Breaking News

Spread the love

ಕೆಇಬಿ ಪ್ಲಾಟ್ ನಿವಾಸಿಗಳಿಗೆ ಕೋವಿಡ್ ಲಸಿಕೆ

ಮೂಡಲಗಿ: ರೋಗ ನಿರೋಧಕ ಶಕ್ತಿ ಹೊಂದಲು ಹಾಗೂ ಕೊರೋನಾ ರೋಗ ಬಾದಿಸದಂತೆ ಮುನ್ನೆಚ್ಚರಿಕೆಗಾಗಿ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯುವುದು ಅವಶ್ಯವಿದೆ ಎಂದು ಆಶಾ ಕಾರ್ಯಕರ್ತೆ ಶಕುಂತಲಾ ಗೋಲಶೆಟ್ಟಿ ಹೇಳಿದರು.
ಗುರುವಾರ ಇಲ್ಲಿನ ವಾರ್ಡ ನಂ 17 ಕೆಇಬಿ ಪ್ಲಾಟ್, ಈರಣ್ಣ ನಗರದ ಹನುಮಾನ ದೇವಸ್ಥಾನ ಆವರಣದಲ್ಲಿ ಕೋವಿಡ್ ಲಸಿಕಾ ಶಿಬೀರದಲ್ಲಿ ಮಾತನಾಡಿದ ಅವರು, ಇಲ್ಲಿನ ನಿವಾಸಿಗಳ ಅನುಕೂಲತೆಗಾಗಿ ಈ ವ್ಯವಸ್ಥೆ ಮಾಡಲಾಗಿದೆ ಇದರ ಸದುಪಯೋಗ ಪಡೆದು ಕೋವಿಡ್ ನಿರ್ಮೂಲನೆಗೆ ಸಹಕರಿಸಬೇಕು. ಯಾವುದೇ ಕಾರಣಕ್ಕೂ ಯಾರೂ ಹೆದರದೆ ಎಲ್ಲರೂ ಲಸಿಕೆ ಪಡೆಯಿರಿ ಎಂದರು.
ಆರೋಗ್ಯ ಸಿಬ್ಬಂದಿಗಳಾದ ತಸ್ಲೀಮ ಪೀರಜಾದೆ, ಚೇತನ್ ನಿಶಾನಿಮಠ, ಅಜ್ಜಪ್ಪ ಕರಿಮಸಿ ಹಾಗೂ ಆಶಾ ಕಾರ್ಯಕರ್ತೆಯರಾದ ಮಹಾದೇವಿ ಹಣಬರ, ರತ್ನಾ ದಳವಾಯಿ ಇದ್ದರು.
ಈ ಶಿಬಿರದಲ್ಲಿ 300 ಜನರು ಕೋವಿಡ್ ಲಸಿಕೆ ಪಡೆದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ