Breaking News
Home / Recent Posts / ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ

ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ

Spread the love

ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ

“ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ”
ವೆಂಬಂತೆ ಶಿವಾಪೂರ(ಹ) ಗ್ರಾಮದಲ್ಲಿ ನೆಲೆಸಿದ್ದ  ಆಧ್ಯಾತ್ಮ ಜೀವಿಗಳು ವಾಸ್ತು ತಜ್ಞರು ದೇವಿ ಆರಾಧಕರು ಆದಂತಹ ಶ್ರೀ ಮಲ್ಲಿಕಾರ್ಜುನ ಶರಣರು ಬಸವಾಶ್ರಮ (ಮಲ್ಲಪ್ಪ ವೆಂಕಪ್ಪ ಹೂಗಾರ, ಹೂಲಿಕಟ್ಟಿ, ಶಿವಾಪೂರ(ಹ) ಇವರು ಶಿವಾಧೀನರಾಗುವದರೊಂದಿಗೆ ಪುರದ ಪುಣ್ಯವೇ ಪುರುಷ ರೂಪದಿಂದ ಹೊರಟಂತೆ ಅಭಾಸವಾಯಿತು.
ಶ್ರೀಯುತರು ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಸುಸಂಸ್ಕೃತದ ಮನೆತನದ ಶರಣ ದಂಪತಿಗಳಾದ ಶ್ರೀ ವೆಂಕಪ್ಪ ಹೂಗಾರ ಹಾಗೂ ಸೋನವ್ವ ಹೂಗಾರ ಈ ದಂಪತಿಗಳ ಪುಣ್ಯ ಉದರದಲ್ಲಿ ದಿನಾಂಕ 01-11-1957 ರಂದು ಜನಿಸಿದ ಮಲ್ಲಿಕಾರ್ಜುನ ಶರಣರು. ಅವರ ಮನೆಯ ಸಂಪ್ರದಾಯದಂತೆ ಏಳು ಕೋಣಿಯ ಬಸವೇಶ್ವರನ ಪುಜಾರಿಗಳಾಗಿದ್ದು. ಅವರ ತಂದೆ ತಾಯಿಗಳು ಶರಣ ಪರಂಪರೆಯನ್ನು ಬೆಳಸಿಕೊಂಡು ಬಂದಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಮದಾಪೂರದಲ್ಲಿ ಮುಗಿಸಿ ಗುಲಬುರ್ಗಾ, ಕೆಂಬಾವಿ, ಸುರಪುರಗಳಲ್ಲಿ ಕೃಷ್ಣಾ ಮೇಲ್ದಂಡೆ ಕಾಲುವೆ ಇಲಾಖೆಯಲ್ಲಿ ಸೇವೆಯನ್ನು ನಿರ್ವಹಿಸಿ ಕೊನೆಗೆ ಆಧ್ಯ ತ್ಮದತ್ತ ಮುಖ ಮಾಡಿದರು‌. ಇವರಪ್ರಾಪಂಚಿಕ ಜೀವನವು 12 ನೇ ಶತಮಾನದ ಬಸವಣ್ಣನವರ ಜೀವನವನ್ನು ನೆನಪಿಸುವಂತಿತ್ತು. ಇವರಿಗೆ ಸುಮಿತ್ರಾ ಮತ್ತು ಮಹಾದೇವಿ ಎಂಬ ಇವರು ಧರ್ಮಪತ್ನಿಯರು, ಚಿದಾನಂದ,ಜಗದೀಶ ಮತ್ತು ವಿವೇಕಾನಂದ ಹಾಗೂ ವಾಣಿ ಎಂಬ ಮಕ್ಕಳಿದ್ದಾರೆ. ಮಲ್ಲಪ್ಪ ಶರಣರು ಶ್ರೀಮನ್ ನಿಜಗುಣ ಶಿವಯೋಗಿಗಳು, ಹೇಳುವಂತೆ ಜಾಣನು ಲೌಖಿಕ,ಪಾರ ಮೊರ್ಥಗಳೆರಡನು ಕೂಡಿ ನಡೆಸುತಿನಿಂತು ಎಂಬಂತೆ ಇವರು ಪ್ರಾಪಂಚಿಕದಲ್ಲಿದ್ದರೂ ಪಾರಮಾರ್ಥಡೆಹೆಗೆ ಒಲವು ಹೋಂದಿದ್ದರು.


ಶ್ರೀ ಮಲ್ಲಪ್ಪ ಶರಣರು ಗೋಕಾಕ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಬಸವಾಶ್ರಮವನ್ನು ಪ್ರಾರಂಭಿಸಿ ಆ ಮೂಲಕ ಅಪಾರ ಭಕ್ತ ಜನರುಗಳನ್ನು ಗಳಿಸಿಕೊಂಡಿದ್ದರು. ಇವರು ಹೇಳುವ ಜೋತಿಷ್ಯ ಎಂದೂ ಸುಳ್ಳಾಡಿರಲಿಲ್ಲ. ವಾಸ್ತು ಸಲಹೆಗಾರರಾಗಿ ಅನೇಕ ಬಡಜನರ ಬಾಳನ್ನು ಬೆಳಗಿದ ಮಹಾನ್ ಪುರುಷರು ಜೊತೆಗೆ ದೇವಿ ಆರಾಧಕರಾಗಿ ನವರಾತ್ರಿಯಲ್ಲಿ ದೇವಿಪಾರಾಯಣ ನಿಮಿತ್ಯ ಮಾಡಿಕೊಂಡು ಹಲವಾರು ಶರಣರು,ಮಾಹಾತ್ಮರನ್ನು ಕರೆಸಿ ಸತ್ಸಂಗ ನಡೆಸುವ ಮೂಲಕ ಭಕ್ತ ಜನರಿಗೆ ಆಧ್ಯಾತ್ಮದಲ್ಲಿ ಅನುಭವವನ್ನು ಉಣಿಸುತ್ತಿದ್ದರು ಜೊತೆಗೆ ದಾಸೋಹದಲ್ಲಿ ಸದಾ ಮುಂದಿದ್ದ ಪೂಜ್ಯರು ಇಚ್ಛಾಭೋಜನವನ್ನು ನೇರವೇರಿರುತ್ತಿದ್ದರು ಶ್ರಾವಣ ಮಾಸದಲ್ಲಿ ಭಜನೆ, ಆತ್ಮಪುರಾಣ, ಸಿದ್ದಾಂತ ಶಿಖಾಮಣಿ, ಉಪನಿಷತ್ತ ಮುಂತಾದ ವಿಷಯಗಳ ಪ್ರವಚನಗಳನ್ನು ನೀಡುವ ಮೂಲಕ ಅಪಾರ ಭಕ್ತರನ್ನು ಹೊಂದಿದ್ದರು.


ಶಿವಾಪುರ ಗ್ರಾಮದ ಸುತ್ತಮುತ್ತಲಿನವೆಲ್ಲ ಹಳ್ಳಿಗಳಲ್ಲಿ ವಾಕ್ ಸಿದ್ದಿ ಪುರುಷರು ಎಂಬ ಕಿರ್ತಿಗೆ  ಪಾತ್ರರಾಗಿದ್ದರು. ಯಾವಾಗಲೂ ಸರಳ ಸಜ್ಜನಿಕ ಜೀವನ ಸಾಗಿಸುತ್ತ ಸಮಾಜದಲ್ಲಿ ಅಧ್ಯಾತ್ಮ ಪರಂಪರೆಯನ್ನು ಬೆಳೆಸಿದ ಸಾಕಾರ ಮೂರ್ತಿ ಎಂದರೆ ತಪ್ಪಾಗದು. ಶ್ರೀಮಲ್ಲಪ್ಪ ಶರಣರು ಯಾವುದೇ ದೊಡ್ಡಸ್ತಕೆಗೆ ಆಸೆ ಪಡೆದ ಎಲ್ಲರೊಳೊಂದಾಗಿ ಬದಕುವ ಅವರ ಜೀವನ ಎಲ್ಲರಿಗೂ ಆದರ್ಶಮಯ. ಜೊತೆಗೆ ದೈವಿಕ ಕ್ರಿಯಾ     ವಿಧಿಗಳನ್ನು ನೆರವೇರಿಸುತ್ತೆ ಎಲ್ಲ ಶರಣರ ಒಡನಾಟದೊಂದಿಗೆ ಅವರ ಮನೆಯಲ್ಲಿ ನಿತ್ಯವೂ ಜ್ಞಾನದಾಸೋಹದೋಂದಿಗೆ ಅನ್ನದಾಸೋಹವು ನಡೆದಿತ್ತೆನ್ನುವುದು ಪ್ರಶಂಸನೀಯ.
ಶ್ರೀಮಲ್ಲಿಕಾರ್ಜು ಶರಣರು ನಡೆದು ಬಂದದಾರಿ ಅವರ ಬದುಕು ಎಲ್ಲರಿಗೂ ಮಾದರಿಯವಾಗಿತ್ತು ಬದವ ಬಲ್ಲಿದ ಯನ್ನದೆ ಯಾವುದೇ ಜಾತಿಭೇದ,ಧರ್ಮ ಬೇದ ಮಾಡದೇ ಎಲ್ಲಿ ಸಮುಹದ ಮಾಹಾತ್ಮರನು ಸಹಭಾವದೊಂದಿಗೆ ಸ್ವೀಕರಿಸಿ ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದರು. ಇಂತಹ ಪೂಜ್ಯರು ಅಪಾರ ಪ್ರಮಾಣದ ಭಕ್ತ ಜನರನ್ನು ಹೊಂದಿದ್ದು ಇವರು ದಿನಾಂಕ 02-06-2021 ಬುಧವಾರ ದಿವಸ ಲಿಂಗೈಕ್ಯರಾದರು ಎಂಬ ಸುದ್ದಿಯು ಎಲ್ಲ ಭಕ್ತ ಜನರಿಗೆ ಬರ ಸಿಡಿಲು ಬಡಿದಂತಾಯಿತು ಅಂತಹ ಮಾಹಾತ್ಮರ ಕುಟುಂಬವು ಆಧ್ಯಾತ್ಮಿಕ ಪರಂಪರೆಯಲ್ಲಿ ಬೆಳೆದು ಬಂದಿದ್ದು ಆ ಪರಂಪರೆಯನ್ನು ಅವರು ಸುಪುತ್ರರರು ಪಾಲಿಸುತ್ತಿದ್ದು ಅದು ಮುಂದುವರೆದು ಸದಾ ಕಾಲ ಪೂಜ್ಯರ ಕೃಪಾರ್ಶಿವಾದ ಎಲ್ಲರಿಗೂ ಸಿಗಲೆಂದು ಪ್ರಾಧಿಸುತ್ತ “ಶಿವ ಪುರದ ಪುಣ್ಯವು ಪುರುಷ ರೂಪದಿಂದ ಪೋಗುತಿದೆ” ಎಂಬ ಮಾತಿನಂತೆ ಎಲ್ಲರಿಗೂ ನೋವಾಗಿರುವದು ವಿಷಾದದ ಸಂಗತಿ.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ