Breaking News
Home / Recent Posts / ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕ್ರಿಕೆಟ್ ಟೂರ್ನಿ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್‍ಗೆ ಚಾಂಪಿಯನ್‍ಷಿಪ್ ಟ್ರೋಪಿ

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕ್ರಿಕೆಟ್ ಟೂರ್ನಿ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್‍ಗೆ ಚಾಂಪಿಯನ್‍ಷಿಪ್ ಟ್ರೋಪಿ

Spread the love


ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕ್ರಿಕೆಟ್ ಟೂರ್ನಿ
ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್‍ಗೆ ಚಾಂಪಿಯನ್‍ಷಿಪ್ ಟ್ರೋಪಿ

ಮೂಡಲಗಿ: 75ನೇ ಅಮೃತಮಹೋತ್ಸವ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ತ್ರೀಕೋಣ ಕ್ರೀಕೆಟ್ ಟೂರ್ನಿಯಲ್ಲಿ ಮೂಡಲಗಿಯ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡವು ಚಾಂಪಿಯನ್‍ಷಿಪ್ ಪಡೆದುಕೊಂಡುಟ್ರೋಪಿಯನ್ನುತನ್ನದಾಗಿಸಿಕೊಂಡಿತು. ಹಳ್ಳೂರಿನ ಬಿಸಿಸಿ ತಂಡವು ರನ್ನರ್ಸ್‍ಷಿಪ್ ಪಡೆದುಕೊಂಡಿತು.
ಸರ್ವೋತ್ತಮ ಆಟಗಾರರಾಗಿ ಶಿವು ಹುಬಳಿ, ಅತ್ಯುತ್ತಮ ಸರಣಿ ಆಟಗಾರರಾಗಿ ಬಾಳು ಸಣ್ಣಕ್ಕಿ ಆಯ್ಕೆಯಾಗಿ ವಯಕ್ತಿಕ ಬಹುಮಾನಗಳನ್ನು ಪಡೆದುಕೊಂಡರು.
ಬಹುಮಾನ ಪ್ರಾಯೋಜಕ ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಬಿ. ಢವಳೇಶ್ವರ ವಿಜೇತ ತಂಡಗಳಿಗೆ ಟ್ರೋಪಿಗಳನ್ನು ವಿತರಿಸಿ ಮಾತನಾಡಿ ‘ಕ್ರೀಡೆಗಳು ಯುವಕರಲ್ಲಿ ಸಂಘಟನೆ ಜೊತೆಗೆ ಉತ್ಸಾಹವನ್ನು ಹೆಚ್ಚಿಸುತ್ತವೆ. ಸಂಘ, ಸಂಸ್ಥೆಗಳು ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ಬೆಳೆಸಬೇಕು’ ಎಂದರು.
ಪಂಚಮಸಾಲಿ ಸಮಾಜದ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ಎನ್.ಟಿ. ಪಿರೋಜಿ ಬೆಳಿಗ್ಗೆ ಟೂರ್ನಿಯನ್ನು ಉದ್ಘಾಟಿಸಿ ಮಾತನಾಡಿ ಬರುವ ವಾರದಲ್ಲಿ ಏರ್ಪಡಿಸುವ ಕ್ರಿಕೆಟ್ ಟೂರ್ನಿಯ ಬಹುಮಾನ ಪ್ರಯೋಜಕವನ್ನು ವಹಿಸಿಕೊಳ್ಳುವೆ ಎಂದರು.
ಟೂರ್ನಿಯನ್ನು ಸಂಘಟಿಸಿದಶಿವಾನಂದ ಗಾಡವಿ ಪ್ರಾಸ್ತಾವಿಕ ಮಾತನಾಡಿ ಕ್ರಿಕೆಟ್, ಬ್ಯಾಡ್ಮಿಂಟನ್ ಟೂರ್ನಿಗಳನ್ನು ಮೇಲಿಂದ ಮೇಲೆ ಸಂಘಟಿಸಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಕ್ರೀಡಾ ಪ್ರೇಮಿಗಳು ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು
ಕ್ರಿಕೆಟ್ ತಂಡಗಳ ವಿಜೇತ ನಾಯಕರಾದ ಸೋಮು ಮಠಪತಿ, ಯಾಶೀನ ಮುಜಾವರ ಅವರು ಟ್ರೋಪಿಗಳನ್ನು ಪಡೆದುಕೊಂಡರು.


Spread the love

About inmudalgi

Check Also

*ಅರಭಾವಿಯಲ್ಲಿ ಎಆರ್ಟಿಓ ಕಚೇರಿ ಮತ್ತು ಚಾಲನಾ ಪಥ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ*

Spread the love ಮೂಡಲಗಿ: ಚಾಲನಾ ಪರವಾನಗಿ ಪಾಸಾಗಲು ಇನ್ನು ಮುಂದೆ ಮ್ಯಾನುಯೆಲ್‌ ಇರುವುದಿಲ್ಲ. ಬದಲಾಗಿ ಎಲ್ಲ ಚಾಲನಾ ಪಥಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ