ಅರಭಾವಿ ಬಿಜೆಪಿ ಯುವ ಮೋರ್ಚಾದಿಂದ ಸ್ವಚ್ಚತೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ
ಮೂಡಲಗಿ: ಪಟ್ಟಣದ ಪುರಸಭೆ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ಸ್ವಚ್ಚ-ಸನ್ಮಾನ ಅಡಿಯಲಿ ಅರಭಾವಿ ಯುವ ಮೋರ್ಚಾ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟು ಹಬ್ಬದ ಅಂಗವಾಗಿ ಪುರಸಭೆ ಪೌರ ಕಾರ್ಮಿಕರೊಂದಿಗೆ ಪುರಸಭೆ ಆವರಣ ಮತ್ತು ಉದ್ಯಾನವನವನ್ನು ಸ್ವಚ್ಚತೆ ಕಾರ್ಯ ಕೈಗೊಂಡು ಪೌರ ಕಾರ್ಮಿಕರನ್ನು ಸತ್ಕರಿಸಿ ಗೌರವಿಸಿದರು.
ಸತ್ಕಾರ ಸಮಯದಲ್ಲಿ ಬಿಜೆಪಿ ಸ್ವಚ್ಚ ಭಾರತ ರಾಜ್ಯ ಸಂಚಾಲಕ ವಿಠ್ಠಲ ಯತ್ನಟ್ಟಿ ಮಾತನಾಡಿ, ಬಿಜೆಪಿ ಯುವ ಮೋರ್ಚ ಕಾರ್ಯಕರ್ತರಿಂದ ದೇಶ ಮತ್ತು ರಾಜ್ಯಾದ್ಯಂತ ಪ್ರತಿ ಮಂಡಲದಲ್ಲಿ ಸ್ವಚ್ಚ ಕಾರ್ಯವನ್ನು ಹಮ್ಮಿಕೊಂಡಿದು, ಸಮಾಜದಲ್ಲಿ ಪೌರ ಕಾರ್ಮಿಕರ ಕೆಲಸ ಬಹಳ ಮಹತ್ವದಾಗಿದೆ ಮತ್ತು ಇಂದು ಪೌರ ಕಾರ್ಮಿಕರೊಂದಿಗೆ ಜೋತೆಗುಡಿ ಸ್ವಚ್ಚತಾ ಕಾರ್ಯ ಕೈಗೊಂಡಿದು ನಮ್ಮಗೆಲ ಪ್ರೇರಣೆಯಾಗಿದೆ ಎಂದರು.
ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಈರಣ್ಣ ಅಂಗಡಿ ಮಾತನಾಡಿ, ಭಾರತೀಯ ಜನತಾ ಪಕ್ಷ ವಿಭಿನ್ನ ರೀತಿಯಲ್ಲಿ ಕಾರ್ಯ ನಿರ್ವಸಲು ಸೇವೆ ಮತ್ತು ಸಮರ್ಪಣೆ ಅಭಿಯಾನ ಅಡಿಯಲ್ಲಿ 20 ದಿನಗಳ ಕಾಲ ಸ್ವಚ್ಚತಾ ಕಾರ್ಯ ಕೈಗೊಂಡು ಪೌರಕಾರ್ಮಿಕರ ಜೋತೆ ಸ್ವಚ್ಚತೆ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದ ಅವರು ಪೌರಕಾರ್ಮಿಕರ ಸೇವೆ ಅಜರಾಮರ ಸೇವೆ ಎಂದರು.
ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಮತ್ತು ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮಾತನಾಡಿ, ಸ್ವಯಂ ಪ್ರೇರಿತವಾಗಿ ಬಿಜೆಪಿ ಕಾರ್ಯಕರ್ತರು ಕಾರ್ಯ ಶ್ಲಾಘನಿ, ಸ್ವಚ್ಚತಾಕಾರ್ಯ ಪ್ರಕ್ರಿಯೇ ಪ್ರತಿಯೊಬ್ಬರ ಮನದಲ್ಲಿ ಬರಬೇಕು, ಕಸ ಉತ್ಪತ್ತಿ ಮಾಡುವವರೆ ನಿರ್ವಹಣೆ ಮಾಡಿದರೆ ನಗರ ಸ್ವಚ್ಚವಾಗಿರಲು ಸಾಧ್ಯ ಎಂದರು.
ಈ ಸಂಧರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲ ಅದ್ಯಕ್ಷ ಮಹಾದೇವ ಶೆಕ್ಕಿ, ಯುವ ಮೋರ್ಚಾ ಅಧ್ಯಕ್ಷ ಪ್ರಮೊದ ನುಗ್ಗಾನಟ್ಟಿ, ಎಸ್.ಸಿ ಮೋರ್ಚಾ ಅಧ್ಯಕ್ಷ ಪ್ರದಾನ ಕಾರ್ಯದರ್ಶಿ ಈರಪ್ಪ ಢವಳೇಶ್ವರ, ಜಿಲ್ಲಾ ಯುವ ಮೋರ್ಚಾ ಉಪಾದ್ಯಕ್ಷ ದುಂಡಪ್ಪ ನಂದಗಾವಿ, ಜಿಲ್ಲಾ ಕಾರ್ಯದರ್ಶಿ ಗುರು ಹಿರೇಮಠ, ಪ್ರದಾನ ಕಾರ್ಯದರ್ಶಿ ಮಹಾಂತೇಶ ಕುಡಚಿ, ಕಾರ್ಯದರ್ಶಿ ಪಾಂಡು ಮಹೆಂದ್ರಕರ, ಯುವ ಪ್ರಧಾನ ಕಾರ್ಯದರ್ಶಿ ಸಿದ್ದು ದುರದುಂಡಿ, ಚೇತನ ನಿಶಾನಿಮಠ, ಜಗದೀಶ ತೇಲಿ, ಮದನ್ ದಾನನ್ನವರ, ಪುರಸಭೆ ಪೌರ ಕಾರ್ಮಿಕರ ಮೇಲ್ವಿಚಾರಕಿ ಲಲಿತಾ ಜಾಧವ ಮತ್ತಿತರು ಇದ್ದರು.