ಮನೆಯಲ್ಲೆ ಬಕ್ರೀದ್ ಆಚರಿಸಿ
ಮೂಡಲಗಿ: ತ್ಯಾಗ,ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಈ ಬಾರಿಯೂ ಸರಳವಾಗಿ ಮನೆಯಲ್ಲೆ ಸರಳವಾಗಿ ಆಚರಿಸಬೇಕೆಂದು ಸಿಪಿಐ ವೆಂಕಟೇಶ ಮುರನಾಳ ಹೇಳಿದರು.
ಶನಿವಾರದಂದು ಪೋಲಿಸ್ ಠಾಣೆಯಲ್ಲಿ ಕರೆದ ಬಕ್ರೀದ್ ಹಬ್ಬದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಕೊರೋನಾ 3ನೇ ಅಲೆಯ ಭೀತಿ ಇರುವುದರಿಂದ ಹಾಗೂ ಜನತೆಯ ಆರೋಗ್ಯ ಹಿತದೃಷ್ಟಿಯಿಂದ ಸರಕಾರದ ಕೋವಿಡ್ ನಿಯಮಗಳನ್ನು ಎಲ್ಲರೂ ಪಾಲಿಸುವುದು ಅನಿವಾರ್ಯ ಹಾಗೂ ಜವಾಬ್ದಾರಿಯೂ ಆಗಿದೆ ಕಾರಣ ಮುಸ್ಲಿಮ ಬಾಂಧವರು ಸಾಮೂಹಿಕ ಪ್ರಾರ್ಥನೆಗಾಗಿ ಈದ್ಗಾ ಮೈದಾನಕ್ಕೆ ತೆರಳದೆ ತಮಗೆ ಹತ್ತಿರವಿರುವ ಪ್ರಾರ್ಥನಾ ಮಂದಿರದಲ್ಲಿ 50 ಜನರ ಬ್ಯಾಚ ಮಾಡಿ ಸಾಮಾಜಿಕ ಅಂತರ ಕಾಪಾಡಿ ಮಾರ್ಕಿಂಗ್ ವ್ಯವಸ್ಥೆ ಮಾಡಿರುವ ಸ್ಥಳದಲ್ಲಿ ಅಥವಾ ತಮ್ಮ ಮನೆಗಳಲ್ಲೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕೆಂದರು.
ಪಿಎಸೈ ಎಚ್‍ವೈ ಬಾಲದಂಡಿ, ಮೌಲಾನಾ ಅಮೀರಹಮ್ಜಾ ಥರಥರಿ,ದಲಿತ ಮುಖಂಡ ರಮೇಶ ಸಣ್ಣಕ್ಕಿ ಮಾತನಾಡಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಅಧ್ಯಕ್ಷ ಹನಮಂತ ಗುಡ್ಲಮನಿ, ಬಿಟಿಟಿ ಕಮಿಟಿ ಅಧ್ಯಕ್ಷ ಶರೀಫ್ ಪಟೇಲ್,ಮುಖಂಡರಾದ ಹಸನಸಾಬ ಮುಗುಟಖಾನ, ಅಜೀಜ ಡಾಂಗೆ, ಹುಸೇನಸಾಬ ಶೇಖ, ರವೀಂದ್ರ ಸಣ್ಣಕ್ಕಿ, ಶಾಬೂ ಸಣ್ಣಕ್ಕಿ, ಸಲೀಮ ಇನಾಮದಾರ, ಮಲೀಕ ಕಳ್ಳಿಮನಿ, ಅನ್ವರ ನದಾಫ್, ಚನ್ನಪ್ಪ ಅಥಣಿ, ಪುರಸಭೆ ಸದಸ್ಯರು, ಪೋಲಿಸ್ ಸಿಬ್ಬಂದಿ ವರ್ಗ ಹಾಗೂ ಅನೇಕ ಮುಖಂಡರು ಇದ್ದರು.
