Breaking News
Home / Recent Posts / ಬಡ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಅರವಿಂದ ದಳವಾಯಿ

ಬಡ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಅರವಿಂದ ದಳವಾಯಿ

Spread the love

ಬಡ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ ಅರವಿಂದ ದಳವಾಯಿ

ಮೂಡಲಗಿ: .ಪಟ್ಟಣದ ಎಪಿಎಮ್‍ಸಿ ಆವರಣದಲ್ಲಿ ಕಾಂಗ್ರೆಸ ಮುಖಂಡ ಅರವಿಂದ ದಳವಾಯಿ ಅವರು ತಮ್ಮ ಸ್ವಂತ ಖರ್ಚಿನಿಂದ ಕಾಂಗ್ರೆಸ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕೂಲಿ ಕಾರ್ಮಿಕರಿಗೆ ಹಾಗೂ ಬಡ ಮಹಿಳೆಯರಿಗೆ ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡಿದರು.
ಈ ವೇಳೆಯಲ್ಲಿ ಮಾತನಾಡಿದ ಅವರು, ಕೊರೋನಾ ಮಹಾಮಾರಿಯಿಂದ ಜಗತ್ತೆ ತಲ್ಲಣಗೊಂಡಿದ್ದು ಎರಡನೆ ಅಲೆಯ ಲಾಕ್‍ಡೌನ್ ಸಮಯದಲ್ಲಿ ನಿತ್ಯ ದುಡಿಮೆ ನಂಬಿ ಜೀವನ ಸಾಗಿಸುವ ಬಡ ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳಲಿಕ್ಕಾಗದೆ ಪರದಾಡುವಂತಹ ಇಂತಹ ಕಷ್ಟಕಾಲದಲ್ಲಿ ಅವರಿಗೆ ನೆರವು ನೀಡುವುದು ಅಗತ್ಯವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವುಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಪಟ್ಟಣದ ವಿವಿಧ ವಾರ್ಡುಗಳಲ್ಲಿಯ ಹಾಗೂ ಅರಭಾವಿ ಕ್ಷೇತ್ರದ ವಿವಿಧ ಗಾಮಗಳಿಗೆ ತೆರಳಿ ಅಲ್ಲಿನ ಬಡವರಿಗೆ ದಿನಸಿ ಕಿಟ್ ವಿತರಿಸುವುದಾಗಿ ಹೇಳಿ, ಸೋಮವಾರದಿಂದ ಜಿಲ್ಲೆ ಅನ್‍ಲಾಕ್ ಆಗುತ್ತಿದೆ ಎಂದು ಮೈಮರೆಯದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಜಾಗರೂಕರಾಗಿರಲು ಕೋರಿದರು.
ಹಿರಿಯ ಕಾಂಗ್ರೆಸ ಮುಖಂಡ ಎಸ್ ಆರ್ ಸೋನವಾಲ್ಕರ,ಅರಭಾವಿ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸಲೀಂ ಇನಾಮದಾರ ಮಾತನಾಡಿದರು.
ಕಾಂಗ್ರೆಸ ಕಾರ್ಯಕರ್ತರಾದ ಬಸವರಾಜ ಪಾಟೀಲ, ಹಸನಸಾಬ ಮುಗುಟಖಾನ, ವಿರುಪಾಕ್ಷಿ ಮುಗುಳಖೋಡ, ಶರೀಫ್ ಪಟೇಲ, ಗಿರೀಶ ಕರಡಿ, ಮಲೀಕ ಕಳ್ಳಿಮನಿ, ರವಿ ಮೂಡಲಗಿ, ರಾಜು ಅತ್ತಾರ, ಚನ್ನಮಲಯ್ಯಾ ನಿರ್ವಾನಿ, ಇರ್ಶಾದ ಪೈಲವಾನ, ರಾಬರ್ಟ ಮೂಡಲಗಿ, ಮದಾರಸಾಬ ಜಕಾತಿ, ಸಾಹೇಬ ಪೀರಜಾದೆ, ಮಲ್ಲಿಕಾರ್ಜುನ ಕಬ್ಬೂರ, ಮೈನೂದ್ದೀನ ಬಳಿಗಾರ, ರಮಜಾನ ಬಿಜಾಪೂರ, ರಾಹುಲ ಕಾಂಬಳೆ, ಕುಮಾರ ದೊಡಮನಿ  ಹಾಗೂ  ಕಾರ್ಯಕರ್ತರು ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ