Breaking News
Home / Recent Posts / ಮುನ್ಯಾಳ-ರಂಗಾಪುರ ಮಠದ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ ‘ಮಾದರಿ ಸಮುದಾಯ ಭವನಕ್ಕೆ ಸಂಕಲ್ಪ’

ಮುನ್ಯಾಳ-ರಂಗಾಪುರ ಮಠದ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ ‘ಮಾದರಿ ಸಮುದಾಯ ಭವನಕ್ಕೆ ಸಂಕಲ್ಪ’

Spread the love


ಮೂಡಲಗಿ ಸಮೀಪದ ಮುನ್ಯಾಳ-ರಂಗಾಪುರದ ಸದಾಶಿವಯೋಗೀಶ್ವರ ಮಠಕ್ಕೆ ಸರ್ಕಾರದಿಂದ ಮಂಜೂರಾಗಿರುವ ರೂ. 25 ಲಕ್ಷ ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭೂಮಿ ಪೂಜೆ ನೆರವೇರಿಸಿದರು. ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿಗಳು ಚಿತ್ರದಲ್ಲಿರುವರು
ಮುನ್ಯಾಳ-ರಂಗಾಪುರ ಮಠದ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ
‘ಮಾದರಿ ಸಮುದಾಯ ಭವನಕ್ಕೆ ಸಂಕಲ್ಪ’

ಮೂಡಲಗಿ: ‘ದೈವಭಕ್ತಿಯ ಬಲವೊಂದಿದ್ದರೆ ಮಾಡುವ ಸಂಕಲ್ಪಗಳು ಖಂಡಿತ ಈಡೇರುತ್ತವೆ. ಮುನ್ಯಾಳ-ರಂಗಾಪುರದ ಸದಾಶಿವಯೋಗೀಶ್ವರ ಮಠದಲ್ಲಿ ರೂ. 25 ಲಕ್ಷದ ವೆಚ್ಚದಲ್ಲಿ ಸಮುದಾಯ ಭವನವು ನಿರ್ಮಾಣವಾಗುತ್ತಿರುವುದು ಅದಕ್ಕೊಂದು ಉತ್ತಮ ಉಧಾಹರಣೆಯಾಗಿದೆ’ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಗುರುವಾರ ಸಂಜೆ ಸಮೀಪದ ಮುನ್ಯಾಳ-ರಂಗಾಪುರದ ಸದಾಶಿವಯೋಗೀಶ್ವರ ಮಠಕ್ಕೆ ಮುಜರಾಯಿ ಇಲಾಖೆಯಿಂದ ಬಿಡುಗಡೆಯಾಗಿರುವ ರೂ. 25 ಲಕ್ಷ ವೆಚ್ಚದ ಸಮುದಾಯ ಭವನದ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಶ್ರೀಗಳು ನೀಡಿದ ಸನ್ಮಾನ ಆಶೀರ್ವಾದವನ್ನು ಪಡೆದು ಮಾತನಾಡಿದ ಅವರು ಭಾರತದ ದೈವಭಕ್ತಿಯು ಇಡೀ ಜಗತ್ತಿನ ಗಮನಸೆಳೆದಿರುವ ಅಪೂರ್ವ ಸಂಗತಿಯಾಗಿದೆ ಎಂದರು.
ರಂಗಾಪುರ-ಮುನ್ಯಾಳ ಸದಾಶಿವಯೋಗೀಶ್ವರ ಮಠದ ಸಮುದಾಯ ಭವನಕ್ಕೆ ಸರ್ಕಾರವು ರೂ. 25 ಲಕ್ಷ ಮಂಜೂರು ಮಾಡಿದ್ದು, ಮುಂದಿನ ಹಂತದಲ್ಲಿ ಸರ್ಕಾರದಿಂದ ಇನ್ನಷ್ಟು ಅನುದಾನ ಕೊಡಿಸುವುದಲ್ಲದೆ ನನ್ನ ವಯಕ್ತಿಕ ಸಹಾಯ ಮತ್ತು ಭಕ್ತರ ಸಹಕಾರದೊಂದಿಗೆ ರೂ.1 ಕೋಟಿಗೂ ಅಧಿಕ ವೆಚ್ಚದ ಮಾದರಿ ಭವನವಾಗಲಿದೆ ಎಂದರು.
ಪ್ರವಾಹ ಸಂದರ್ಭದಲ್ಲಿ ಹಾನಿಯಾಗಿದ್ದ ಹುಣಶ್ಯಾಳ ಪಿವೈ-ಮುನ್ಯಾಳ ಸಂಪರ್ಕ ಸೇತುವೆಯನ್ನು ತ್ವರಿತವಾಗಿ ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲಮಾಡಿಕೊಡಲಾಯಿತು. ರಂಗಾಪುರ, ಮುನ್ಯಾಳ, ಕಮಲದಿನ್ನಿ ಭಾಗದಲ್ಲಿ ಆಗಬೇಕಾಗಿರುವ ರಸ್ತೆ ಸುಧಾರಣೆಗಳನ್ನು ಮಾಡಿಸುವುದಾಗಿ ತಿಳಿಸಿದರು.
ಕೊರೊನಾದಿಂದ ಕಳೆದ ಒಂದುವರೆ ವರ್ಷದಿಂದ ರಾಜ್ಯದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಹಣವನ್ನು ಕೊವಿಡ್ ನಿಯಂತ್ರಣಕ್ಕೆ ಬಳಸಿದ್ದರಿಂದ ಕೆಲಸಗಳು ಕುಂಟಿತವಾಗಿದ್ದವು. ಈಗ ಮತ್ತೆ ಅಭಿವೃದ್ಧಿ ಕೆಲಸಗಳು ನಡೆದಿದ್ದು ಕ್ಷೇತ್ರದ ರಸ್ತೆಗಳ ದುರಸ್ತಿಗಾಗಿ ರೂ. 50 ಕೋಟಿ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿರುವ ಬಗ್ಗೆ ಶಾಸಕರು ತಿಳಿಸಿದರು.
ಸದಾಶಿವಯೋಗೀಶ್ವರ ಮಠದ ಪೀಠಾಧಿಪತಿ ಡಾ. ಶಿವಲಿಂಗ ಮುರಘರಾಜೇಂದ್ರ ಸ್ವಾಮೀಜಿಗಳು ಮಾತನಾಡಿ ಮಠದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನ ಮುಖ್ಯವಾಗಿದೆ. ಕ್ಷೇತ್ರಗಳಲ್ಲಿಯ ಎಲ್ಲ ಮಠಗಳ ಬೆಳವಣಿಗೆಯನ್ನು ಮಾಡುತ್ತಿರುವುದು ಅವರ ದೈವಭಕ್ತಿಗೆ ಸಾಕ್ಷಿಯಾಗಿದೆ. ಸದಾಶಿವಯೋಗೀಶ್ವರ ಮಠದ ಪ್ರಗತಿಗಾಗಿ ಕೊಟ್ಟಿದ್ದ ಮಾತನ್ನು ಶಾಸಕರು ಈಡೇರಿಸಿದ್ದಾರೆ ಎಂದು ಪ್ರಶಂಸಿದರು.
ಸರ್ಕಾರವು ನೀಡಿದ ರೂ. 25 ಲಕ್ಷದೊಂದಿಗೆ ಭಕ್ತರ ದೇಣಿಗೆಯೊಂದಿಗೆ ರೂ. 1 ಕೋಟಿ ವೆಚ್ಚದಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದೆ. ಶಾಸಕರು ಸಹ ಕೈಜೋಡಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಸಮುದಾಯ ಭವನದ ಉದ್ಘಾಟನೆಗೆ ಶ್ರೀಶೈಲ್ ಜಗದ್ಗುರುಗಳನ್ನು ಬರಮಾಡಿಕೊಂಡು ನೆರವೇರಿಸಲಾಗುವುದು ಎಂದು ಹೇಳಿದರು.
ಮಠದಲ್ಲಿ ನಿರ್ಮಾಣವಾಗಲಿರುವ ಸಮುದಾಯ ಭವನದಿಂದ ಮುನ್ಯಾಳ, ರಂಗಾಪುರ ಭಾಗದ ಗ್ರಾಮಗಳ ಜನರ ಧಾರ್ಮಿಕ ಕಾರ್ಯಗಳು, ಕಲ್ಯಾಣ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.
ಮುನ್ಯಾಳ ಮತ್ತು ರಂಗಾಪುರ ಗ್ರಾಮದ ಮಧ್ಯದಲ್ಲಿರುವ ಹಳ್ಳಕ್ಕೆ ಸೇತುವೆ ನಿರ್ಮಿಸುವುದರಿಂದ ಸಂಪರ್ಕಕಕ್ಕೆ ಗ್ರಾಮಗಳ ಜನರಿಗೆ ಹೆಚ್ಚು ಅನುಕೂಲವಾಗಲಿದ್ದು, ಶಾಸಕರು ಗಮನಹರಿಸಬೇಕು ಎಂದು ಶ್ರೀಗಳು ಹೇಳಿದರು.
ಸುಣಧೋಳಿಯ ಜಡಿಸಿದ್ಧೇಶ್ವರಮಠದ ಶಿವಾನಂದ ಸ್ವಾಮೀಜಿಗಳು ಮಾತನಾಡಿ ಘಟಪ್ರಭಾ ನದಿಯ ಪ್ರವಾಹ, ಕೊರೊನಾ ಸಂಕಷ್ಟದಲ್ಲಿ ಜನರ ಕಷ್ಟಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಂದಿಸಿದ್ದು ಶಾಸಕರ ಮಾದರಿ ಕಾರ್ಯವಾಗಿದೆ ಎಂದು ಶ್ಲಾಘೀಸಿದರು.
ಸಮುದಾಯ ಭವನ ನಿರ್ಮಾಣಕ್ಕೆ ರೂ. 1.11 ಲಕ್ಷ ದೇಣಿಗೆಯ ವಾಗ್ದಾಣ ಮಾಡಿದ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಆನಂದರಾವ ನಾಯ್ಕ ಅವರನ್ನು ಸಮಾರಂಭದಲ್ಲಿ ಗೌರವಿಸಿದರು.
ಅತಿಥಿಗಳಾಗಿ ಮಲ್ಲಿಕಾರ್ಜುನ ಕಬ್ಬೂರ, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಸಂತೋಷ ಸೋನವಾಲಕರ, ಹಳ್ಳೂರದ ಹನಮಂತ ತೇರದಾಳ, ಗೋವಿಂದಪ್ಪ ಒಂಟಗೋಡಿ, ಶಿವಾಪುರದ ಶಿವನಗೌಡ ಪಾಟೀಲ, ಶಿವಬಸು ಜುಂಝರವಾಡ, ಸಂಗಪ್ಪ ಸೂರಣ್ಣವರ, ಮಲ್ಲಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಮಹಾದೇವ ಗೋಡಿಗೌಡರ, ಆನಂದರಾವ ನಾಯ್ಕ, ಬಸಯ್ಯ ಹಿರೇಮಠ, ಶಿವಾನಂದ ಬಿಳ್ಳೂರ, ಡಾ.ಎಸ್.ಎಸ್. ಪಾಟೀಲ, ರಂಗಾಪುರದ ಹನಮಂತ ತೇರದಾಳ, ಭೀಮಶಿ ಮಗದುಮ, ಲಕ್ಕಪ್ಪ ಹುಚ್ಚರಡ್ಡಿ, ರವೀಂದ್ರ ಡಿ. ಸಣ್ಣಕ್ಕಿ, ಮಹಾದೇವ ಬೆಳಗಲಿ, ಶಿವಲಿಂಗ ಪಾಟೀಲ, ಸುಧೋಳಿಯ ಪ್ರಕಾಶ ಪತ್ತಾರ, ಕಲ್ಲಪ್ಪ ಕಮತಿ, ಚಂದ್ರಶೇಖರ ಗಾಣಿಗೇರ ಇದ್ದರು.
ಐಶ್ವರ್ಯ ತಳವಾರ ಪ್ರಾರ್ಥಿಸಿದರು, ಡಾ. ಕೆ.ಎಚ್. ನಾಗರಾಳ ನಿರೂಪಿಸಿದರು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ