ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರಿಂದ
ರಾಜ್ಯಾದ್ಯಂತ ರಕ್ತದಾನ ಕಾರ್ಯಕ್ರಮ- ಸಂಸದ ಈರಣ್ಣ ಕಡಾಡಿ
ಮೂಡಲಗಿ: (ಬೆಳಗಾವಿ) ಕಳೆದ ಒಂದು ವರ್ಷಗಳಿಂದ ಕರೋನಾ ಮಹಾಮಾರಿಯ ಉಪಟಳದಿಂದಾಗಿ ಜನ ಜೀವನ ಅಸ್ಥವ್ಯಸ್ಥವಾಗಿದ್ದು ಅದೇ ರೀತಿ ಬ್ಲೆಡ್ ಬ್ಯಾಂಕ್‍ಗಳಲ್ಲಿ ಸಾಕಷ್ಟು ರಕ್ತದ ಸಂಗ್ರಹ ಇಲ್ಲದಿರುವ ಕಾರಣಕ್ಕೆ ಈ ಕರೋನಾ ಮತ್ತು ಇನ್ನಿತರ ಕಾಯಿಲೆಗಳಿಗೆ ತುತ್ತಾದ ಜನರಿಗೆ ಅವಶ್ಯಕವಾದ ರಕ್ತ ಸಂಗ್ರಹ ಇಲ್ಲದಿರುವ ಕಾರಣಕ್ಕೆ ಸಾಕಷ್ಟು ಸಾವು ನೋವು ಸಂಭವಿಸುತ್ತಿವೆ. ಈ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಕರ್ನಾಟಕ ರಾಜ್ಯಾದ್ಯಂತ ರಕ್ತದಾನ ಮಾಡುವ ಮೂಲಕ ಕೋವಿಡ್ ಸಂದರ್ಭದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಶನಿವಾರ ಮೇ 29 ರಂದು ಪಕ್ಷದ ಕಾರ್ಯಕರ್ತರು ತಮ್ಮ ಹತ್ತಿರದ ಬ್ಲಡ್ ಬ್ಯಾಂಕ್‍ಗಳಿಗೆ ಹೋಗಿ ರಕ್ತದಾನ ಮಾಡಲು ಕರೆ ನೀಡಿದರು. ಕಳೆದ ಒಂದು ವಾರದಿಂದ ರಾಜ್ಯದ ರೈತರಿಗೆ ದಿನನಿತ್ಯದ ವ್ಯವಹಾರಗಳಿಗೆ ತೊಂದರೆಯಾಗಿರುವುದರಿಂದ ರಾಜ್ಯ ಬಿಜೆಪಿ ರೈತ ಮೋರ್ಚಾ ವತಿಯಿಂದ 30 ಜಿಲ್ಲಾ ಕೇಂದ್ರಗಳಲ್ಲಿ ರೈತ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗದೆ. ಇಲ್ಲಿ ರೈತರಿಗೆ ಹಣ್ಣು, ತರಕಾರಿ, ಆಹಾರ ಧಾನ್ಯ ಸೇರಿದಂತೆ ಇನ್ನಿತರ ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ತೊಂದರೆ ಇರುವ ರೈತರಿಗೆ ಖರೀದಿದಾರರನ್ನು ಸಂಪರ್ಕ ಮಾಡುತ್ತವೆ ಎಂದರು.
ಇಂದು (ಮೇ 29 ರಂದು) ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಗೋಕಾಕ ನಗರದ ರೋಟರಿ ಕ್ಲಬ್ ಬ್ಲಡ್ ಬ್ಯಾಂಕ್‍ನಲ್ಲಿ ಮಧ್ಯಾಹ್ನ 12 ಗಂಟೆಗೆ ರಕ್ತದಾನ ಕಾರ್ಯಕ್ರಮ ನಡೆಯಲಿದ್ದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಭಾಗವಹಿಸಲಿದ್ದಾರೆ.