Breaking News
Home / Recent Posts / ದೇಶದ ಪ್ರಗತಿಯಲ್ಲಿ ಸೈನಿಕರ ಪಾತ್ರ ಅಮೂಲ್ಯ- ಗಿರೆಣ್ಣವರ

ದೇಶದ ಪ್ರಗತಿಯಲ್ಲಿ ಸೈನಿಕರ ಪಾತ್ರ ಅಮೂಲ್ಯ- ಗಿರೆಣ್ಣವರ

Spread the love

ದೇಶದ ಪ್ರಗತಿಯಲ್ಲಿ ಸೈನಿಕರ ಪಾತ್ರ ಅಮೂಲ್ಯ- ಗಿರೆಣ್ಣವರ

ಮೂಡಲಗಿ: ನಮ್ಮ ಭಾರತೀಯ ಸೈನಿಕರ ತ್ಯಾಗ ಬಲಿದಾನಗಳಿಂದ ನಾವು ಇಂದು ಸುರಕ್ಷಿತವಾಗಿದ್ದೇವೆ ಭಾರತೀಯ ಸೈನಿಕರ ಸೇವೆ ಅಮೂಲ್ಯವಾದದ್ದುಎಂದು ತುಕ್ಕಾನಟ್ಟಿ ಸರಕಾರಿ ಶಾಲೆಯ ಪ್ರಧಾನ ಗುರು ಎ.ವ್ಹಿ. ಗಿರೆಣ್ಣವರ ಹೇಳಿದರು.
ತಾಲೂಕಿನ ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ತುಕ್ಕಾನಟ್ಟಿಯ ಸೈನಿಕರು ಕೂಡಿಕೊಂಡು ಶಿಕ್ಷಕ ದಿನಾಚರಣೆಯ ಹಿನ್ನೆಲೆಯಲ್ಲಿ ಶಿಕ್ಷಕರನ್ನು ಗೌರವಿಸುವ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಕರು ಸೈನಿಕರು, ರೈತರು ತಮ್ಮತಮ್ಮ ವೃತ್ತಿಯಲ್ಲಿ ಬದ್ಧರಾಗಿ, ಪರಸ್ಪರ ಗೌರವಿಸುವದರ ಮೂಲಕ ಸಮಾಜದಲ್ಲಿ ಆರೋಗ್ಯಕರ ಬೆಳವಣಿಗೆ ಉಂಟು ಮಾಡುವದಲ್ಲದೆ ವೃತ್ತಿಪರತೆ ಹಾಗೂ ಸಾಮರಸ್ಯತೆಯನ್ನು ತೋರಿಸುತ್ತದೆ ಎಂದ ಅವರು ನಮ್ಮ ಭಾರತೀಯ ಸೈನಿಕರಿಂದ ಸತ್ಕರಿಸಿಕೊಂಡ ನಾವೆಲ್ಲ ಶಿಕ್ಷಕರು ಭಾಗ್ಯವಂತರು ಎಂದರು.
ಕಲ್ಲೋಳಿ ಸಮೂಹ ಸಂಪನ್ಮೂಲ ವ್ಯಕ್ತಿ ಗಣಪತಿ ಉಪ್ಪಾರ ಅತಿಥಿಯಾಗಿ ಮಾತನಾಡಿ ಸೈನಿಕರೆಲ್ಲ ಕೂಡಿಕೊಂಡು ಶಿಕ್ಷಕರನ್ನು ಗೌರವಿಸುವ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವದು ಶ್ಲ್ಲಾಘನೀಯ. ಸೈನಿಕರು, ರೈತರು ಶಿಕ್ಷಕರ ಸೇವೆ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸೈನಿಕರ ಪರವಾಗಿ ಮಾತನಾಡಿದ ಸೈನಿಕ ಸಿದ್ದು ಅರಬಾಂವಿ ನಾವು ಭಾರತೀಯ ಸೇನೆಯಲ್ಲಿ ಸೇವೆ ಮಾಡುತ್ತಿರುದಕ್ಕೆ ನಮಗೆ ಶಿಕ್ಷಣ ಕೊಟ್ಟ ಗುರುವೃಂದವೇ ಕಾರಣ ಅದಕ್ಕಾಗಿ ತುಕ್ಕಾನಟ್ಟಿಯ ಎಲ್ಲಾಯೋಧರು ಕೂಡಿಕೊಂಡು ಗುರುಬಳಗವನ್ನು ನಾವಿಂದು ಗೌರವಿಸುತ್ತಿದ್ದೇವೆ ಎಂದರು.
ನಿವೃತ್ತಯೋಧ ಸಿದ್ದಪ್ಪ ನಾಯ್ಕ ಮಾತನಾಡಿ ಸರಕಾರಿ ಶಾಲೆ ಪ್ರಗತಿಪರ ಹೊಂದುತ್ತಿರುವದಕ್ಕೆ ಇಲ್ಲಿಯ ಗುರುಬಳಗವೇ ಕಾರಣ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಕೆ.ಆರ. ಭಜಂತ್ರಿ ಈ ಸಂದರ್ಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಯ ಗುರುಬಳಗವನ್ನು ಹಾಗೂ ಅಡುಗೆ ಸಿಬ್ಬಂಧಿಯನ್ನು ಎಲ್ಲಾಯೋಧರುಕೂಡಿಕೊಂಡು ಗೌರವಿಸಿದರು. ಪ್ರಾರಂಭದಲ್ಲಿ ನಿವೃತ್ತಯೋಧ ಸಿದ್ದಪ್ಪ ನಾಯ್ಕಜ್ಯೋತಿ ಬೆಳಗಿಸಿದರು. ನಿವೃತ್ತ ಸೈನಿಕ ಸಿದ್ದಪ್ಪ ಬಾಗೇವಾಡಿಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸೈನಿಕರಾದ ಸಿದ್ದಪ್ಪ ನಾಯ್ಕ, ಸಿದ್ದಪ್ಪ ಬಾಗೇವಾಡಿ, ನಾಮದೇವ ಸಂಗಾನಟ್ಟಿ, ಆನಂದ ಪತ್ತಾರ, ಪುಂಡಲೀಕ ಉಪ್ಪಾರ, ರಾಜು ನಾಯ್ಕವಾಡಿ, ಸಿದ್ದು ಅರಬಾಂವಿ, ಭೈರಪ್ಪ ಸಂಗಾನಟ್ಟಿ, ಪ್ರದೀಪ ಶೆಟ್ಟಿ. ಸಿದ್ದಾರೂಢ ವ್ಯಾಪಾರಕಿ, ಸಿದ್ದು ಖಾನಟ್ಟಿ, ನಾರಾಯಣ ಮಲ್ಲಾಪೂರ, ಮುತ್ತುರಾಜ ಗದಾಡಿ, ಗುರುನಾಥ ಗದಾಡಿ, ಯಲ್ಲಪ್ಪ ಚೋಟೆಪ್ಪಗೋಳ, ಬಾಳಪ್ಪ ಗದಾಡಿ ಭಾಗವಹಿಸಿದ್ದರು.
ಶಿಕ್ಷಕರಾದ ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಕುಸುಮಾಚಿಗರಿ, ವಿಮಲಾಕ್ಷಿತೋರಗಲ್, ಶಂಕರ ಲಮಾಣಿ, ಶೀಲಾ ಕುಲಕರ್ಣಿ, ಕೆ.ಆರ.ಭಜಂತ್ರಿ, ಸಂಗೀತಾ ತಳವಾರ, ಎಮ್.ಕೆ.ಕಮ್ಮಾರ, ಎಮ್.ಡಿ. ಗೋಮಾಡಿ ಹಾಗೂ ಅಕ್ಷರದಾಸೋಹ ಸಿಬ್ಬಂಧಿ ಪಾಲ್ಗೊಂಡಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ