ಮೂಡಲಗಿ: ಮಾನವನ ಮನುಕುಲದ ಉಳುವಿಗೆ ಸ್ವಚ್ಚ ಪರಿಸರ ಅತಿ ಅವಶ್ಯಕವಾಗಿದೆ ಎಂದು ರಾಜ್ಯ ಯುವ ಪ್ರಶಸ್ತಿ ವಿಜೇತ ಹಾಗೂ ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಹೇಳಿದರು. ಅವರು ಹಳ್ಳೂರ ಗ್ರಾಮದ ಶ್ರೀ
ಸಿದ್ದಾರೂಢ ಮಠದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮನ್ನು ಗಿಡಗಳನ್ನು ನೆಟ್ಟು ಅವುಗಳಿಗೆ ನೀರು ಹನಿಸುವ ಮೂಲಕ ಚಾಲನೆ ನೀಡೀ ಮಾತನಾಡುತ್ತಾ ಗೀಡಗಳನ್ನು ಮಕ್ಕಳಂತೆ ಪಾಲನೆ
ಪೋಷನೆ ಮಾಡಿ ವರ್ಷ ಪೂರ್ತಿ ಬೇಳೆಸುವ ಸಂಕಲ್ಪ ಮಾಡಬೇಕು. ಹಸಿರೆ ಉಸೀರು ಎನ್ನುವ ನುಡಿಯಂತೆ ಸುಂದರ ಪರಿಸರಕ್ಕಾಗಿ ಮನೆಗೊಂದು ಮರ ಉರಿಗೊಂದು ವಣ ಮಾಡಬೇಕೆಂದು ಯುವಕರಿಗೆ ಕರೆ ನೀಡಿದರು. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ಪರಿಸರವನ್ನು
ಮಲಿನಗೊಳಿಸದೆ, ದುರ್ಬಳಕೆ ಮಾಡದೆ ನೈಸರ್ಗಿಕ ಪ್ರಕೃತಿಯನ್ನು ಸಂರಕ್ಷಿಸೋಣ ಎಂದು ನುಡಿದರು. ಯುವ ಬಳಗ ಸೇರಿ ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಅವರ ಮುಂದಾಳತ್ವದಲ್ಲಿ ಗಿಡಗಳನ್ನು ನೆಡಲಾಯಿತು. ಆಕಸ್ಮಿಕವಾಗಿ ಒಂದು ಗಿಡ ಕಡಿದರೆ ಅದರ ಪರ್ಯಾಯವಾಗಿ ಹತ್ತು ಗಿಡಗಳ ನೆಡುವ
ಕಾರ್ಯ ಆಗಬೆಕು ಎಂದು ಯುವ ಬಳಗದ ಆಶಯ. ಬಸವರಾಜ ತೇರದಾಳ ಆನಂದ ಮೂಡಲಗಿ ಪ್ರವಿಣ ಮಾವರಕರ ಸೋಮು ಪಾಲಬಾಂವಿ ಮುತ್ತು ಕಲ್ಲೋಳಿ ಸಿದ್ದಯ್ಯಾ ಮಠಪತ್ತಿ ಹಾಗೂ ಪುಟ್ಟ ಹುಡುಗರು ಇದ್ದರು.