ಮೂಡಲಗಿ:ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರ ದೂರದೃಷ್ಟಿಯಿಂದ ಯಕ್ಸಂಬಾ ಬೀರೇಶ್ವರ ಕೋ-ಆಪ್ ಸೊಸೈಟಿಯು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಾಕಷ್ಟು ನೆರವಾಗಿದೆ ಎಂದು ಯಕ್ಸಂಬಾ ಬೀರೇಶ್ವರ ಕೋ-ಆಪ್ ಸೊಸೈಟಿಯ ಕಲ್ಲೋಳಿ ಪಟ್ಟಣದ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಬಸವರಾಜ ಸಂಪಗಾವಿ ಹೇಳಿದರು.
ಯಕ್ಸಂಬಾದ ಬೀರೇಶ್ವರ ಕೋ-ಆಪ್ ಸೊಸೈಟಿಯ ಕಲ್ಲೋಳಿ ಪಟ್ಟಣದ ಶಾಖೆಯ ಸಿಬ್ಬಂದಿಗೆ ಶೇ 44ರಷ್ಟು ವೇತನ ಹೆಚ್ಚಳ ಮಾಡಿರುವ ಪ್ರಮಾಣ ಪತ್ರ ಸೋಮವಾರ ಸೆ.20ರಂದು ವಿತರಿಸಿ ಅವರು ಮಾತನಾಡಿದರು.
ಪ್ರವಾಹ ಮತ್ತು ಕರೊನಾ ಸಮಯದಲ್ಲಿ ಬೀರೇಶ್ವರ ಸಹಕಾರಿ ಸಂಘವು ಜನ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಪ್ರಾಮಾಣಿಕ ಮತ್ತು ಶಿಸ್ತುಬದ್ಧ ಕರ್ತವ್ಯದಿಂದ ನಾಡಿನಾದ್ಯಂತ ಸ್ಥಾಪನೆಯಾಗಿರುವ ಬೀರೇಶ್ವರ ಸೊಸೈಟಿ ಶಾಖೆಗಳು ಆರ್ಥಿಕವಾಗಿ ಪ್ರಗತಿಯಲ್ಲಿವೆ. ಹೀಗಾಗಿ ಬೀರೇಶ್ವರ ಸೊಸೈಟಿ ಎಲ್ಲಾ ಸಿಬ್ಬಂದಿಗೆ ವೇತನ ಹೆಚ್ಚಿಸಲಾಗಿದೆ ಎಂದು ಕಲ್ಲೋಳಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಬಸವರಾಜ ಸಂಪಗಾವಿ ತಿಳಿಸಿದರು.
ಕಲ್ಲೋಳಿ ಪಟ್ಟಣದ ಬೀರೇಶ್ವರ ಸೊಸೈಟಿ ಶಾಖೆಯ ವ್ಯವಸ್ಥಾಪಕ ಪ್ರಕಾಶ ಕಾಳೆ ಮಾತನಾಡಿ, ಕರೊನಾ 1 ಮತ್ತು 2ನೇ ಅಲೆಯಿಂದ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಕುಟುಂಬ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೀರೇಶ್ವರ ಸೊಸೈಟಿ ಸಿಬ್ಬಂದಿಗೆ ವೇತನ ಹೆಚ್ಚಿಸಿ ಸೊಸೈಟಿಯ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಮಾನವಿತೆ ಮೆರೆದಿದ್ದಾರೆ ಎಂದರು.
ಸುರೇಶ ಕಬ್ಬೂರ, ಮಾರುತಿ ಕುರಬೇಟ, ರಾಮಗೊಂಡ ಕಡಾಡಿ, ಶಂಕರ ಖಾನಗೌಡ್ರ, ಪುಂಡಲೀಕ ಮದ್ರಾಸಿ, ಸ್ಥಳೀಯ ಬೀರೇಶ್ವರ ಕೋ-ಆಪ್ ಸೊಸೈಟಿ ಶಾಖೆಯ ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗ, ಗ್ರಾಹಕರು ಇದ್ದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …