ಅ.1 ಮತ್ತು 2 ರಂದು ಕಾಡುಕೋಳ ಶ್ರೀ ಲಕ್ಷ್ಮೀ ದೇವಿ ಜಾತ್ರೆ
ಮೂಡಲಗಿ: ಪಟ್ಟಣದ 8ನೇ ಉಪಕಾಲುವೆ ಹತ್ತಿರ ಇರುವ ಶ್ರೀ ಕಾಡುಕೋಳ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವ ಅ.1 ಮತ್ತು 2 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಡಗರ ಸಂಭ್ರಮದಿಂದ ಜರುಗಲಿದೆ.
ಲಕ್ಷ್ಮೀ ದೇವಿ ಜಾತ್ರಾ ಅಂಗವಾಗಿ ಶುಕ್ರವಾರ ಅ.1 ರಂದು ಸಂಜೆ 6 ಗಂಟೆಗೆ ಶ್ರೀ ಲಕ್ಷ್ಮೀದೇವಿಗೆ ಅಭಿಷೇಕ ಹಾಗೂ ಉಡಿ ತುಂಬುವದು, ರಾತ್ರಿ 8ಘಂಟೆಗೆ ಬಾಗೇವಾಡಿ ತಾಲೂಕಿ ಕಲಕುರ್ಕಿಯ ಶ್ರೀ ಅಮೋಘಸಿದ್ಧೇಶ್ವರ ಗಾಯನ ಸಂಘದಿಂದ ಲಕ್ಷ್ಮೀ ಪೂಜಾರಿ ಮತ್ತು ಸಂಗಡಿಗರಿಂದ ಅಮೋಘಸಿದ್ಧನ ಮಾರ್ಗ ಮತ್ತು ಮೂಡಲಗಿ ತಾಲೂಕಿನ ಹಳ್ಳೂರದ ಶ್ರೀ ವೀರಭದ್ರೇಶ್ವರ ಗಾಯನ ಸಂಘದಿಂz ಸತ್ತೆಪ್ಪ ಮಹಾರಾಜರ ಮತ್ತು ಸಂಘಡಿಗರಿಂದ ಮಾಳಿಂಗರಾಯನ ಮಾರ್ಗ ಡೊಳ್ಳಿನ ಪದಗಳು ನಡೆಯುವವು.
ಶನಿವಾರ ಅ.2 ರಂದು ಮುಂಜಾನೆ 9ಕ್ಕೆ ಶ್ರೀ ಲಕ್ಷ್ಮೀ ದೇವಿ ಪಲ್ಲಕ್ಕಿ ಉತ್ಸವ ಮತ್ತು 12ಗಂಟೆಗೆ ನೈವೆದ್ಯ ಹಾಗೂ ಮಹಾಪ್ರಸಾದ ಜರಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
IN MUDALGI Latest Kannada News