Breaking News
Home / Recent Posts / ಪ್ರವಾಹ ಪೀಡಿತ ಪ್ರದೇಶ ಘೋಷಿಸಲು ಒತ್ತಾಯ

ಪ್ರವಾಹ ಪೀಡಿತ ಪ್ರದೇಶ ಘೋಷಿಸಲು ಒತ್ತಾಯ

Spread the love

 

 ಪ್ರವಾಹ ಪೀಡಿತ ಪ್ರದೇಶ ಘೋಷಿಸಲು ಒತ್ತಾಯ

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಸಮೀಪ ಹರಿಯುವ ಇಂದ್ರವೇಣಿ ಹಳ್ಳಕ್ಕೆ ಸತತ ಮಳೆಯಿಂದ ಮೇಲಿಂದ ಮೇಲೆ ಪ್ರವಾಹ ಬರುತ್ತಿದ್ದು, ಹಳ್ಳದ ಪಕ್ಕದಲ್ಲಿರುವ ವಾರ್ಡ್ 12ರ ಹಣಮಾಪೂರ ಪ್ರದೇಶವು ಪ್ರವಾಹ ಪೀಡಿತವಾಗಿ ಸಾಕಷ್ಟು ನಷ್ಟವಾಗುತ್ತಲಿದೆ. ಹಣಮಾಪೂರ ಪ್ರದೇಶವನ್ನು ಪ್ರವಾಹ ಪೀಡಿತ ಪ್ರದೇಶವೆಂದು ಪರಿಗಣಿಸಿ ಪರಿಹಾರ ಘೋಷಿಸಬೇಕು ಎಂದು ಅಲ್ಲಿಯ ಸಾರ್ವಜನಿಕರು ಮೂಡಲಗಿ ತಹಶೀಲ್ದಾರ್ ಅವರಿಗೆ ಸೋಮವಾರ ಮನವಿ ನೀಡಿ ಆಗ್ರಹಿಸಿದ್ದಾರೆ.
ಪ್ರತಿ ವರ್ಷವೂ ಅನಾವೃಷ್ಟಿಯಿಂದ ಇಂದ್ರವೇಣಿ ಹಳ್ಳಕ್ಕೆ ನೆರೆ ಬಂದು ಬೆಳೆಗಳಿಗೆ ಮತ್ತು ಮನೆಗಳಿಗೆ ನೀರು ನುಗ್ಗು ಅಪಾರ ಹಾನಿಯಾಗುತ್ತಲಿದೆ. ಕಲ್ಲೋಳಿಯ ವಾರ್ಡ್ ನಂ. 12ರ ಪ್ರದೇಶವಾದ ಹಣಮಾಪೂರ ಪ್ರದೇಶವನ್ನು ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಮತ್ತು ಜನರಿಗೆ ಆಗಿರುವ ಹಾನಿಗೆ ಪರಿಹಾರ ಘೋಷಿಸಬೇಕು ಎಂದು ಅಶೋಕ ಆಡಿನವರ ಜಿಲ್ಲಾಧಿಕಾರಿಗಳಲ್ಲಿ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು.
ಈರಣ್ಣ ಕುಂಬಾರ, ಪವಾಡಿ ಕುಂಬಾರ, ಶಾನೂರ ಕುಂಬಾರ, ಈರಣ್ಣ ನಂದಗಾಂವಿ, ರಾಘು ಆಡಿನವರ, ಅಶೋಕ ಆಡಿನವರ, ಶಿವಾನಂದ ಆಡಿನವರ, ಮಲ್ಲಪ್ಪ ಕಟ್ಟಿ, ಹಣಮಂತ ದಾಸನ್ನವರ ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ