ಚುಳಕಿ ವೀರಸಂಗಯ್ಯ ಶ್ರೀಗಳು ಲಿಂಗೈಕ್ಯ
ಬೆಟಗೇರಿ:ಸಮೀಪದ ಮಮದಾಪೂರ ಶ್ರೀಮಠದಲ್ಲಿ ವಾಸ್ತವ್ಯವಾಗಿದ್ದ ಚುಳಕಿ ಗ್ರಾಮದ ವೀರಸಂಗಯ್ಯ ಸ್ವಾಮಿಜಿ(78) ಅವರು ಶನಿವಾರ ಆ.21ರಂದು ಲಿಂಗೈಕ್ಯರಾದರು.
ಸ್ಥಳೀಯ ಶ್ರೀಮಠದ ಮೌನಮಲ್ಲಿಕಾರ್ಜುನ ಶ್ರೀಗಳು, ತೊರಗಲ್ಲದ ಚನ್ನಮಲ್ಲ ಶಿವಾಚಾರ್ಯ ಸ್ವಾಮಿಜಿ, ಜಮಖಂಡಿ ಗೌರಿಶಂಕರ ಶ್ರೀ, ಶಿರಕೊಳದ ಗುರುಸಿದ್ಧೇಶ್ವರ ಶಿವಾಚಾರ್ಯ ಶ್ರೀ, ಹೊಸೂರದ ಗಂಗಾಧರ ಸ್ವಾಮಿಜಿ, ಮಲ್ಲಾಪೂರದ ಚಿದಾನಂದ ಸ್ವಾಮಿಜಿ, ಮಮದಾಪೂರದ ಚರಂತೇಶ್ವರ ಸ್ವಾಮಿಜಿ, ಬಬಲಾದಿಮಠದ ಸ್ವಾಮಿಜಿ, ಗೋಕಾಕ ಬ್ರಹ್ಮನಂದ ಸ್ವಾಮಿಜಿ ಸೇರಿದಂತೆ ಹರ, ಗುರು, ಚರಮೂರ್ತಿಗಳು ಹಾಗೂ ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ಲಿಂಗೈಕ್ಯ ವೀರಸಂಗಯ್ಯ ಶ್ರೀಗಳ ಅಂತ್ಯಕ್ರಿಯೆ ಕಾರ್ಯಕ್ರಮ ಮಮದಾಪೂರ ಶ್ರೀ ಮಠದ ಆವರಣದಲ್ಲಿ ರವಿವಾರ ಆ.22 ರಂದು ನಡೆಯಿತು.
ನಾಡಿನ ವಿವಿಧಡೆಯ ಮಠ ಮಾನ್ಯಗಳ ಸ್ವಾಮಿಗಳು, ಹರ, ಗುರು, ಚರಮೂರ್ತಿಗಳು ಹಾಗೂ ಅಪಾರ ಭಕ್ತ ಸಮೂಹ ಲಿಂಗೈಕ್ಯ ವೀರಸಂಗಯ್ಯ ಶ್ರೀಗಳ ಲಿಂಗೈಕ್ಯಕ್ಕೆ ಸಂತಾಪ ಶೋಕ ವ್ಯಕ್ತಪಡಿಸಿದ್ದಾರೆ. ಮಮದಾಪೂರ ಗ್ರಾಮದ ಮೌನಮಲ್ಲಿಕಾರ್ಜುನ ಶ್ರೀ ಮಠದಲ್ಲಿ ಇದೇ ಶುಕ್ರವಾರ ಆ.27 ರಂದು ಮುಂಜಾನೆ 10 ಗಂಟೆಗೆ ಲಿಂಗೈಕ್ಯ ವೀರಸಂಗಯ್ಯ ಶ್ರೀಗಳ ಶೃದ್ದಾಂಜಲಿ ಕಾರ್ಯಕ್ರಮ ಹರ, ಗುರು, ಚರಮೂರ್ತಿಗಳ ಸಮ್ಮುಖದಲ್ಲಿ ನಡೆಯಲಿದೆ ಎಂದು ಸ್ಥಳೀಯ ಶ್ರೀಮಠ ಪ್ರಕಟನೆಯಲ್ಲಿ ತಿಳಿಸಿದೆ.