ಬೀಸನಕೊಪ್ಪ ವ್ಯಕ್ತಿ ಕಾಣೆ
ಮೂಡಲಗಿ: ತಾಲೂಕಿನ ಬೀಸನಕೊಪ್ಪ ಗ್ರಾಮದ ವ್ಯಕ್ತಿ ಮಹಾದೇವ ಸಿದ್ದಪ್ಪ ಹುಚ್ಚನ್ನವರ(38)ಎಂಬುವನ್ನು ಕಳೆದ ಡಿಸೆಂಬರ 31ರಂದು ಮುಂಜಾನೆ ಬೀಸನಕೊಪ್ಪ ಗ್ರಾಮದಿಂದ ಗೋಕಾಕಕ್ಕೆ ಹೋಗಿ ಬರುವದಾಗಿ ಹೇಳಿ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ಕಾಣೆಯಾದ ವ್ಯಕ್ತಿಯ ಪತ್ನಿ ರೇಣುಕಾ ಮ.ಹುಚ್ಚನ್ನವರ ಕುಲಗೋಡ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಕಾಣೆಯಾದ ವ್ಯಕ್ತಿಯು 5.8 ಪೂಟ ಎತ್ತರ, ಸದೃಡ ಮೈಕಟು, ದುಂಡು ಮುಖ, ಸಾದಾಗಪ್ಪು ಮೈ ಬಣ್ಣ, ಉದ್ದ ಮೂಗು ಹೊಂದಿದ್ದು ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಪುಲ್ ತೋಳಿನ ಶರ್ಟ, ಕರಿ ಪ್ಯಾಂಟ ಹಾಗೂ ಹಸಿರು ಬಣ್ಣದ ಟಾವೆಲ್ ಧರಿಸಿರುತ್ತಾನೆ ಇತನ ಬಗ್ಗೆ ಮಾಹಿತಿ ತಿಳಿದವರು ಕುಲಗೋಡ ಪೋಲಿಸ ಠಾಣೆ 08334-222233 ಅಥವಾ 9480804069ಗೆ ತಿಳಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.