Breaking News
Home / Recent Posts / ಪತ್ರಕರ್ತರಿಗೆ ಕಾಂಗ್ರೆಸ ಮುಖಂಡ ಲಕ್ಕಣ್ಣ ಸವಸುದ್ದಿ ದಿನಸಿ ಕಿಟ್ ವಿತರಣೆ

ಪತ್ರಕರ್ತರಿಗೆ ಕಾಂಗ್ರೆಸ ಮುಖಂಡ ಲಕ್ಕಣ್ಣ ಸವಸುದ್ದಿ ದಿನಸಿ ಕಿಟ್ ವಿತರಣೆ

Spread the love


ಮೂಡಲಗಿ: ಆರ್ಥಿಕವಾಗಿ ಪತ್ರಕರ್ತರು ಸಂಕಷ್ಟದಲ್ಲಿದ್ದರೂ ಕೊರೋನಾ ಮಹಾಮಾರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಅಪಾಯ ಲೆಕ್ಕಿಸದೆ ತಮ್ಮ ಜೀವದ ಹಂಗು ತೊರೆದು ಜನತೆಗೆ ಸುದ್ದಿ ತಲುಪಿಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಪ್ರಂಟ್‍ಲೈನ್ ವಾರಿಯರ್ಸ್ ಪತ್ರಕರ್ತರ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಾಂಗ್ರೆಸ ಮುಖಂಡ ಲಕ್ಕಣ್ಣ ಸವಸುದ್ದಿ ಹೇಳಿದರು.
ಪ್ರೆಸ್ ಕ್ಲಬ್ ಕಾರ್ಯಾಲಯದಲ್ಲಿ ಪತ್ರಕರ್ತರಿಗೆ ತಮ್ಮ ಸ್ವಂತ ಖರ್ಚಿನಿಂದ ವಿಷೇಷ ದಿನಸಿ ಕಿಟ್ಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅರಭಾವಿ ಕ್ಷೇತ್ರದ ವಿವಿಧ ಗಾಮಗಳಲ್ಲಿಯ ಬಡವರಿಗೂ ದಿನಸಿ ಕಿಟ್ ವಿತರಿಸುವುದಾಗಿ ಹೇಳಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪತ್ರಕರ್ತರು ಇಂದು ಕೋವಿಡ್ ಸಂದರ್ಭದಲ್ಲಿ ತ್ರೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಸರಕಾರ ಅವರಿಗೆ ಮಾಸಿಕ ರೂಪದಲ್ಲಿ ಗೌರವ ಧನ ಒದಗಿಸಬೇಕು. ಸಧ್ಯದಲ್ಲಿ ಇದೇ ವಿಷಯವಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೋವಿಡ್ ಮಾರ್ಗಸೂಚಿಯೊಂದಿಗೆ ಎಲ್ಲ ಪತ್ರಕರ್ತರಿಗೆ ವಿವಿಧ ಸೌಲಬ್ಯ ನೀಡುವಂತೆ ಉಪವಾಸ ಸತ್ಯಾಗ್ರಹ,ಹೋರಾಟ ಹಮ್ಮಿಕೊಳ್ಳುವುದಾಗಿ ಹೇಳಿದರು.
ಅರಭಾವಿ ಬ್ಲಾಕ್ ಕಾಂಗ್ರೆಸ ಕಾರ್ಯಾಧ್ಯಕ್ಷ ಗುರುನಾಥ ಗಂಗನ್ನವರ ಮಾತನಾಡಿ, ಪತ್ರಕರ್ತರು ಕೋವಿಡ್ ಸಂದರ್ಭದಲ್ಲಿ ಆತಂಕದ ದಿನಗಳನ್ನು ಎದರಿಸುತ್ತಿದ್ದಾರೆ. ಸರ್ಕಾರ ಕೋವಿಡ್ ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಗುರುತಿಸಿದೆ. ಆದರೆ ಸರ್ಕಾರ ಅವರಿಗೆ ಹೇಳಿಕೊಳ್ಳುವಂತಹ ಯಾವುದೆ ಸೌಲಭ್ಯಗಳನ್ನು ನೀಡಿಲ್ಲ ಅವರಿಗೆ ಆರ್ಥೀಕ ನೆರವು ನೀಡಬೇಕಾದ ಅಗತ್ಯವಿದೆ ಎಂದರು.
ಪ್ರೆಸ್‍ಕ್ಲಬ್ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಮಾತನಾಡಿ, ಸಂಕಷ್ಟಸಲ್ಲಿರುವ ಪತ್ರಕರ್ತರ ನೆರವಿಗೆ ನಿಂತು ಎಲ್ಲ ಪತ್ರಕರ್ತರಿಗೂ ವಿವಿಧ ಸೌಲಬ್ಯ ದೊರಕಿಸುವ ನಿಟ್ಟಿನಲ್ಲಿ ಸರಕಾರವನ್ನು ಒತ್ತಾಯಿಸುವ ಅವರ ಹೋರಾಟ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಶಿವಾನಂದ ಮಡಿವಾಳರ, ಸುಭಾಸ ಲೋಕನ್ನವರ, ಶ್ರೀಕಾಂತ ದಡ್ಡುಗೋಳ, ಇಜಾಜ ಕೊಟ್ಟಲಗಿ ಇನ್ನಿತರರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ