ಕುರುಹಿನಶೆಟ್ಟಿ ಸೊಸೈಟಿ ಸಾಮಾಜಿಕ ಜನಪರ ಕಾರ್ಯ ಮಾಡುತ್ತಿದೆ-ಮುಗುಳಖೋಡ
ಮೂಡಲಗಿ: ಕುರಹಿನಶೆಟ್ಟಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯು ಪ್ರಸಕ್ತ ಸಾಲಿನಲ್ಲಿ 2.72 ಕೋಟಿ ರೂ ನಿವ್ಹಳ ಲಾಭ ಗಳಿಸಿದ್ದು ಪ್ರಗತಿಪಥದತ್ತ ಮುನ್ನುಗ್ಗುತ್ತಿದೆ ಎಂದು ಸಂಘದ ಚೇರಮನ್ ಬಸಪ್ಪ ಮುಗಳಖೋಡ ಹೇಳಿದರು.
ಸೋಮವಾರದಂದು ಸೊಸೈಟಿ ಸಭಾ ಭವನದಲ್ಲಿ 2020-21ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ವರದಿ ವಾಚಿಸಿ ಮಾತನಾಡಿ, ಸಂಸ್ಥೆಯು 1995 ರಲ್ಲಿ ಸ್ಥಾಪನೆಯಾಗಿ ಪ್ರಧಾನಕಛೇರಿ ಹಾಗೂ 9 ಶಾಖೆಗಳನ್ನು ಹೊಂದಿದ್ದು ಪ್ರಧಾನಕಛೇರಿ ಹಾಗೂ ಮಹಾಲಿಂಗಪೂರದ ಶಾಖೆಗಳು ಸ್ವಂತ ಭವ್ಯ ಕಟ್ಟಡಗಳನ್ನು ಹೊಂದಿವೆ. ಶೇರು ಬಂಡವಾಳ ರೂ 2.81 ಕೋಟಿ , ಠೇವುಗಳು ರೂ 126.02 ಕೋಟಿ, ಗುಂತಾವಣಿ ರೂ 51.12 ಕೋಟಿ, ಸಾಲಗಳು ರೂ 82.32 ಕೋಟಿ, ದುಡಿಯುವ ಬಂಡವಾಳ ರೂ 150.36 ಕೋಟಿ ಸಂಸ್ಥೆಯು ಹೊಂದುವುದರ ಮೂಲಕ ಸಂಘವು ಸಾಮಾಜಿಕವಾಗಿ ಜನಪರ ಕಾರ್ಯಗಳನ್ನೂ ಮಾಡುತ್ತಿದೆ ಎಂದರು.
ಶ್ರೀ ನೀಲಕಂಠ ಮಠದ ಶಿವಾನಂದ ಶ್ರೀಗಳು ಸಾನಿದ್ಯ ವಹಿಸಿ ಆರ್ಶಿವಚನ ನೀಡಿದರು.
ಸಭೆಯಲ್ಲಿ, ಚಾರ್ಟರ್ಡ್ ಅಕೌಂಟಂಟ್(ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ತಾಲ್ಲೂಕಿನ ಧರ್ಮಾಜಿ ಪೋಳ ಹಾಗೂ ಸಂತೋಷ ಹೊಸಮನಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಲಕ್ಕಪ್ಪ ಪೂಜೇರಿ ನಿರ್ದೇಶಕರುಗಳಾದ ಸುಭಾಸ ಬೆಳಕೂಡ, ಇಸ್ಮಾಯಿಲ್ ಕಳ್ಳಿಮನಿ, ಗೊಡಚಪ್ಪ ಮುರಗೋಡ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ, ಉಮಾ ಬೆಳಕೂಡ, ಮಾಲಾ ಬೆಳಕೂಡ, ಮಹಾಬೂಬಿ ಕಳ್ಳಿಮನಿ, ಶಾಂತವ್ವಾ ಬೋರಗಲ್, ಶ್ಯಾಲನ್ ಕೊಡತೆ, ವಕೀಲರು ಹಾಗೂ ಕಾನೂನು ಸಲಹೆಗಾರರಾದ ಅಶೋಕ ಭೀ. ಬಾಗೋಜಿ. ಹಾಗೂ ವಿವಿಧ ಶಾಖೆಗಳ ಅಧ್ಯಕ್ಷರು, ಸಿಬ್ಬಂದಿಯವರು ಹಾಜರಿದ್ದರು.
ಶಿಕ್ಷಕ ಚಂದ್ರಕಾಂತ ಕೊಡತೆ ನಿರೂಪಿಸಿದರು, ಪ್ರಧಾನ ವವ್ಯಸ್ಥಾಪಕ ರಮೇಶ ವಂಟಗೂಡಿ ಸ್ವಾಗತಿಸಿದರು, ಪ್ರಮೋದ ಯಲಬುರ್ಗಿಮಠ ವಂದಿಸಿದರು.