ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಡಾ. ಸಿದ್ದಲಿಂಗಯ್ಯ ಕಲಾ ಮತ್ತು ಸಾಮಾಜಿಕ ಸಾಂಸ್ಕøತಿಕ ಸೇವಾ ಪ್ರತಿಷ್ಠಾನ ಅಧ್ಯಕ್ಷ ಮಂಜುಳಾ ಹಿರೇಮಠ ಅವರು ಪೌರ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು.
ಪೌರ ಕಾರ್ಮಿಕರ ಸೇವೆಯು ಅನನ್ಯವಾದದ್ದು
ಮೂಡಲಗಿ: ‘ಕೋವಿಡ್ ಎರಡನೇ ದುರಿತ ಅವಧಿಯಲ್ಲಿ ಪಟ್ಟಣದ ನೈರ್ಮಲ್ಯ ಕಾಯುವಲ್ಲಿ ಪೌರ ಕಾರ್ಮಿಕರ ಸೇವೆಯು ಅನನ್ಯವಾಗಿದೆ’ ಎಂದು ಡಾ. ಸಿದ್ದಲಿಂಗಯ್ಯ ಕಲಾ ಮತ್ತು ಸಾಮಾಜಿಕ ಸಾಂಸ್ಕøತಿಕ ಸೇವಾ ಪ್ರತಿಷ್ಠಾನ ಅಧ್ಯಕ್ಷ ಮಂಜುಳಾ ಹಿರೇಮಠ ಹೇಳಿದರು.
ಇಲ್ಲಿಯ ಪಟ್ಟಣ ಪಂಚಾಯ್ತಿಯಲ್ಲಿ ಸಂಘದಿಂದ ಪೌರ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತಿರಿಸಿ ಮಾತನಾಡಿದ ಅವರು ಸರ್ಕಾರದ ಆಡಳಿತದೊಂದಿಗೆ ಸಮುದಾಯ ಜನರು ಸ್ಪಂದಿಸಿದರೆ ಎಂಥ ಕಷ್ಟಗಳನ್ನು ಎದುರಿಸಲು ಸಾಧ್ಯ ಎಂದರು.
ಮುಖ್ಯಾಧಿಕಾರಿ ಅರುಣಕುಮಾರ, ಹಿರಿಯರಾದ ಶಂಕರ ಬೆಳಕೂಡ, ಸಂಘದ ಸದಸ್ಯರಾಧ ಈರಣ್ಣ ಮುನೋಳಿಮಠ, ರಾಜು ಹಿರೇಮಠ, ಮೃತ್ಯುಂಜಯ ಹಿರೇಮಠ, ಕೆಂಪಣ್ಣ ಮಕ್ಕಳಗೇರಿ, ಸಿದ್ಧೇಶ್ವರ ಹಿರೇಮಠ, ಮಹಾದೇವ ಮದಬಾವಿ ಹಾಗೂ ಪಟ್ಟಣ ಪಂಚಾಯ್ತಿಯ ಸಿಬ್ಬಂದಿಯವರು ಭಾಗವಹಿಸಿದ್ದರು.