ಗುಜನಟ್ಟಿ ಹಾಗೂ ಜೊಕಾನಟ್ಟಿ ಗ್ರಾಮದಲ್ಲಿ ಜಲ್ ಜೀವನ ಮೀಷನ್ ಯೋಜನೆಗೆ ಚಾಲನೆ
ಮೂಡಲಗಿ: ತಾಲೂಕಿನ ಗುಜನಟ್ಟಿ ಹಾಗೂ ಜೊಕಾನಟ್ಟಿ ಗ್ರಾಮದಲ್ಲಿ ಜಲ್ ಜೀವನ ಮೀಷನ್ ಯೋಜನೆಯಡಿಯಲ್ಲಿ 2.52 ಕೋಟಿ ರೂ, ಮೊತ್ತದ ಕುಡಿಯುವ ನೀರಿನ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಿಂಗಪ್ಪ ಕುರುಬೇಟ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಸಿದ್ಲಿಂಗಪ್ಪ ಕಂಬಳಿ, ಕೃಷ್ಣಪ್ಪ ಬಂಡ್ರೋಳ್ಳಿ, ಭೀಮಶಿ ಮೋಖಾಶಿ, ಬಬ್ರುವಾಹನ ಬಂಡ್ರೋಳ್ಳಿ, ಕುಬೇಂದ್ರ ತೇಗಿ, ಲಕ್ಷ್ಮಣ ಬಂಡ್ರೋಳ್ಳಿ, ರಾಮಪ್ಪ ಅರಭಾಂವಿ, ಸಿದ್ಧಪ್ಪ ಕಂಬಳಿ, ಗುಜನಟ್ಟಿ ಗ್ರಾ.ಪಂ ಸದಸ್ಯರಾದ ಮುತ್ತೆಪ್ಪ ಗುಜನಟ್ಟಿ, ಕಲ್ಲಪ್ಪ ಮುಕ್ಕನವರ, ಲಕ್ಷ್ಮಣ ಕಂಬಳಿ, ಬಸಪ್ಪ ನಿಡಸೋಸಿ,ತುಕಾರಾಮ ದೊಡಶಿವಪ್ಪಗೋಳ, ಭೀಮಶಿ ಮಾದರ, ಬಸವರಾಜ ಬಂಡ್ರೋಳ್ಳಿ, ಗ್ರಾಮಿಣ ಕುಡಿಯುವ ನೀರಿನ ಯೋಜನೆ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಐ.ಎಮ್.ದಪೆದಾರ, ತಾ.ಪಂ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನವರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರವಿ ಮರೆನ್ನವರ ಹಾಗೂ ಗ್ರಾಮಸ್ಥರು ಇದ್ದರು.