ಮೂಡಲಗಿ : ಮಾನವೀತೆಯ ದೃಷ್ಟಿಯಲ್ಲಿ ಬಡ ಜನರ ಸಂಕಷ್ಟದ ಸಮಯದಲ್ಲಿ ಸ್ವಂದಿಸುವ ಕೆಲಸವನ್ನು ಮಾಡುವುದು ಮಾನವ ಧರ್ಮ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಶನಿವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಮೂಡಲಗಿ ಪಟ್ಟಣದ ಬಡ ಕುಟಂಬಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡ ಅವರು, ಲಾಕ್‍ಡೌನ್‍ನಿಂದ ಅನೇಕ ವರ್ಗದ ಕಾರ್ಮಿಕರು, ದಿನಗೂಲಿ ನೌಕರರು ಕೆಲಸವಿಲ್ಲದೇ ಮನೆಯಲ್ಲಿ ಉಳಿಯುವಂತಾಗಿದೆ. ಅವರ ಕುಟುಂಬಗಳ ನಿರ್ವಹಣೆ ಮಾಡಲು ಅಶಕ್ತರಾಗಿರುವ ಸ್ಥಿತಿಯಲ್ಲಿದ್ದಾರೆ. ಅಂತಹ ವರ್ಗದ ಜನರಿಗೆ ಅನುಕೂಲವಾಗಲೆಂದು ಆಹಾರ ಕಿಟ್ ನೀಡಲು ಯೋಜನೆಯನ್ನು ರೂಪಿಸಿರುವ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಕರ್ನಾಟಕದ ಜನತೆಗೆ ಸಂಕಷ್ಟಗಳು ಎದುರಾದ ಸಂದರ್ಭದಲ್ಲಿ ಧರ್ಮಸ್ಥಳ ಯೋಜನೆಯ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಒಳ್ಳೆಯ ಕಾರ್ಯಗಳನ್ನು ಮಾಡಿತ್ತಿದೆ. ಈ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸಟೆಂಟರ್‍ಗಳನ್ನು ನೀಡಲಾಗಿದೆ. ಬಡ ಕುಟುಂಬಗಳಿಗೆ, ನಿರ್ಗತಿಕತು, ಕೊರೋನಾ ವಾರಿಯರ್ಸಗಳಿಗೆ ಆಹಾರ ಕಿಟ್ ವಿತರಿಸುವ ಮೂಲಕ ಜನರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ನಿಮ್ಮ ಜೊತೆಯಲ್ಲಿ ಇದೆ ಎನ್ನುವ ಮೂಲಕ ಧೈರ್ಯ ತುಂಬುವಂತ ಕಾರ್ಯ ಮಾಡುತ್ತಿದೆ ಎಂದ ಹೇಳಿದರು.
ಎಮ್‍ಇಎಸ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಆರ್ ಎ ಶಾಸ್ತ್ರಿಮಠ, ಮಂಜುನಾಥ ಸೈನಿಕ ತರಬೇತಿ ಸಂಸ್ಥೆ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ, ಮಾತನಾಡಿ, ಬಡ ಕುಟುಂಬಗಳಿಗೆ, ಧರ್ಮಸ್ಥಳ ಯೋಜನೆಯನಿಂದ ನಿರ್ಗತಿಕತು, ಕೊರೋನಾ ವಾರಿಯರ್ಸಗಳಿಗೆ ಆಹಾರ ಕಿಟ್ ನೀಡುವ ಕಾರ್ಯ ಶ್ರೇಷ್ಠವಾದದ್ದು ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಸುರೇಶ ಶಿವಾಪೂರ, ಮೂಡಲಗಿ ವಯಲ ಯೋಜನಾಧಿಕಾರಿ ದೇವರಾಜ್, ಕೇಶವ ದೇವಾಂಗ, ಜನಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಉದಯ ಎನ್ ಗೌಡ, ಮೂಡಲಗಿ ವಲಯ ಮೇಲ್ವಿಚಾರಕಿ ಮಾನಸಿ ಪಾಟೀಲ ಉಪಸ್ಥಿತಿದ್ದರು.
Home / Recent Posts / ಬಡ ಜನರ ಸಂಕಷ್ಟದ ಸಮಯದಲ್ಲಿ ಸ್ವಂದಿಸುವ ಕೆಲಸವನ್ನು ಮಾಡುವುದು ಮಾನವ ಧರ್ಮ – ಅಜೀತ ಮನ್ನಿಕೇರಿ
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …