Breaking News
Home / Recent Posts / ಸಕಾಲದಲ್ಲಿ ಸಾಲವನ್ನು ಮರು ಪಾವತಿ ಮಾಡಿರೆ ಸಂಘ ಪ್ರಗತಿ ಹೊಂದಲು ಸಾಧ್ಯ – ಲಕ್ಷ್ಮೀ ಬಸವರಾಜ ಮಾಳೇದ

ಸಕಾಲದಲ್ಲಿ ಸಾಲವನ್ನು ಮರು ಪಾವತಿ ಮಾಡಿರೆ ಸಂಘ ಪ್ರಗತಿ ಹೊಂದಲು ಸಾಧ್ಯ – ಲಕ್ಷ್ಮೀ ಬಸವರಾಜ ಮಾಳೇದ

Spread the love

 

ಮೂಡಲಗಿ: ಸಂಘದ ಶೇರುದಾರರು ಯಾವ ಉದ್ಧೇಶಕ್ಕಾಗಿ ಪಡೆದುಕೊಂಡ ಸಾಲವನ್ನು ಸರಿಯಾಗಿ ಸದ್ಬಳಿಕ್ಕೆ ಮಾಡಿಕೊಂಡು ಸಕಾಲದಲ್ಲಿ ಸಾಲವನ್ನು ಮರು ಪಾವತಿ ಮಾಡಿರೆ ಸಂಘ ಪ್ರಗತಿ ಹೊಂದಲು ಸಾಧ್ಯ ಎಂದು ಪ್ರಗತಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಲಕ್ಷ್ಮೀ ಬಸವರಾಜ ಮಾಳೇದ ಹೇಳಿದರು.
ತಾಲೂಕಿನ ಯಾದವಾಡದ ಪ್ರಗತಿ ಮಹಿಳಾ ಗ್ರಾಮಿಣಾಭಿವೃದ್ಧಿ ಸಹಕಾರಿ ಸಂಘದ 7ನೇ ವಾರ್ಷಿಕ ಸರ್ವಸಾಧಾರಣ ಸಭೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಮಹಿಳೆಯು ಎಲ್ಲ ರಂಗಗಲ್ಲಿ ಕಾರ್ಯ ಮಾಡುತ್ತಿದು ಕಾರಣ ತಾವುಗಳು ಸರಕಾರಿ ನೌಕರಿಯನ್ನೆ ಬಯಸದೆ ಸ್ವಂತ ಉದ್ಯೋಗ ಮಾಡಲು ಈ ಪ್ರಗತಿ ಮಹಿಳಾ ಸಂಘ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡ ಆರ್ಥಿಕವಾಗಿ ಸಬಲರಾಗಬೇಕು, ಕಡಿಮೆ ಅವಧಿಯಲ್ಲಿ ಕಳೆದ ಮಾರ್ಚ ಅಂತ್ಯಕ್ಕೆ ಸಂಘವು 7.80 ಲಕ್ಷ ರೂ ಲಾಭಗಳಿಸಲು ಶೇರುದಾರರ ಮತ್ತು ಮತ್ತು ಸಿಬ್ಬಂದಿವರ್ಗದವರು ಸಹಕಾರ ಹಾಗೂ ಆಡಳಿತ ಮಂಡಳಿಯ ನಿಶ್ವಾರ್ಥ ಸೇವೆಯಿಂದ ಪ್ರಗತಿ ಪಥದತ್ತ ದಾಪುಗಾಲು ಹಾಕುತ್ತಿದೆ ಎಂದ ಅವರು ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕಾಗಿ ಸದಾ ಸಹಾಯ ಸಹಕಾರ ನೀಡುವದಾಗಿ ಬರವಸೆ ನೀಡಿದರು.
ಸಭೆಯ ಅತಿಥಿಗಳಾಗಿದ ಯಾದವಾಡ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಬ್ರಹ್ಮಕುಮಾರಿ ಜಗದೇವಿ ಅವರು ಮಾತನಾಡಿ, ಇಂದಿನ ಸಮಾಜದಲ್ಲಿ ಪ್ರತಿಯೋಬ್ಬರು ತಾಯಂದಿರರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ, ಸಂಘದಿಂದ ನೀಡಿದ ಹೈನುಗಾರಿಕೆ, ವ್ಯಾಪಾರಸ್ಥರಿಗೆ ವಿಧ ತೆರನಾದ ಸಾಲದ ವಿತರಣೆ ಬಗ್ಗೆ ಮೇಚ್ಚುಗೆ ವ್ಯಕ್ತಡಿಸಿ ಗ್ರಾಮೀಣ ಪ್ರದೇಶದಲ್ಲಿ ಸಂಘವು ಏಳು ವರ್ಷಗಳಲ್ಲಿ ಸೂಮಾರು 7.80 ಲಕ್ಷ ಲಾಭಗಳಿಸಿದನ್ನು ಶ್ಲಾಘನಿಸಿದರು
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಸರೋಜಿನಿ ಯ.ನ್ಯಾಮಗೌಡರ ಅವರು ಸಂಘ ಸಾಲ ಸೌಲಭ್ಯಗಳನ್ನು ಮಾಹಿತಿ ನೀಡಿ ಬೆಳವಣಿಗೆಯನ್ನು ವಿವರಿಸಿದರು.
ನಿರ್ದೇಶಕಿಯರಾದ ಭಾರತಿ ಮ.ಅಂಬಲಿಮಠ, ವಿದ್ಯಾಶ್ರೀ ಕೃ.ಕೇರಿ, ಮಹಾದೇವಿ ಅ.ರೊಡಗಿ, ಲಕ್ಷ್ಮೀ ಶಿ.ಪಾಟೀಲ, ಡಾ.ಸ್ವಾತಿ ಶಿ.ಹಿರೇಮಠ, ಶೋಭಾ ವಿ.ದಳವಾಯಿ, ಪಾರ್ವತಿ ಲ.ದಾಸರ, ಮಹಾಲಕ್ಷ್ಮೀ ಮೋ.ಬಡಿಗೇರ, ಕಸ್ತೂರಿ ಕರಿಯಪ್ಪ ದಡ್ಡೆನ್ನವರ, ಲಕ್ಷ್ಮೀ ವಿ.ಬಡಿಗೇರ ಮತ್ತಿತರಿದ್ದರು
ಸಂಘದ ಗ್ರಾಹಕರಾದ ಲಕ್ಷ್ಮೀ ಬಡಿಗೇರ ಮತ್ತು ರಷ್ಮಿ ಹಜೇರಿ ಅನಿಸಿಕೆಗಳನ್ನು ಹಂಚಿಕೊಂಡರು, ಸಂಘದ ವ್ಯವಸ್ಥಾಕಿ ಅಶ್ವಿನಿ ಈ ತಿಪ್ಪಾ ಅವರು ವಾರ್ಷಿಕ ವರದಿ ಮಂಡಿಸಿ ನಿರೂಪಿಸಿದರು, ಶೊಭಾ ದಾಸರ ಸ್ವಾಗತಿಸಿದರು, ಮಾಳವ್ವಾ ದಳವಾಯಿ ವಂದಿಸಿದರು,


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ