ರೋಹಿಣಿ ಕೋರೆ 600ಕ್ಕೆ 600 ಅಂಕಗಳು
ಮೂಡಲಗಿ: ಇಲ್ಲಿಯ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ರೋಹಿಣಿ ಕೋರೆ 600ಕ್ಕೆ 600 ಅಂಕಗಳನ್ನು ಪಡೆದುಕೊಂಡು ಪ್ರಥಮ ಸ್ಥಾನವನ್ನು ಪಡೆದುಕೊಂಡಿರುವರು. ಯಶೋಧಾ ಅವಟಿ ಶೇ. 99.16 (ದ್ವಿತೀಯ), ಮಹಾದೇವಿ ದಳವಾಯಿ ಶೇ. 98 (ತೃತೀಯ) ಸ್ಥಾನ ಪಡೆದುಕೊಂಡಿರುವರು.
ವಾಣಿಜ್ಯ ವಿಭಾಗ: ಪ್ರಿಯಾ ಬೋಳಿ ಶೇ. 99.83 (ಪ್ರಥಮ), ಹಾಲಪ್ಪ ಹಿರೇಕೋಡಿ 98.50 (ದ್ವಿತೀಯ), ಸುರಕ್ಷಿತಾ ಸಗರೆ ಶೇ. 97 (ತೃತೀಯ) ಸ್ಥಾನವನ್ನು ಪಡೆದುಕೊಂಡಿರುವರು.
ಸಂಸ್ಥೆಯ ಅಧ್ಯಕ್ಷ ಪುಲಕೇಶ ಸೋನವಾಲಕರ ಹಾಗೂ ಪ್ರಾಚಾರ್ಯರು, ಸಿಬ್ಬಂದಿಯವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
2020-21 ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಫಲಿತಾಂಶದ ವರದಿ
ವಿಜ್ಞಾನ ವಿಭಾಗ
ಕು. ರೋಹಿಣಿ ಕೋರೆ 600/600 100% ಪ್ರಥಮ
ಕು. ಯಶೋಧಾ ಅವಟಿ 595/600 99.16% ದ್ವಿತೀಯ
ಕು. ಮಹಾದೇವಿ ದಳವಾಯಿ 588/600 98% ತೃತೀಯ
ವಾಣಿಜ್ಯ ವಿಭಾಗ
ಕು. ಪ್ರೀಯಾ ಬೊಳಿ 599/600 99.83% ಪ್ರಥಮ
ಕು. ಹಾಲಪ್ಪ ಹಿರೆಕೋಡಿ 591/600 98.50% ದ್ವಿತೀಯ
ಕು. ಸುರಕ್ಷೀತಾ ಸಗರೆ 585/600 97% ತೃತೀಯ
ಇದರ ಜೊತೆಗೆ ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಒಳ್ಳೆಯ ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಕಾಲೇಜಿನ ಒಟ್ಟು ಫಲಿತಾಂಶ 100%
ಸನ್ 2020-21 ನೇ ಸಾಲಿನಲ್ಲಿ ನಮ್ಮ ಕಾಲೇಜಿನ ಈ ಮೇಲ್ಕಾಣಿಸಿದ ವಿದ್ಯಾರ್ಥಿಗಳು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಸಾದನೆಗೈದು ನಮ್ಮ ಕಾಲೇಜಿಗೆ ಗೌರವ & ಕೀರ್ತಿಯನ್ನು ತಂದಿರುತ್ತಾರೆ. ಜೊತೆಗೆ ಕಾಲೇಜಿನ ಉಳಿದ ವಿದ್ಯಾರ್ಥಿಗಳು ಸಹ ಒಳ್ಳೆಯ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಈ ಎಲ್ಲ ವಿದ್ಯಾಥಿಗಳಿಗೆ
ನಮ್ಮ ಶ್ರೀ ಸಾಯಿ ಕಾಲೇಜಿನ ಅಧ್ಯಕ್ಷರು, & ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿರುತ್ತಾರೆ.