Breaking News
Home / Recent Posts / ‘ರೈತರಿಗೆ ಜಾನುವಾರುಗಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ’ ಡಾ. ಎಂ.ಬಿ. ವಿಭೂತಿ

‘ರೈತರಿಗೆ ಜಾನುವಾರುಗಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ’ ಡಾ. ಎಂ.ಬಿ. ವಿಭೂತಿ

Spread the love

‘ರೈತರಿಗೆ ಜಾನುವಾರುಗಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ’ ಡಾ. ಎಂ.ಬಿ. ವಿಭೂತಿ

ಮೂಡಲಗಿ: ಕೃಷಿಗೆ ಪೂರಕವಾಗಿರುವ ಜಾನುವಾರುಗಳ ಆರೋಗ್ಯದ ಬಗ್ಗೆ ರೈತರು ಕಾಳಜಿವಹಿಸಬೇಕು’ ಎಂದು ಮೂಡಲಗಿಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಎಂ.ಬಿ. ವಿಭೂತಿ ಹೇಳಿದರು.
ತಾಲ್ಲೂಕಿನ ಕಮಲದಿನ್ನಿ ಗ್ರಾಮದ ಕೆಎಂಎಫ್ ಹಾಲು ಸಂಗ್ರಹ ಕೇಂದ್ರದ ಆವರಣದಲ್ಲಿ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶು ಆಸ್ಪತ್ರೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಜಾನುವಾರುಗಳಿಗೆ ಉಚಿತ ಜಂತು ನಾಶಕ ಔಷಧ ಹಾಕುವ ಮತ್ತು ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಹೈನುಗಾರಿಕೆಯು ರೈತರ ಆದಾಯವನ್ನು ಹೆಚ್ಚಿಸುತ್ತಿದ್ದು, ಜಾನುವಾರುಗಳ ಸಾಕಾಣಿಕೆಗೆ ಮಹತ್ವ ನೀಡಬೇಕು ಎಂದರು.
ಮಳೆ ಹಾಗೂ ಪ್ರವಾಹ ಸಂದರ್ಭದಲ್ಲಿ ಜಾನುವಾರುಗಳಿಗೆ ವಿವಿಧ ರೋಗಗಳು ಬಾಧಿಸುತ್ತವೆ. ರೈತರು ಜಾನುವಾರುಗಳ ಆರೋಗ್ಯದ ಬಗ್ಗೆ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕು ಎಂದರು.
ಜಾನುವಾರುಗಳಿಗೆ ಕಾಲುಬೇನೆ, ಬಾಯಿಬೇನೆಗೆ ಲಸಿಕೆ ಹಾಕುವ ಕಾರ್ಯಕ್ರಮವು ಒಂದು ತಿಂಗಳ ಒಳಗಾಗಿ ಪ್ರಾರಂಭಗೊಳ್ಳಲಿದ್ದು, ಅಷ್ಟರಲ್ಲಿ ರೈತರು ಜಾನುವಾರುಗಳಿಗೆ ಜಂತು ನಾಶಕ ಔಷಧವನ್ನು ಹಾಕಬೇಕು ಎಂದರು.
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ದನಕರುಗಳ ಸಾಕುವುದು ಮತ್ತು ಹೈನುಗಾರಿಕೆಯಿಂದ ಸಾವಯವ ಕೃಷಿಗೆ ಉತ್ತೇಜನ ದೊರೆಯುವುದು ಹಾಗೂ ರೈತರಿಗೆ ನಿತ್ಯ ಆದಾಯದ ಮೂಲವಾಗಿದೆ. ಜಾನುವಾರು ಸಂಪತ್ತನ್ನು ಸಂರಕ್ಷಿಸಿ ಬೆಳೆಸುವುದು ಇಂದಿನ ಅವಶ್ಯಕತೆ ಇದೆ ಎಂದರು.
ಪ್ರಗತಿಪರ ರೈತ ಲಕ್ಷ್ಮಣ ಹುಚರಡ್ಡಿ ಮಾತನಾಡಿ ಗ್ರಾಮದಲ್ಲಿ ದನಕರುಗಳ ಚಿಕಿತ್ಸೆಯ ಶಿಬಿರವನ್ನು ಏರ್ಪಸಿದ್ದು ಉತ್ತಮ ಕೆಲಸವಾಗಿದೆ. ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಮೂಡಲಗಿ ಪಶು ಆಸ್ಪತ್ರೆಯ ವೈದ್ಯಕೀಯ ತಂಡದ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ಶಿಬಿರದಲ್ಲಿ ಸೇರಿದ್ದ 300 ರಾಸುಗಳಿಗೆ ಜಂತು ನಾಶಕ ಔಷಧವನ್ನು ನೀಡಲಾಯಿತು ಮತ್ತು ರೋಗಗಳಿಗೆ ಚಿಕಿತ್ಸೆ ನೀಡಿದರು.
ಕೆಎಂಎಫ್ ಹಾಲು ಸಂಗ್ರಹ ಕೇಂದ್ರ ಅಧ್ಯಕ್ಷ ವೆಂಕಪ್ಪ ಮಂಟನವರ, ಯಮನಪ್ಪ ಮಂಟನವರ, ಹಣಮಂತ ಬೆಳಗಲಿ, ನಿಂಗಪ್ಪ ಬುದ್ನಿ ಅತಿಥಿಯಾಗಿದ್ದರು.
ಕುಲಗೋಡ ಪಶು ಅಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಬಸವರಾಜ ಗೌಡರ, ಮಹಾಂತೇಶ ಹೊಸೂರ, ಸುರೇಶ ಆದಪ್ಪಗೋಳ, ಶಂಕರ ಶಾಬಣ್ಣವರ, ಶಿವರುದ್ರಪ್ಪ ಮಿಲ್ಲಾನಟ್ಟಿ, ಬಿ.ಎ. ಕುಲಕರ್ಣಿ, ಲಯನ್ಸ್ ಕ್ಲಬ್ ಸದಸ್ಯರಾದ ಶ್ರೀಶೈಲ್ ಲೋಕನ್ನವರ, ಸುರೇಶ ನಾವಿ, ಶಿವಾನಂದ ಗಾಡವಿ, ಸಂಜಯ ಮೋಕಾಶಿ ಇದ್ದರು.
ಲಯನ್ಸ್ ಕ್ಲಬ್ ಖಜಾಂಚಿ ಸುಪ್ರೀತ ಸೋನವಾಲಕರ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ