ಮೂಡಲಗಿ: ರಾಜಯೋಗಿನಿ ಪ್ರಕಾಶಮನಿ ದಾದೀಜಿ ಅವರು ವಿಶ್ವ ಭಾತೃತ್ವವನ್ನು ಬೆಳೆಸುವ ಮೂಲಕ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ’ ಎಂದು ಬ್ರಹ್ಮಕುಮಾರಿ ರೇಖಾ ಅಕ್ಕನವರು ಹೇಳಿದರು.
ಇಲ್ಲಿಯ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರ ಈಶ್ವರಿ ವಿಶ್ವವಿದ್ಯಾಲಯದಲ್ಲಿ ರಾಜಯೋಗಿನಿ ಬ್ರಹ್ಮಕುಮಾರಿ ಪ್ರಕಾಶಮನಿ ದಾದೀಜಿ ಅವರ 14ನೇ ಸ್ಮøತಿ ದಿವಸದಲ್ಲಿ ಮಾತನಾಡಿದ ಪ್ರಕಾಶಮನಿ ದಾದೀಜಿ ಅವರು ಬದುಕಿನ ರೀತಿಯು ಜಗತ್ತಿಗೆ ಸಂದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರಿಗೆ ರಕ್ಷಾಬಂಧನ ಮಾಡಿದರು.
ಗುರುಲಿಂಗಪ್ಪ ಶೀಲವಂತ, ಶಂಕರ ಸೋನವಾಲಕರ, ನಿವೃತ್ತ ಶಿಕ್ಷಕ ಕುಲಿಗೋಡ, ಬಾಲಶೇಖರ ಬಂದಿ, ಶಿಕ್ಷಕ ಐ.ಎಂ. ಪಾಟೀಲ ಇದ್ದರು.
ಬ್ರಹ್ಮಕುಮಾರಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.
IN MUDALGI Latest Kannada News