ಆಶ್ರಯ ಮನೆಗಳಿಗೆ ದಾರಿ ನೀಡುವಂತೆ ಮನವಿ
ಮೂಡಲಗಿ : ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಪಂ ವ್ಯಾಪ್ತಿಯ ಪರಿಶಿಷ್ಟ ಜಾತಿ ಜನರು ವಾಸಿಸುವಂತಹ ಜನತಾ ಪ್ಲಾಟ್‍ದಲ್ಲಿ ವಾಸಿಸುವ ಏಂಟು ಕುಟುಂಬಳಿಗೆ ದಿನಿತ್ಯ ಹಾದಾಡಲು ದಾರಿ ಮಾಡಿಕೊಂಡುವಂತೆ ಶುಕ್ರವಾರದಂದು ಜಯ ಕರ್ನಾಟಕ ಸಂಘಟನೆಯ ಮೂಡಲಗಿ ತಾಲೂಕಾ ಘಟಕದಿಂದ ತಾಲೂಕಾ ಕಾರ್ಯನಿರ್ವಾಹಕಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯತ ಅಭಿವೃದ್ಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘಟನೆಯ ತಾಲೂಕಾ ಅಧ್ಯಕ್ಷ ಲಕ್ಷ್ಮಣ ಮಳ್ಳಿಗೇರಿ ಮಾತನಾಡಿ, ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಜನತಾ ಪ್ಲಾಟ್‍ದಲ್ಲಿ ವಾಸಿಸುತ್ತಿರುವ ಏಂಟು ಕುಟುಂಬಗಳಿಗೆ ದಿನಿನಿತ್ಯ ಹಾದಾಡಲು ದಾರಿ ಇಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದಿಂದ ನಿರ್ಮಾಣವಾದ ಮನೆಗಳಿಗೆ ದಾರಿ ಹಾಗೂ ಮೂಲಭೂತ ಸೌಕರ್ಯಗಳು ಇರಬೇಕು ಆದರೆ ಅಲ್ಲಿ ವಾಸಿಸುತ್ತಿರುವ ಶ್ರೀಶೈಲ ಗೌರನ್ನವರ, ಮಲ್ಲವ್ವ ಗುಡಿ, ಮಲ್ಲಿಕ್ ನದಾಫ್ ಅನಸವ್ವ ನಾವಿ, ಗೋಪಾಲ ಮಳಲಿ, ಗಂಗಪ್ಪ ಕಲ್ಲೋಳಿ, ಪ್ರದೀಪ ಕಲಾಲ, ಲಕ್ಕವ್ವ ತಪಸಿ ಸೇರಿದಂತೆ ಏಂಟು ಕುಟುಂಬಗಳಿಗೆ ದಾರಿ ಇಲ್ಲವೇ ಇಲ್ಲ. ಆದರಿಂದ ಆ ಕುಟುಂಬಗಳಿಗೆ 15 ದಿನಗೊಳಗಾಗಿ ದಾರಿ ಮಾಡಿಕೊಂಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಜಾನ್ ತಲವಾರ, ಗೋಕಾಕ ತಾಲೂಕಾಧ್ಯಕ್ಷ ಅಜೀಜ ಮೋಕಾಸಿ, ಶ್ರೀಶೈಲ ಗೌರನ್ನವರ, ಮುಮಾರಕ್ ಮಾಳೆಕುಂದರಿ, ಸುನೀಲ ಗಸ್ತಿ, ಶಬ್ಬೀರ ಪೈಲ್ವಾನ್, ರಫೀಕ್ ನಂದಗಡಕರ, ಹಣಮಂತ ಹೂಗಾರ, ಹೊಳೆಪ್ಪ ಬೆಳಗಾವಿ, ಅನೀಲ ನಾಗನ್ನವರ, ಗಣೇಶ ನಾಗನ್ನವರ ಹಾಗೂ ಆಶ್ರಯ ಮನೆಗಳಲ್ಲಿ ವಾಸಿಸುತ್ತಿರುವ ಮಹಿಳೆಯರು ಇದ್ದರು.