ಶಾಸಕ ಬಾಲಚಂದ್ರ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ಯ
ಜಿ.ಪಂ ಸದಸ್ಯ ಕೊಪ್ಪದ ಸ್ವಂತ ಹಣದಿಂದ ಸ್ಥಾಪಿಸಿದ ಶುಧ್ಧ ಕುಡಿಯವ ನೀರಿನ ಘಟಕಕ್ಕೆ ಚಾಲನೆ
ಮೂಡಲಗಿ: ಕಹಾಮ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಾದವಾಡ ಜಿಲ್ಲಾ ಪಂಚಾಯತ ಸದಸ್ಯ ಗೋವಿಂದ ಕೊಪ್ಪದ ಅವರು ಸ್ವಂತ ಖರ್ಚಿನಿಂದ ಸ್ಥಾಪಿಸಿದ ಒಂದು ಸಾವಿರ ಲೀಟರ ಸಾಮಥ್ರ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸೋಮವಾರದಂದು ಶಾಸಕರ ಆಪ್ತ ಸಹಾಯ ಮಲ್ಲಿಕಾರ್ಜು ಯಕ್ಸಂಬಿ ಮತ್ತು ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಪ್ರಕಾಶ ಮಾದರ ಮಾತನಾಡಿ, ಸಾಮಾಜಿಕ ಕಳಕಳಿ ಹೊಂದಿರುವ ಯಾದವಾಡ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಅವರು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಶುದ್ಧ ಕುಡಿಯು ನೀರು ಉಪಯೋಗಿಸು ತಮ್ಮ ಸ್ವಂತ ಹಣದಲ್ಲಿ ಶುದ್ಧ ಕುಡಿಯು ನೀರಿನ ಘಟಕ ಸ್ಥಾಪಿಸಿರುವ ಕಾರ್ಯ ಶ್ಲಾಘನಿವಾದದು ಎಂದರು.
ಒಬಿಸಿ ಜಿಲ್ಲಾ ಬಿಜೆಪಿ ಖಜಾಂಚಿ ವಿಜಯ ಜದ್ಲಿ ಮಾತನಾಡಿ, ಗೋವಿಂದ ಕೊಪ್ಪದ ಅವರು ಈಗಾಗಲೇ ಯಾದವಾಡ ಪ್ರೌಢ ಶಾಲೆಯಲ್ಲಿ ಮತ್ತು ಕುಲಗೋಡ ಬಸ್ಸ್ ನಿಲ್ದಾನ ಹತ್ತಿರ ಹಾಗೂ ಸದ್ಯ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇರಿದಂತೆ ಮೂರ ಶುದ್ಧ ಕುಡಿಯುವ ನೀರಿ ಘಟಕವನ್ನು ಸ್ವಂತ ಹಣದಿಂದ ಸ್ಥಾಪಿಸಿ ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ ಎಂದರು. ಯಾದವಾಡ ಜಿ.ಪಂ ವ್ಯಾಪ್ತಿಯಲ್ಲಿ ಸರಕಾರದಿಂದ ಆರು ಶುದ್ದ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ಕುಲಗೋಡ ಗ್ರಾಮದಲ್ಲಿ ಸುಮಾರು 20 ಲೀಟರ ಎರಡು ಸಾವಿರ ನೀರಿನ ಕ್ಯಾನ್‍ಗಳನ್ನು ಸ್ವಂತ ಹಣದಿಂದ ವಿತರಿಸಿದ್ದಾರೆ ಎಂದ ಅವರು ಕಳೆದ ಲಾಕ್ ಡೌನ್ ಸಮಯದಲ್ಲಿ ರೈತರು ಬೆಳೆದ ತರಕಾರಿಯನ್ನು ಖರೀದಿಸಿ ಮನೆ ಮನೆಗೆ ವಿತ್ತಿರಿಸಿ ಈ ಸಲ ಲಾಕ್ ಡೌನ್ ದಲ್ಲಿ ಯಾದವಾಡ ಕೋವಿಡ್ ಆರೈಕೆ ಕೆಂದ್ರದಲ್ಲಿನ ಜನರಿಗೆ ಒಂದು ತಿಂಗಳವರಿಗಿನ್ನ ಉಪಹಾರದ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೇರೆದಿದಾರೆ ಎಂದರು.
ಈ ಸಮಯದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ಮಲಿಕಾರ್ಜು ಯಕ್ಸಂಬಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಸದಸ್ಯರಾದ ಶಿವು ಸಣ್ಣಕ್ಕಿ, ಐ.ಎಸ್.ಕೊಣ್ಣೂರ, ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಡಾ: ಭಾರತಿ ಖೋಣಿ, ಸತೀಶ ವಂಟಗೋಡಿ, ಬಸವರಾಜ ಬಿಲ್ಲಕುಂದಿ, ಬಸವರಾಜ ಯರಗಟ್ಟಿ, ಅಶೋಕ ಪೂಜೆರಿ, ಪಾಂಡು ದಾಸರ, ಪ್ರಕಾಶ ಬಿಸನಕೊಪ್ಪ,ಖೇದಾರಿ ಭಸ್ಮೆ, ಮಹಾಲಿಂಗ ಒಂಟಗೋಡಿ, ಕುಮಾರ ಗಿರಡ್ಡಿ ಮತ್ತಿತರು ಇದ್ದರು.