Breaking News
Home / ತಾಲ್ಲೂಕು / ಗೇಣುದ್ದ ಹೊಲಕ್ಕಾಗಿ ದಾಯಾದಿ ಜಗಳ ಕೊಲೆಯಲ್ಲಿ ಪರ್ಯಾವಸನಗೊಂಡಿದೆ.

ಗೇಣುದ್ದ ಹೊಲಕ್ಕಾಗಿ ದಾಯಾದಿ ಜಗಳ ಕೊಲೆಯಲ್ಲಿ ಪರ್ಯಾವಸನಗೊಂಡಿದೆ.

Spread the love

ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಿಂತಾಮಣಿ ರಾಮಪ್ಪ ಮೇಟಿ ( 55) ಕೊಲೆಯಾದವರು. ಅವರ ಅಣ್ಣನ ಮಗ ಗೋಪಾಲ ಭೀಮಪ್ಪ ಮೇಟಿ – (35) ಆರೋಪಿ.
ಬೆಳೆ ಸಂರಕ್ಷಣೆಗಾಗಿ ಲೈಸನ್ಸ್ ಪಡೆದಿದ್ದ ಬಂದೂಕಿನಿಂದ ಕೊಲೆಗೈಯಲ್ಲಾಗಿದೆ. ಎರಡು ನಳಿಕೆಯ ಬಂದೂಕಿನಿಂದ ನೇರವಾಗಿ ಎದೆಗೆ ಗುಂಡಿಕ್ಕಲಾಗಿದ್ದು, ಎರಡು ಗುಂಡುಗಳು ಎದೆಯೊಳಗೆ ತೂರಿ ಹೋಗಿದೆ. ಚಿಂತಾಮಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಿಕಿತ್ಸೆಗಾಗಿ ಗೋಕಾಕ ಸರಕಾರಿ ಆಸ್ಪತ್ರೆಗೆ ಒಯ್ದಾಗ ಈಗಾಗಲೆ ಮೃತ ಪಟ್ಟಿದ್ದಾನೆಂದು ಘೋಷಿಸಲಾಯಿತು.
ಚಿಂತಾವಣಿ ರಾಮಪ್ಪ ಅವರ ಮನೆಯ ಹಿಂದಿನ ಹೊಲದಲ್ಲಿ ರೆಂಟಿ ಹೊಡೆಯುವಾಗ ಘಟನೆ ನಡೆದಿದೆ. ಕೇವಲ ಒಂದು ಟ್ರಾಕ್ಟರ್ ಹಾಯಬಹುದಾದಷ್ಟು ಜಾಗದ ಸಲುವಾಗಿ ವಿವಾದವಿತ್ತು.
ಆರೋಪಿ ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸಿದ್ದಾರೆ.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ