Breaking News
Home / Recent Posts / ವಚನ ಸಾಹಿತ್ಯವು ಕನ್ನಡ ಸಾರಸ್ವತಲೋಕದ ಅಕ್ಷಯ ಸಂಪತ್ತು -ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ

ವಚನ ಸಾಹಿತ್ಯವು ಕನ್ನಡ ಸಾರಸ್ವತಲೋಕದ ಅಕ್ಷಯ ಸಂಪತ್ತು -ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ

Spread the love

ಮೂಡಲಗಿ: ‘12ನೇ ಶತಮಾನದಲ್ಲಿ ರಚಿತವಾದ ವಚನ ಸಾಹಿತ್ಯವು ಕನ್ನಡ ಸಾರಸ್ವತಲೋಕದ ಅಕ್ಷಯ ಸಂಪತ್ತು‘ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ ಅಕ್ಕಿ ಹೇಳೀದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಘಟಕಗಳಿಂದ ಲಿಂಗೈಕ್ಯ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಗಳ ಜನ್ನ ದಿನದ ಅಂಗವಾಗಿ ಭಾನುವಾರ ಗೂಗಲ್‌ ಮೀಟ್‌ದಲ್ಲಿ ಆಯೋಜಿಸಿದ ವಚನ ದಿನ ಆಚರಣೆಯ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ವಚನ  ಸಾಹಿತ್ಯದ ರೂಪವು ಜಗತ್ತಿನ ಯಾವ ಭಾಷೆಯಲ್ಲಿಯೂ ಇಲ್ಲ, ಇದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎಂದರು.
ಶರಣ ಸೋಮಶೇಖರ ಮಗದುಮ್‌ ಅವರು ವಿಶೇಷ ಉಪನ್ಯಾಸ ನೀಡಿ ‘ಬಸವಾದಿ ಶರಣರು ರಚಿಸಿದ ಪ್ರತಿಯೊಂದು ವಚನದಲ್ಲಿ ಬಹುದೊಡ್ಡ ಶಕ್ತಿ ಇದ್ದು, ವಚನಗಳ ಸಂದೇಶವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಸುಂದರಗೊಳಿಸಿಕೊಳ್ಳಬೇಕು‘ ಎಂದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕ, ದಾಸೋಹ ಮತ್ತು ಪ್ರಸಾದ ಸಂಸ್ಕೃತಿಯನ್ನು ಮೈಸೂರು ಸುತ್ತೂರಿನ ಮಠದಲ್ಲಿ ಅನುಷ್ಠಾನಗೊಂಡಿದೆ. ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳು ಬೆಳೆಸಿದ ಶರಣ ಸಂಸ್ಕೃತಿಯನ್ನು ಈಗಿನ ಪೂಜ್ಯರು ಯಥಾವತ್ತಾಗಿ ನಡೆಸಿಕೊಂಡು ಮಠವನ್ನು ಕಲ್ಯಾಣ ಕೇಂದ್ರವನ್ನಾಗಿಸಿದ್ದಾರೆ ಎಂದರು.
ಬಾಲಶೇಖರ ಬಂದಿ, ಮಹಾಂತೇಶ ತಾಂವಂಶಿ, ಭಾರತಿ ಮದಭಾವಿ ಅತಿಥಿಯಾಗಿದ್ದರು.
ಪ್ರೊ. ಗಂಗಾಧರ ಮಳಗಿ, ಪುಷ್ಪಾ ಮುರಗೋಡ, ಸಂಕೇಶ್ವರದ ಹಮೀದಾಬೇಗಂ, ಪ್ರೊ. ಸಂಗಮೇಶ ಗುಜಗೊಂಡ, ಸುರೇಶ ಲಂಕೆಪ್ಪನ್ನವರ, ಸುಧಾ ಮಠಪತಿ, ಮಹಾನಂದಾ ಪಾಟೀಲ, ಪ್ರೊ. ಶಂಕರ ನಿಂಗನೂರ ಇದ್ದರು.
ಶರಣ ಪರಿಷತ್‌ ಅಧ್ಯಕ್ಷ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾ ಮಗದುಮ್ ಪ್ರಾರ್ಥಿಸಿದರು, ಪ್ರೊ. ಸುಭಾಷ ವಾಲಿಕಾರ ಸ್ವಾಗತಿಸಿದರು, ಪ್ರೊ. ಸುರೇಶ ಮುದ್ದಾರ ಪರಿಚಯಿಸಿದರು, ಪ್ರೊ. ಬಿ.ಎಲ್. ಮಾದಗೌಡರ ವಂದಿಸಿದರು.

 


Spread the love

About inmudalgi

Check Also

ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ

Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ