾತು ಪ್ರತಿಯೊಬ್ಬರ ಮನದಲ್ಲಿ ಉಳಿದಿದೆ ಎಂದು ಮಂಜುನಾಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಲ್.ವಾಯ್. ಅಡಿಹುಡಿ ಹೇಳಿದರು.
ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮತ್ತು ಕಲಾವಿದರ ಬಳಗ ಆಶ್ರಯದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮೌನಾಚರಣೆ ಮಾಡಿ ಮಾತನಾಡುತ್ತಾ, ಕರ್ನಾಟಕ ರಾಜ್ಯವೆಂದಷ್ಟೆ ಅಲ್ಲ ಭಾರತದ ಬಹುತೇಕ ಚಿತ್ರರಂಗಳಲ್ಲಿ ತಮ್ಮ ಹಾಡುಗಳ ಮೂಲಕ ಸಂಗೀತ ಪ್ರೀಯರಿಗೆ ಆಪ್ತರಾಗಿದ್ದರು ಎಂದರು.
ಕಲಾವಿದ ಅಯುಬ ಕಲಾರಕೊಪ್ಪ ಮಾತನಾಡಿ ಸಂಗೀತದಲ್ಲಿ ಕೇಲವರಿಗೆ ತಾಳ ಕೈಗೆ ಬಂದರೆ ರಾಗ ಗಂಟಲಲ್ಲಿ ಇಳೀದರೆ ಸಾಕು ತಲೆ ಕುತ್ತಿಗೆ ಮೇಲೆ ಇರಲ್ಲ ಆದರೆ ಎಸ್.ಪಿ.ಬಿ. ಇದಕ್ಕೆಲ್ಲ ಅಪವಾದ ಮೂರ್ತಿ. ನಾಲವತ್ತು ಸಾವಿರಕ್ಕಿಂತ ಹೆಚ್ಚು ಹಾಡುಗಳನ್ನು ಹಾಡಿ ಗಿನ್ನಿಸ್ ದಾಖಲೆ ನಿರ್ಮಿಸಿದ ಗಾಯಕ ಎಂದು ಹೇಳಿ ಎಸ್.ಪಿ.ಬಿ. ಅವರ ಕೇಲವು ಹಾಡುಗಳನ್ನು ಮೆಲಕು ಹಾಕಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಶಿಧರ ಆರಾಧ್ಯ, ಅನಿತಾ ಒಂಟಗೂಡಿ, ಶಿವು ಮಾಲಗಾರ, ಸಿದ್ದರಾಮ ಡೊಳ್ಲಿ ಎಸ್.ಪಿ.ಬಿ ಅವರ ನೆನಪಿಗಾಗಿ ಹಾಡುಗಳನ್ನು ಹಾಡಿದರು ಮತ್ತು ಮಹಾಂತೇಶ ಕೊಟಬಾಗಿ, ರಾಮಣ್ಣ ಮಂಟೂರ, ರಾಘು ಗಂಗನ್ನವರ, ಪರಶುರಾಮ ಕೊಡಗನೂರ ಮತ್ತಿತರು ಉಪಸ್ಥಿತರಿದ್ದರು.
