Breaking News
Home / Recent Posts / ಜನತೆಯ ಕಷ್ಟಕ್ಕಾಗದ ವಿಧಾನ ಪರಿಷತನ ಸದಸ್ಯರು ತಾಲೂಕಿಗೆ ಭೇಟಿ ನೀಡದ ಹಿನ್ನೆಲೆ ಬೇಸರ ವ್ಯಕ್ತಪಡಿಸುತ್ತಿರುವ ಜನರು

ಜನತೆಯ ಕಷ್ಟಕ್ಕಾಗದ ವಿಧಾನ ಪರಿಷತನ ಸದಸ್ಯರು ತಾಲೂಕಿಗೆ ಭೇಟಿ ನೀಡದ ಹಿನ್ನೆಲೆ ಬೇಸರ ವ್ಯಕ್ತಪಡಿಸುತ್ತಿರುವ ಜನರು

Spread the love

ಮೂಡಲಗಿ : ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಎರಡನೇ ಅಲೆಯ ಆರ್ಭಟ ಮುಂದುವರೆದಿದ್ದು, ಕೊರೋನಾ ತಡೆಗಟ್ಟಲು ರಾಜ್ಯ ಸರ್ಕಾರ ಜೂನ್ 7 ರವರೆಗೂ ಲಾಕ್ ಡೌನ್ ಘೋಷಣೆ ಮಾಡಿದೆ. ಇದರಿಂದ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಒಂದು ಕಡೆ ಕೊರೋನಾ ಸೋಂಕಿನಿಂದ ಅನೇಕರು ಬಲಿಯಾಗುತ್ತಿದ್ದು, ಸೋಂಕಿತ ಬಡಪಾಯಿಗಳು ಸರಿಯಾದ ವ್ಯಾಪಾರ, ವೈಹಿವಾಟು ಸ್ಥಗಿತದಿಂದಾಗಿ ತೀವೃ ಆರ್ಥಿಕ ಸಂಕಷ್ಟವನ್ನು ಜನ ಸಾಮಾನ್ಯರು ಎದುರಿಸುತ್ತಿದ್ದಾರೆ.

ಮೂಡಲಗಿ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಕೊರೋನಾ ಅಟ್ಟಹಾಸದಿಂದ ಸಾಕಷ್ಟು ಜನ ಬಲಿಯಾಗಿದ್ದಾರೆ. ಆದರೆ ಇಲ್ಲಿಯವರೆಗೂ ತಾಲೂಕಿನ ಜನರ ಸಂಕಷ್ಟ ಬಗ್ಗೆ ಕೆಲವು ಜನಪ್ರತಿನಿಧಿಗಳು ತಮಗೆ ಸಂಬಂಧವಿಲ್ಲದಂತೆ ಜಾಣ ನಡೆ ತೋರಿಸುತ್ತಿದ್ದಾರೆ. ವಿಧಾನ ಪರಿಷತ್ತನ ಸದಸ್ಯರುಗಳಾದ ಮಹಾಂತೇಶ ಕವಟಗಿಮಠ, ವಿವೇಕರಾವ್ ಪಾಟೀಲ, ಹನಮಂತ ನಿರಾಣಿ, ಅರುಣ ಶಹಪೂರರವರುಗಳು ತಾಲೂಕಿನ ಜನತೆಗೆ ಮುಖವನ್ನು ತೋರಿಸಿಲ್ಲ. ಚುನಾವಣಾ ಸಂದರ್ಭಗಳಲ್ಲಿ ಮಾತ್ರ ತಾಲೂಕಿನ ಜನತೆಗೆ ಮತಯಾಚಿಸಲು ಆಗಮಿಸಿ ನಿರಂತರವಾಗಿ ತಮ್ಮಯ ಸಂಪರ್ಕದಲ್ಲಿದ್ದು ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವದಾಗಿ ಮಾತು ಕೊಟ್ಟು ಈಗಾ ಸಂಕಷ್ಟದ ಸಮಯದಲ್ಲಿ ಜೊತೆಯಾಗಿರದೆ ಇರುವದು ವಿಪರ್ಯಾಸವಾಗಿದೆ.
ಇವರುಗಳಿಗೆ ಸ್ಥಳೀಯ ಸಂಸ್ಥೆ, ಶಿಕ್ಷಕರ, ಪದವಿಧರ ಚುನಾವಣೆಯಲ್ಲಿ ಮತ ಹಾಕಲು ಮಾತ್ರ ತಾಲೂಕಿನ ಜನತೆ ಬೇಕು. ಮತದಾರರಿಗೆ ಸಂಕಷ್ಟ ಎದುರಾದಾಗ ತಿರುಗಿ ನೋಡದ ಇವರುಗಳ ಅವಶ್ಯಕತೆ ಏನಿದೆ? ಎಂಬ ಯಕ್ಷ ಪ್ರಶ್ನೆಯಾಗಿದೆ. ತಾಲೂಕಿನಲ್ಲಿ ಲಾಕ್‍ಡೌನ್ ಹಿನ್ನೆಲೆ ಸರಿಯಾದ ಉದ್ಯೋಗ, ಕೃಷಿಯಾಧರಿತ ಕೆಲಸ ಹಾಗೂ ಸರಿಯಾದ ಮಾರುಕಟ್ಟೆ ಸೂಕ್ತ ಬೆಂಬಲ ಬೆಲೆ ಇರದೆ ಕಂಗಾಲಾಗಿದ್ದಾರೆ. ಲಾಕ್‍ಡೌನ್ ಜಾರಿಯಾಗಿ ಇಷ್ಟು ದಿನಗಳಾದರು ಒಮ್ಮೆಯೂ ತಾಲೂಕಿಗೆ ಭೇಟಿ ನೀಡದಿರುವದಕ್ಕೆ ಬೇಸರವನ್ನು ತಾಲೂಕಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಅಲ್ಲಾ ಸ್ವಾಮಿ ನಿಮ್ಮನ್ನ ತಮ್ಮ ಅಮೂಲ್ಯವಾದ ಮತ ಹಾಕಿ ಗೆಲ್ಲಿಸಿ ತಂದಿರುವ ಜನತೆಗೆ ತೊಂದರೆ ಉಂಟಾದಾಗ ಅವರಿಗೆ ಸಹಾಯಹಸ್ತ ಮಾಡದೇ, ಸ್ವಲ್ಪ ಧೈರ್ಯ ತುಂಬಾವಂತಹ ಕೆಲಸವಾದ್ರೂ ಮಾಡಬೇಕು ಅದು ಅವರ ಮುಖ್ಯ ಕರ್ತವ್ಯವಾಗಿದೆ. ತಾಲೂಕಿನ ಜನ ನಿಮಗೆ ಸಹಾಯ ಮಾಡಿ ಅಂತ ಇಲ್ಲಿವರೆಗೂ ಕೇಳಿಲ್ಲ ಸ್ವಾಮಿ, ಜನರಿಗೆ ಹಾಗೂ ಸೋಂಕಿಗೆ ಬಲಿಯಾದ ಕುಟುಂಬಕ್ಕೆ ಸಾಂತ್ವಾನ ಹೇಳಿ ನಿಮ್ಮ ಜೊತೆ ಸಾವು ಇದ್ದೇವೆ ಎಂಬ ಮಾತಿನೊಂದಿಗೆ ಅವರಿಗೆ ಧೈರ್ಯ ಹೇಳುವಷ್ಟು ಕನಿಕರಲ್ಲ ಇಲ್ಲವಾಗಿದೆ. ಇನ್ನಾದರು ಜನಪ್ರತಿನಿಧಿಗಳಾಗಿ ಮೇಲಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಜನತೆಯ ಆಶೋತ್ತರಗಳಿಗೆ ಸೂಕ್ತ ಸ್ಪಂದನೆ ನೀಡಿ, ಜನತೆಯ ಕಷ್ಟಗಳಿಗೆ ಸ್ಪಂದಿಸಿ ಆತ್ಮ ಸ್ಥೈರ್ಯ ತುಂಬುವ ಕೆಲಸವಾದರು ಮಾಡಲಿ ಎಂಬುದು ತಾಲೂಕಿನ ಜನತೆಯ ಅಭಿಪ್ರಾಯವಾಗಿದೆ.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ