ಮೂಡಲಗಿ: ಸೆ.15ರ ಒಳಗಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಅನುಷ್ಠಾನಗೊಳಿಸುವುದಾಗಿ ಮಾರ್ಚ 15 ರಂದು ವಿಧಾನಸೌಧದ ಅಧಿವೇಶನದಲ್ಲಿ ಕೊಟ್ಟ ಮಾತಿನಂತೆ ಸರ್ಕಾರ ನಡೆಯಲಿ ಎಂದು ನೆನಪಿಸಲು ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮೀತಿಯಿಂದ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಬುಧವಾರ ಹಕ್ಕೊತ್ತಾಯದ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ದೀಪಕ ಜುಂಜುರವಾಡ ಮಾತನಾಡಿ, ಒಂದು ವೇಳೆ ವಿಳಂಬವಾದರೆ ಅಕ್ಟೋಬರ 1ರಂದು ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಪಂಚಮಸಾಲಿ ಜಗದ್ಗುರುಗಳಾದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಅಭಿವೃದ್ದಿ ಸಮೀತಿಯ ತಾಲೂಕಾ ಅಧ್ಯಕ್ಷ ಬಸವರಾಜ ಪಾಟೀಲ, ಬಸವಪ್ರಭು ನಿಡಗುಂದಿ, ಮಲ್ಲು ಗೋಡಿಗೌಡರ, ಮಹಾದೇವ ಗೋಕಾಕ, ಈಶ್ವರ ಢವಳೇಶ್ವರ, ಹನಮಂತ ಶಿವಾಪೂರ, ಸದಾಶಿವ ನಿಡಗುಂದಿ ಹಾಗೂ ಸಮೀತಿಯ ಅನೇಕ ಸದಸ್ಯರು ಇದ್ದರು.
