Breaking News
Home / ತಾಲ್ಲೂಕು / ಹಳ್ಳೂರ ಗ್ರಾಪಂ ಪಿಡಿಒ ಮೇಲಿನ ಆಪಾದನೆ ಸತ್ಯಕ್ಕೆ ದೂರುವಾದದ್ದು

ಹಳ್ಳೂರ ಗ್ರಾಪಂ ಪಿಡಿಒ ಮೇಲಿನ ಆಪಾದನೆ ಸತ್ಯಕ್ಕೆ ದೂರುವಾದದ್ದು

Spread the love

ಹಳ್ಳೂರ ಗ್ರಾಪಂ ಪಿಡಿಒ ಮೇಲಿನ ಆಪಾದನೆ ಸತ್ಯಕ್ಕೆ ದೂರುವಾದದ್ದು

ಮೂಡಲಗಿ: ಸಮೀಪದ ಹಳ್ಳೂರ ಗ್ರಾಮ ಪಂಚಾಯತ ಪಿಡಿಒ ಅವರ ಮೇಲೆ ವೈಯಕ್ತಿಕ ದ್ವೇಷದಿಂದ ಇಲ್ಲಸಲ್ಲದ ಆಪಾದನೆ ಮಾಡುತ್ತಿರುವ ಎಲ್ಲ ಪತ್ರಿಕಾ ವರದಿಗಾರನೆಂದು ಹೇಳಿತ್ತಿರಯವ ಮುರಗೆಪ್ಪ ಮಾಲಗಾರ ಎಂಬುವವರು ವರದಿ ಮಾಡಿದ ವೈಬ್ ನ್ಯೂಸ್ ಮತ್ತು ಪತ್ರಿಕೆಗಳಲ್ಲಿಯ ವರದಿಗಳು ಸತ್ಯಕ್ಕೆ ದೂರವಾಗಿದೆ ಎಂದು ಹಳ್ಳೂರ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಸಾರ್ವಜನಿಕರು ಲಿಖಿತವಾಗಿ ಹೇಳಿಕೆ ನೀಡಿದ್ದಾರೆ.

ಹಿನ್ನಲೆ : ಗ್ರಾಮದ ಪೀರಸಾಬ್ ಗುಡಿಯ ಹತ್ತಿರ ಇವರು ಬೋರವೆಲ್ ಲಾಕ್ ಡೌನ್ ಸಂಬಂಧವಾಗಿ ರಿಪೇರಿಯಾಗದೆ ಬಂದ್ ಆಗಿತ್ತು. ಈ ಬಗ್ಗೆ ನಾವು ಪಿಡಿಒ ಅವರನ್ನು ಅನೇಕ ದಿನಗಳ ಹಿಂದೆ ವಿಚಾರಿಸಲಾಗಿ ಲಾಕ್ ಡೌನ್ ಸಂಬಧವಾಗಿ ಬೋರವೆಲ್ ರೀಪೆರಿ ಮಾಡುವವರು ಯಾರು ಲಭ್ಯವಿಲ್ಲದರಿಂದ ಬಂದ್ ಆಗಿದೆ. ಲಾಕ್ ಡೌನ್ ತೇರವುಗೊಳಿಸಿದ ಶೀಘ್ರದಲ್ಲಿ ರಿಪೇರಿ ಮಾಡುವುದಾಗಿ ಪಿಡಿಒ ಹೇಳಿದ್ದರು.

ವೈಯಕ್ತಿಕ ದ್ವೇಷಕ್ಕೆ ಕಾರಣ : ಸಾರ್ವಜನಿಕರಿಗಾಗಿ ನಿರ್ಮಿಸಿದ ಶಿವಶಂಕರ ನಗರದ ಮುರಗೆಪ್ಪ ಮಾಲಗಾರ ಇವರ ಮನೆಯ ಮುಂದೆ ಗ್ರಾಪಂ ದಿಂದ ಬೋರವೆಲ್ ನಿರ್ಮಿಸಲಾಗಿತ್ತು, ಆದರೆ ಮುರಗೆಪ್ಪ ಅವರು ತಮ್ಮ ಸ್ವಂತ ಹೊಲಗಳಿಗೆ ಆ ಬೋರವೆಲ್ ದಿಂದ ನೀರು ಹಾಯಿಸುತ್ತಿದ್ದು, ಅಲ್ಲಿಯ ಸ್ಥಳೀಯರು ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದಿರುವ ಹಿನ್ನಲೆ ನೀರು ಹಾಯಿಸುವುದಕ್ಕೆ ಕಡಿವಾಣ ಹಾಕಲಾಗಿತ್ತು. ಅದನ್ನೇ ವೈಯಕ್ತಿಕ ದ್ವೇಷವನ್ನು ಕಟ್ಟಿಕೊಂಡಿದ್ದಾನೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಎಲ್ಲ ಪತ್ರಿಕೆಗಳ ವರದಿಗಾರನೆಂದು ಹೇಳಿಕೊಳ್ಳುತ್ತಿರುವ ಮುರಗೆಪ್ಪ ಮಾಲಗಾರ ಎಂಬುವನ್ನು ಈ ಬೋರವೆಲ್ ಬಗ್ಗೆ ರೈತ ಸಂಘದ ಮುಖಂಡ ಬಾಳಯ್ಯ ಹೀರೆಮಠ ಎಂಬುವರ ಹೇಳಿಕೆ ಪಡೆದು ಬೋರವೆಲ್ ಪ್ರಾರಂಭಿಸಲು ಆಗ್ರಹಿಸಿದ್ದಾರೆ. ಈ ವಿಷಯ ದಿನಾಂಕ 2 ಮತ್ತು 3ರಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ರೈತ ಮುಖಂಡ ಕೇವಲ ಬೋರವೆಲ್ ಪ್ರಾರಂಭಿಸಲು ಆಗ್ರಹಿಸಿದ್ದು, ಪಿಡಿಒ ಕೆಲಸದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ, ಆದರೂ ಮುರಗೆಪ್ಪ ಮಾಲಗಾರ ಪಿಡಿಒ ಮೇಲಿನ ವೈಯಕ್ತಿ ದ್ವೇಷದಿಂದ ನಾನು ಪಿಡಿಒ ಅವರ ಕರ್ತವ್ಯದ ಬಗ್ಗೆ ಆರೋಪಿಸಿದ ಬಗ್ಗೆ ಬಂಬಿಸಿದ್ದಾನೆ ಇದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.

ರವಿವಾರದಂದು ಗ್ರಾಪಂ ಸಭಾ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸದಸ್ಯರು ಯಾವುದೇ ಪತ್ರಕರ್ತರು ಸಮಾಜದ ಅಂಕುಡೊಂಕಗಳನ್ನು ತಿದ್ದುವ ಕಾರ್ಯ ಮಾಡಬೇಕು ಆದರೆ ಅವರೇ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿದರೆ ಅಧಿಕಾರಿಗಳು ಹೇಗೆ ಕೆಲಸ ಮಾಡಬೇಕು. ಮಾಧ್ಯಮದಲ್ಲಿ ಪ್ರಕಟವಾದ ವರದಿಯನ್ನು ಬರೆದಿದ್ದು ಸಮಂಜಸವಲ್ಲದ ಹೇಳಿಕೆಯಾಗಿದ್ದು ಮತ್ತು ಗ್ರಾಮದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಬಳಿ ಹಣ ಕೊಂಡುವಂತೆ ಆಮಿಷ ಒಡ್ಡುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳು ಈ ಕೊರೋನಾ ವೈರಸ್ ಹಿನ್ನಲೆ ಬೆಳಗ್ಗೆ 7 ಗಂಟೆಗೆ ಕಛೇರಿಗೆ ಹಾಜರಾಗುತ್ತಾರೆ, ಆದರೆ ಕೆಲ ಸಮಯದಲ್ಲಿ ಪಿಡಿಒ ಅವರು ಮೂಡಲಗಿ ತಾಲೂಕಾ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇನ್ನೂ ಅನೇಕ ಮೇಲಾಧಿಕಾರಿಗಳ ಸಭೆಗಳು ಇರುವುದರಿಂದ ತಮ್ಮ ಸಿಬ್ಬಂದಿಗಳಿಗೆ ಪ್ರಭಾರಿಗಳಿಗೆ ಕತ್ಯರ್ವ ನಿರ್ವಹಿಸಲು ವಹಿಸಿ ಹೋಗುತ್ತಾರೆ. ಈ ವಿಷಯದ ಬಗ್ಗೆ ನಮ್ಮ ಎಲ್ಲ ಸದಸ್ಯರಿಗೂ ಹಾಗೂ ಕೊರೋನಾ ಸೈನಿಕರಿಗು ಗೊತ್ತು. ಹೀರುವಾಗ ಒಂದು ವಾರದಿಂದ ಸರಿಯಾಗಿ ಕಚೇರಿಗೆ ಬಂದಿಲ್ಲವೆಂದು ವರದಿ ಮಾಡಿದ್ದು ಖಂಡನಿಯವಾಗಿದೆ. ಆದರಿಂದ ಈ ವರದಿಗಾರನಿಗೆ ಸಂಬಂಧಪಟ್ಟ ಸಂಪಾದಕರು ಕ್ರಮಕೈಗೋಳಬೇಕು ಎಂದು ಲಿಖತವಾಗಿ ಆಗ್ರಹಿಸಿದಾರೆ.

ಗ್ರಾ,ಪಂ ಪಿಡಿಒ ಹಣಮಂತ ತಾಳಿಕೋಟಿ ಗ್ರಾಮದ ಸರ್ವ ಜನತೆಯೊಂದಿಗೆ ಸಹಕಾರದಿಂದ ಇದ್ದಾರೆ, ಗ್ರಾ,ಪಂ ಪಿಡಿಒ ಅಷ್ಟೇ ಅಲ್ಲದೆ ಮೂಡಲಗಿ ತಾಲೂಕಾ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲ ವಿವಿಧ ಕೆಲಸ ಕಾರ್ಯಗಳನ್ನು ಒಳ್ಳೆಯ ರೀತಿಯಿಂದ ದಾಖಲೆ ಸಮೇತ ನಿರ್ವಹಿಸುತ್ತಿದ್ದಾರೆ. ಬೋರವೆಲ್ ಕೆಲ ದಿನಗಳಿಂದ ಲಾಕ್ ಡೌನ್ ಸಲುವಾಗಿ ಬಂದಾಗಿದ್ದು, ಇಂದು ರಿಪೇರಿ ಕಾರ್ಯ ಮಾಡುಲು ತಿಳಿಸಿದ್ದೇನೆ. ಇವರ ಮೇಲೆ ಯಾವುದೇ ಆಪಾದನೆಗಳು ಇಲ್ಲ.

( ತಾಲೂಕ ಪಂಚಾಯತ ಕಾರ್ಯ ನಿರ್ವಹಕ ಅಧಿಕಾರಿ ಬಸವರಾಜ್ ಹೆಗ್ಗನಾಯಕ್)


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ