ಮಾನವೀಯತೆ ಮೆರೆದ ಪತ್ರಕರ್ತ, ಕೋವಿಡ್ ವಾರ್‍ರೂಮ್ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಊಟದ ವ್ಯವಸ್ಥೆ
ಮೂಡಲಗಿ: ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಎಡಬಿಡದೆ ಕಾರ್ಯ ನಿರ್ವಹಿಸುತ್ತಿರುವ ತಹಶೀಲದಾರ ಕಚೇರಿ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಇಲ್ಲಿಯ ಯುವ ಪತ್ರಕರ್ತ ಭಗವಂತ ಉಪ್ಪಾರ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.
ಬುಧವಾರ ಮಧ್ಯಾಹ್ನ ಕಚೇರಿ ಆವರಣದಲ್ಲಿ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಅಹಾರ ವಿತರಿಸಿ ಮಾತನಾಡಿದ ಅವರು, ಈ ಲಾಕ್‍ಡೌನ ಸಮಯದಲ್ಲಿ ನಿತ್ಯ ಕಚೇರಿಗೆ ಬಂದು ಸಾರ್ವಜನಿಕ ಸೇವೆ ಒದಗಿಸುತ್ತಿರುವ ಮತ್ತು ಇಲ್ಲಿಯ ಕೋವಿಡ್ ವಾರ್‍ರೂಮ್‍ನಿಂದ ಕೊರೋನಾಗೆ ಸಂಭಂದಪಟ್ಟ ಸಮಗ್ರ ಮಾಹಿತಿ ಒದಗಿಸುತ್ತಿರುವ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ತಹಶೀಲದಾರ ಡಿ ಜೆ ಮಹಾತ, ಗ್ರೇಡ2 ತಹಶೀಲದಾರ ಎಸ್ ಎ ಬಬಲಿ, ತಾಲೂಕಾ ಶಿರಸ್ತೆದಾರ ಪರುಶುರಾಮ ನಾಯಿಕ ಸಿಬ್ಬಂದಿ ವರ್ಗ ಹಾಗೂ ಹಿರಿಯ ಪತ್ರಕರ್ತ ಎಲ್ ಸಿ ಗಾಡವಿ ಸೇರಿದಂತೆ ಅನೇಕ ಪತ್ರಕರ್ತರು ಇದ್ದರು.