ತುಕ್ಕಾನಟ್ಟಿ: ಸೆ. 2ರಂದು ಗೋವಿನ ಜೋಳ ಕ್ಷೇತ್ರೋತ್ಸವ
ಮೂಡಲಗಿ: ತಾಲ್ಲೂಕು ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ ಗೋಕಾಕ ಇವರು ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದ ಆಶಾ ಭರತ ಮಹಾತ್ರೆ ಅವರ ತೋಟದಲ್ಲಿ ಸೆ. 2ರಂದು ಬೆಳಿಗ್ಗೆ 10ಕ್ಕೆ ಗೋವಿನ ಜೋಳ ಕ್ಷೇತ್ರೋತ್ಸವ ಮತ್ತು ರೈತರ ಗೋಷ್ಠಿ ಏರ್ಪಡಿಸಿರವರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಾಳಪ್ಪ ಬ. ಬೆಳಕೂಡ ಕಾರ್ಯಕ್ರಮವನ್ನು ಉದ್ಘಾಟಿಸಿವರು. ತುಕ್ಕಾನಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕುಮಾರ ಮರ್ದಿ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ವಿಭಾಗದ ಉಪ ಕೃಷಿ ನಿರ್ದೇಶಕ ಎಲ್.ಐ. ರೂಢಗಿ, ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಅಶೋಕ ಗದಾಡಿ, ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ, ನದಾಫ ಭಾಗವಹಿಸುವರು.
ತುಕ್ಕಾನಟ್ಟಿ ಬಡ್ರ್ಸ್ ಸಂಸ್ಥೆಯ ಕೃಷಿ ಕೇಂದ್ರದ ಡಾ. ಡಿ.ಸಿ. ಚೌಗಲಾ ಮತ್ತು ಬೇಸಾಯ ತಜ್ಞ ಡಾ. ಮಾರುತಿ ಮಳವಾಡೆ ಅವರು ಉಪನ್ಯಾಸ ನೀಡುವರು.
ರೈತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೃಷಿ ಅಧಿಕಾರಿ ಶಂಕರ ಹಳ್ಳದಮನಿ ಹಾಗೂ ಆತ್ಮ ಯೋಜನೆಯ ಛಾಯಾ ಪಾಟೀಲ ತಿಳಿಸಿದ್ದಾರೆ.
IN MUDALGI Latest Kannada News