Breaking News
Home / Recent Posts / ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ, ಬೃಹತ ಪ್ರತಿಭಟನೆ

ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ, ಬೃಹತ ಪ್ರತಿಭಟನೆ

Spread the love

ಮೂಡಲಗಿ: ತಾಲೂಕಿನ ರಾಜಾಪೂರ ಗ್ರಾಮದ ದಲಿತ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ, ಬೃಹತ ಪ್ರತಿಭಟನೆಯು ಸೋಮವಾರದಂದು ಪಟ್ಟಣದ ಪ್ರಮುಖ ನಗರಲ್ಲಿ ಮೆರವಣಿಗೆ ಮೂಲಕ ಕಲ್ಮೇಶ್ವರ ವೃತ್ತದಲ್ಲಿ ಜಮಾಯಿಸಿ, ಅತ್ಯಚಾರ ಮಾಡಿದ ಐದು ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ ಮೂಲಕ ಸಿಎಂ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸದರು.
ದಲಿತ ಮುಖಂಡ ರಮೇಶ ಸಣ್ಣಕ್ಕಿ ಮಾತನಾಡಿ, ತಾಲೂಕಿನ ರಾಜಾಪೂರ ದಲಿತ ವಿದ್ಯಾರ್ಥಿನಿ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿ ಜೀವ ಬೇದರಿಕೆ ಹಾಕಿದ್ದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಹಾಗೂ ತಾಲೂಕಿನ ದಲಿತ ಸಂಘಟನೆಗಳ ಒಕೂಟ್ಕದಿಂದ ಉಗ್ರವಾಗಿ ಖಂಡಿಸುತ್ತೆವೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ನೀಚ ಕೃತ್ಯಗಳು ಮೇಲಿಂದ ಮೇಲೆ ದಲಿತ ಸಮುದಾಯದ ಮಹಿಳೆಯರನ್ನು ಗುರಿಯಾಗಿಟ್ಟು ಹೆಚ್ಚು ನಡೆಯುತ್ತಿರುವುದು ಖಂಡನೀಯ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರಗಳಲ್ಲಿ ಇಂಥಹ ಅಮಾನವಿಯ ಕೃತ್ಯಗಳು ಅವ್ಯಾಹತವಾಗಿ ನಡೆದಿರುತ್ತವೆ ಆದರೆ ನಮ್ಮ ರಾಜ್ಯದಲ್ಲಿಯೂ ಕೂಡಾ ನಡೆದಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ ಎಂದರು.
ಬಸವರಾಜ ಕಾಡಾಪೂರ ಮಾತನಾಡಿ, ಮೈಸೂರಿನಲ್ಲಿ ಗ್ಯಾಂಗ್ ರೇಪ್ ಮಾಸುವ ಮುನ್ನ ನಮ್ಮ ತಾಲೂಕಿನಲ್ಲಿ ನಡೆದಿರುವ ಖಂಡಿನಿಯ. ಡಾ. ಅಂಬೇಡ್ಕರ ಅವರು ಎಸಿ ಸಮುದಾಯಕ್ಕೆ ಅಷ್ಡ ಮೀಸಲಾತಿ ನೀಡಿಲ್ಲ, ಹಿಂದೂಳಿದ ಎಲ್ಲ ವರ್ಗದವರಿಗೂ ಮೀಸಲಾತಿ ನೀಡಿದ್ದಾರೆ. ಪ್ರತಿಭಟನೆ ಒಂದು ಸಮುದಾಯಕ್ಕೆ ಸೀಮಿತವಾಗಬಾರದು ಆದರಿಂದ ಎಲ್ಲ ಸಮುದಾಯ ಜನರು ಭಾಗವಹಿಸಿ ಇಂತಹ ಕೃತ್ಯ ಮಾಡಿದರಿಗೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.
ಎಬನೇಜರ ಕರಬನ್ನವರ ಮಾತನಾಡಿ, ಮಹಿಳೆಯರ ಮೇಲೆ ಹಾಗೂ ದಲಿತರ ಮೇಲೆಯೂ ಕೂಡಾ ನಿರಂತರ ದೌರ್ಜನ್ಕ, ದಬ್ಬಾಳಿಕೆ ನಡೆಯುತ್ತಲೇ ಇವೆ. ಇಂತಹ ಘಟನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹೀನ ಕೃತ್ಯಗಳಾಗಿವೆ. ಜುಲೈ 12ರಂದು ರಾಜಾಪೂರ ಗ್ರಾಮದಲ್ಲಿ ನಡೆದ ಸಾಮೂಹಿಕ ಅತ್ಯಚಾರದ ಬಗ್ಗೆ ಯಾರಿಗೂ ಹೇಳದಂತೆ ಸಂತ್ರಸ್ಥೆ ಹಾಗೂ ಕುಟುಂಬಕ್ಕೆ ಜೀವ ಬೇದರಿಕೆ ಹಾಕಿರುವುದು ಖಂಡನೀಯವಾಗಿದೆ ಎಂದರು.
ಸಂಘಟನೆಯ ಮುಖಂಡ ಬಾಳೇಶ ಬನಹಟ್ಟಿ, ವಂಸತ ಕಾಡನ್ನವರ, ರಮೇಶ ಹರಿಜನ, ಲಕ್ಷ್ಮಣ ಕೆಳಗಡೆ, ಇಜಾಜಅಹ್ಮದ ಕೋಟಭಾಗಿ, ಆನಂದ ಭಂಗೆನ್ನವರ ಮಾಡತನಾಡಿ, ಇಂತಹ ಕಾಮುಕರಿಗೆ ಅತ್ಯಚಾರ ಮಾಡಿದ ಸ್ಥಳದಲ್ಲೇ ಗುಂಡಿಟ್ಟಿ ಕೊಲಬೇಕು ಎಂದು ಆಕ್ರೋಶ ವ್ಯಕ್ತಪಸಿದರು.
ಈ ಸಂದರ್ಭದಲ್ಲಿ ಮರೆಪ್ಪ ಮರೆಪ್ಪಗೋಳ, ಪ್ರಭಾಕರ ಭಂಗೆನ್ನವರ, ಶಾಬೂ ಸಣ್ಣಕ್ಕಿ, ಅಶೋಕ ಉದ್ದಪ್ಪನ್ನರವ, ಮಾರುತಿ ಹರಿಜನ, ವಿಲಾಸ ಸಣ್ಣಕ್ಕಿ, ಯಶವಂತ ಮಂಟೂರ, ಈರಪ್ಪ ಢವಳೇಶ್ವರ, ಮಾರುತಿ ಮಾವರಕರ, ರಾಮಣ್ಣ ಈಟಿ, ಶಾಂತಾಬಾಯಿ ಮೇತ್ರಿ, ಜಯವಂತ ನಾಗನ್ನವರ, ಸುಂದರ ಬಾಲಪ್ಪನ್ನವರ, ಭೀಮಶೀ ಉದ್ದಪ್ಪನ್ನರವ, ಯಮನಪ್ಪ ಮೇತ್ರಿ ಹಾಗೂ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ