ಮೂಡಲಗಿ: ಇಲ್ಲಿನ ಕೆ ಎಚ್ ಸೋನವಾಲ್ಕರ ಸರರ್ಕಾರಿ ಫ್ರೌಡ ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮುಖ್ಯೋಪಾಧ್ಯಯ ಎಸ್ ಬಿ ನ್ಯಾಮಗೌಡರ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಪಡೆದ ವಿದ್ಯಾರ್ಥಿಗಳಾದ ಶಿವಕಾಂತ ಪರಸಪ್ಪ ಗೋಟೂರ (ನಾಗನೂರ) ,ಸಾನೀಯಾ ಅ. ನದಾಫ್, ವಿಜಯಕುಮಾರ ಮ ಅಂಗಡಿ, ಅಭಿಷೇಕ್ ಮ.ಮಗದುಮ್ ಇವರನ್ನು ಸತ್ಕರಿಸಿ ಗೌರವಿಸಿದರು,
ಭೂದಾನಿ, ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಕ್ಷೆ ರೇಣುಕಾ ಹಾದಿಮನಿ, ಬಿಇಓ ಅಜೀತ ಮನ್ನಿಕೇರಿ, ಎಸ್ ಡಿಎಮ್‍ಸಿ ಸದಸ್ಯ ಶಂಕರಯ್ಯ ಹಿರೇಮಠ ಹಾಗೂ ಶಿಕ್ಷರು ಇದ್ದರು.
