Breaking News
Home / Recent Posts / ಜೈ ಹನುಮಾನ ಯುವ ಜನ ಸೇವಾ ಸಂಘದಿಂದ ಮುಖ್ಯ ಮಂತ್ರಿಗಳಿಗೆ ಮನವಿ

ಜೈ ಹನುಮಾನ ಯುವ ಜನ ಸೇವಾ ಸಂಘದಿಂದ ಮುಖ್ಯ ಮಂತ್ರಿಗಳಿಗೆ ಮನವಿ

Spread the love

ಕಲ್ಲೋಳಿ: ಜೈ ಹನುಮಾನ ಯುವ ಜನ ಸೇವಾ ಸಂಘದಿಂದ ಮುಖ್ಯ ಮಂತ್ರಿಗಳಿಗೆ ಮನವಿ

ಮೂಡಲಗಿ: ತಾಲ್ಲೂಕಿನ ಕಲ್ಲೋಳಿ ಪಟ್ಟಣದ ಜೈ ಹನುಮಾನ ಯುವ ಜನ ಸೇವಾ ಸಂಘದ ಪದಾಧಿಕಾರಿಗಳು ಮೂಡಲಗಿ ತಹಶೀಲ್ದಾರ್ ಡಿ.ಜಿ.ಮಹಾತ್ ಅವರು ಗುರುವಾರದಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದಲ್ಲಿ ವಯೋಮಿತಿ ಮೀರುತ್ತಿರುವ ನಿರುದ್ಯೋಗಿಗಳಿಗೆ ಸರಕಾರಿ ನೌಕರಿಯಲ್ಲಿ ಅವಕಾಶ ನೀಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಸರಕಾರದಿಂದ ಕೆಲ ವರ್ಷಗಳಿಂದ ಉದ್ಯೋಗ ಕರೆಯುವ ಪ್ರಮಾಣ ಕಡಿಮೆಯಾಗುತ್ತಿದೆ. ಪ್ರಸ್ತುತ
ಕರೋನಾ ಸಮಯದಲ್ಲಂತೂ ಉದ್ಯೋಗದ ಭರ್ತಿ ಅತೀ ಕಡಿಮೆಯಾಗಿರುತ್ತದೆ. ಪದವಿ, ವೃತ್ತಿಪರ, ಶಿಕ್ಷಣ, ಪೂರೈಸಿರುವಂತಹ ಯುವಕ ಯುವತಿಯರು, ಕೂಲಿ ಕೆಲಸ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಆದರೆ ಈಗಾಗಲೇ ಕೆಲ ವರ್ಷಗಳ ಹಿಂದೆ ಸರಕಾರ ವಯೋಮಿತಿಮೀರುತ್ತಿರುವ ನಿರುದ್ಯೋಗಿಗಳಿಗೆ 2-3 ಸಲ ಉದ್ಯೋಗ ಕರೆದು ಮೊದಲ ಪ್ರಾಶಸ್ತ್ರ ನೀಡಿತ್ತು. ಆದರೆ ಸದ್ಯದ ಸರಕಾರಗಳು ಇತ್ತೀಚಿನ ವರ್ಷಗಳಲ್ಲಿ ವಯೋಮಿತಿ ಮೀರುತ್ತಿರುವ ನಿರುದ್ಯೋಗಿಗಳ ಬಗ್ಗೆ ಚರ್ಚೆ ಹಾಗೂ ಉದ್ಯೋಗ ನೀಡುವ ದರ ಬಗ್ಗೆ ಎಲ್ಲೂ ಕಂಡು ಬರುತ್ತಿಲ್ಲಾ.
ಆದ್ದರಿಂದ ಸರಕಾರ ವಯೋಮಿತಿ ಮೀರುತ್ತಿರುವ ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ನೀಡಬೇಕೆಂದು ಮನವಿಯಲ್ಲಿ ಆಗ್ರಹಿದ್ದಾರೆ.
ಈ ಸಮಯದಲ್ಲಿ ಸಂಘಟನೆಯ ಅಧ್ಯಕ್ಷ ಪರುಶುರಾಮ ಇಮಡೇರ, ಉಪಾಧ್ಯಕ್ಷ ಮಹಾಂತೇಶ ಕಡಲಗಿ, ಪದಾಧಿಕಾರಿಗಳಾದ ರಾಜಪ್ಪ ಮಾವರಕರ, ಭೀಮಶಿ ಗೋಕಾಂವಿ, ಸಿದ್ದಪ್ಪ ಪೂಜೇರಿ, ಸಿದ್ದಪ್ಪ ಉಮರಾಣಿ, ಭೀಮಶಿ ಕಡಲಗಿ ಮತ್ತಿತರು ಇದ್ದರು.
 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ