ಹದವಾದ ಮಳೆಯಾದ ಮೇಲೆ ಸೋಯಾಬಿನ ಬಿತ್ತನೆ ಮಾಡಿರಿ- ಸಹಾಯಕ ಕೃಷಿ ನಿರ್ದೇಶಕ – ಎಂ.ಎಂ. ನದಾಫ
ಗೋಕಾಕ /ಮೂಡಲಗಿ: ಸೋಯಾಬಿನ ಬೆಳೆಯನ್ನು ಬಿತ್ತನೆ ಮಾಡುವ ರೈತರು ಹದವಾದ ಮಳೆಯಾದ ಮೇಲೆ ಭೂಮಿಯ ತೇವಾಂಶ ನೋಡಿಕೋಂಡು ಬಿತ್ತನೆ ಮಾಡಬೇಕು ಎಂದು ಗೋಕಾಕ ಹಾಗೂ ಮೂಡಲಗಿ ತಾಲ್ಲೂಕಿನ ರೈತರಿಗೆ ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಂ. ನದಾಫ ರವರು ಸಲಹೆ ನೀಡಿದ್ದಾರೆ.
ಸೋಯಾಬಿನ ಬಿತ್ತನೆ ಮಾಡಲು ಜೂನ ಮೋದಲನೆಯ ವಾರದಿಂದ ಜೂಲೈ ಮದ್ಯದವರೆಗೂ ಅವಕಾಶ ಇದ್ದು ಸಾಕಷ್ಠು ಮಳೆಯಾಗಿ ಭೂಮಿ ಹಸಿಯಾದ ನಂತರ ಸೋಯಾಬಿನ್ ಬಿತ್ತನೆ ಮಾಡಬೇಕು ಅಲ್ಲದೆ ನೀರಾವರಿ ಪ್ರದೇಶದಲ್ಲಿ ಬಿತ್ತಣೆ ಮಾಡುವವರ, ಭೂಮಿಗೆ ಮೋದಲು ನೀರು ಹಾಯಿಸಿ ನಂತರ ಬಿತ್ತನೆ ಮಾಡುವುದು ಸೂಕ್ತ ವಾಗಿರುತ್ತದೆ ಸದ್ಯಕ್ಕೆ ಬಿಸಿಲಿನಿಂದ ಕೂಡಿದ ವಾತಾವರಣ ಇದ್ದು ಇದು ಸೋಯಾಬೀನ ಬಿತ್ತಣೆಗೆ ಸೂಕ್ತವಾಗಿರುವುದಿಲ್ಲ.
ಗೋಕಾಕ ತಾಲ್ಲೂಕಿನ ಕುಂದರನಾಡು (ಅಂಕಲಗಿ) ಭಾಗದಲ್ಲಿ ಅಲ್ಪ ಮಳೆಯಾಗಿದ್ದು ಗೋಕಾಕ ಹಾಗೂ ಮೂಡಲಗಿ ತಾಲ್ಲೂಕಿನಲ್ಲಿ ಸೋಯಾಬಿನ ಬಿತ್ತುವ ರೈತರಿಗೆ ಮಳೆಯ ಅವಶ್ಯಕತೆ ಇದೆ ಭೂಮಿಯಲ್ಲಿ ತೇವಾಂಶ ಕಡಿಮೆ ಇದ್ದಾಗ ಮತ್ತು ಸದ್ಯದ ವಾತಾವರಣದಲ್ಲಿ ಸೋಯಾಬಿನ ಬಿತ್ತುವುದರಿಂದ ಮೋಳಕೆ ಪ್ರಮಾಣ ಕಡಿಮೆ ಬರುತ್ತದೆ ಅಲ್ಲದೇ ರೈತರು ಸೋಯಾಬಿನ ಬೀಜವನ್ನು 2 ಇಂಚಿಗಿಂತ ಹೆಚ್ಚಿನ ಆಳದಲ್ಲಿ ಬಿತ್ತನೆ ಮಾಡಿದರೂ ಸಹ ಮೋಳಕೆ ಪ್ರಮಾಣ ಕಡಿಮೆ ಬರುತ್ತದೆ ಆದ್ದರಿಂದ ರೈತರು ಮಣ್ಣಿನ ತೇವಾಂಶ ನೋಡಿಕೊಂಡು ಬಿತ್ತಣೆ ಮಾಡುವಂತೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ ರೈತರಿಗೆ ಸಲಹೆ ನೀಡಿರುತ್ತಾರೆ.