ಮೂಡಲಗಿ: ಗ್ರಾಮ ಪಂಚಾಯತಿ ನೌಕರರನ್ನು ಕೋರೊನಾ ವಾರಿಯರ್ಸ ಅಂತಾ ಘೋಷಿಸಿ ಆದೇಶ ಮಾಡಬೇಕು ಹಾಗೂ 15 ನೇ ಹಣಕಾಸಿನ 4 ನೇ ಕಂತಿನ ಅನುದಾನ ಜಮೆ ಆಗಿದ್ದನ್ನು ಸಿಬ್ಬಂದಿ ವೇತನಕ್ಕಾಗಿ ಮೀಸಲಿಡಬೇಕು ಎಂದು ಆಗ್ರಹಿಸಿ ಮೂಡಲಗಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ಮುಂದೆ ಸಿಬ್ಬಂದಿಗಳು ಶುಕ್ರವಾರದಂದು 2ನೇ ದಿನವು ಧರಣಿ ನಡೆಸಿದರು.
ಮೂಡಲಗಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಿಗೆ 15 ನೇ ಹಣಕಾಸಿನ ಅನುದಾನವು ಜಮೆ ಆಗಿದ್ದು ರಾಜ್ಯ ಸರಕಾರವು ಸಹ ಸದರ ಅನುದಾನದಲ್ಲಿ ವಾಟರಮನ್ ಮತ್ತು ಸ್ವಚ್ಛತಾಗಾರರಿಗೆ ತಲಾ 25 ಪ್ರತಿಶತದಷ್ಟು ಅನುದಾನವನ್ನು ಮೀಸಲಿಟ್ಟು ವೇತನ ಪಾವತಿಸಲು ಕ್ರಮಕೈಗೊಳ್ಳಬೇಕು ಅಂತಾ ಆದೇಶಿಸಿದರೂ ಸಹ ಇನ್ನೂವರೆಗೆ ವೇತನ ಪಾವತಿಸಲಾಗಿಲ್ಲ ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಅನುದಾನವನ್ನೇಲ್ಲ ಜಲ ಜೀವನ ಮಿಷನ ಯೋಜನೆ ವರ್ಗಾಯಿಸಿ ಸಿಬ್ಬಂದಿಗಳಿಗೆ ಮಲತಾಯಿ ಧೋರಣೆ ಅನುಸರಿಸಲಾಗಿತ್ತಿದೆಯೆಂದು ಗ್ರಾಮ ಪಂಚಾಯತಿ ನೌಕರರ ಸಂಘದ ತಾಲೂಕಾಧ್ಯಕ್ಷ ರಮೇಶ ಹೋಳಿ ಅವರು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತಿ ಸಿಬ್ಬಂದಿಗಳನ್ನು ವಾರಿಯರ್ಸ ಅಂತಾ ಘೋಷಿಸಿ ಆದೇಶ ಮಾಡುವವರೆಗೆ ಪಂಚಾಯತಿಯಲ್ಲಿ ಕೋವಿಡ್-19 ಗೆ ಸಂಬಂಧಿಸಿದ ಯಾವುದೇ ಕಾರ್ಯವನ್ನು ಮಾಡದಿರಲು ಸಿಬ್ಬಂದಿಗಳು ನಿರ್ಧರಿಸಿದ್ದಾರೆ. ಮುಖಂಡರಾದ ಬಸವರಾಜ ರೊಡ್ಡನವರ, ಬಸವರಾಜ ಮಿರ್ಜಿ, ರಾಜು ದೊಡಮನಿ, ಕಿಶೋರ ಗಣಾಚಾರಿ, ರವಿ ಬಿಳ್ಳೂರ, ಸೆರಿದಂತೆ ಅನೇಕರು 2ನೇ ದಿನದ ಪ್ರತಿಭಟನಾ ಧರಣಿಯ ನೇತೃತ್ವವನ್ನು ವಹಿಸಿದ್ದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …