Breaking News
Home / Recent Posts / ಹಿರಿಯ ನಾಗರಿಕರು ದೇಶದ ಅಮೂಲ್ಯ ಸಂಪತ್ತು

ಹಿರಿಯ ನಾಗರಿಕರು ದೇಶದ ಅಮೂಲ್ಯ ಸಂಪತ್ತು

Spread the love

ಹಿರಿಯ ನಾಗರಿಕರು ದೇಶದ ಅಮೂಲ್ಯ ಸಂಪತ್ತು

ಮೂಡಲಗಿ: ‘ಹಿರಿಯ ನಾಗರಿಕರು ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಅವರನ್ನು ಸಮಾಜವು ನಿರ್ಲಕ್ಷಿಸಬಾರದು’ ಎಂದು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಟಿ. ಜಡ್ಲಿ ಹೇಳಿದರು.
ಇಲ್ಲಿಯ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾಜ್ಯ ನಿವೃತ್ತ ನೌಕರರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಚರಿಸಿದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಹಿರಿಯ ನಾಗರಿಕರಲ್ಲಿ ಅಪಾರವಾದ ಜ್ಞಾನ, ಅನುಭವ ಹಾಗೂ ಕೌಶಲತೆ ಇದ್ದು ಅದು ಯುವ ಪೀಳಿಗೆಗೆ ಮಾರ್ಗದರ್ಶನವಾಗುತ್ತದೆ ಎಂದರು.
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಪ್ರೊ. ಎಸ್.ಎಂ. ಕಮದಾಳ ಮಾತನಾಡಿ ಸಂಘದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿರುವ ಐವರು ಹಿರಿಯ ನಾಗರಿಕರನ್ನು ಪ್ರತಿ ವರ್ಷವೂ ಸನ್ಮಾನಿಸಲಾಗುವುದು ಎಂದರು.
ಹಿರಿಯ ನಾಗರಿಕರ ಸಂಘದ ನಿವೇಶನಕ್ಕಾಗಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿಕೊಂಡಿದ್ದು, ನಿವೇಶ ನೀಡುವ ಭರವಸೆ ನೀಡಿದ್ದಾರೆ. ವೃದ್ಧಾಶ್ರಮ ಮತ್ತು ಅಲ್ಲಿ ಗ್ರಂಥಾಲಯವನ್ನು ಸ್ಥಾಪಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದರು.
ಹಿರಿಯ ನಾಗರಿಕರಾದ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಕೆ.ವಿ. ದಂತಿ, ಶಿಕ್ಷಣ ಕ್ಷೇತ್ರದಲ್ಲಿ ಎ.ಎಲ್. ಶಿಂಧಿಹಟ್ಟಿ, ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಶಿವಾನಂದ ಬೆಳಕೂಡ, ಕೃಷಿ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ವೀರಭದ್ರ ಆರ್. ನೇರ್ಲಿ, ಕೃಷಿ ಮತ್ತು ಸಹಕಾರ ಕ್ಷೇತ್ರದಲ್ಲಿ ಬಸವರಾಜ ಮುಗಳಖೋಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು.
ಸನ್ಮಾನಿತರ ಪರವಾಗಿ ವೀರಭದ್ರ ಆರ್. ನೇರ್ಲಿ, ಪ್ರೊ. ಶಿವಾನಂದ ಬೆಳಕೂಡ ಮತ್ತು ಬಸವರಾಜ ಮುಗಳಖೋಡ ತಮ್ಮ ಕ್ಷೇತ್ರದಲ್ಲಿ ಮಾಡಿದ ಕಾರ್ಯಗಳ ಬಗ್ಗೆ ಅನುಭವವನ್ನು ಹಂಚಿಕೊಂಡರು.
ಚೈತನ್ಯ ಶಾಲೆಯ ವೈ.ಬಿ. ಪಾಟೀಲ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಬಿ.ವೈ. ಶಿವಾಪುರ, ಎಂ.ಬಿ. ಸಸಾಲಟ್ಟಿ, ಡಿ.ಡಿ. ಕಮತೆ, ಕಣಕಿಕೋಡಿ, ಜಿ.ಕೆ. ಮುರಗೋಡ, ಬಸವರಾಜ ಬೆಳಕೂಡ, ಲಕ್ಕಪ್ಪ ಪೂಜೇರಿ, ಕಳ್ಳಿಮನಿ, ಸುಭಾಷ ಬೆಳಕೂಡ ಉಪಸ್ಥಿತರಿದ್ದರು.
ಎಂ.ಎ. ಮೂಡಲಗಿ ಸ್ವಾಗತಿಸಿದರು, ಸಂಘದ ಕಾರ್ಯದರ್ಶಿ ಎ.ಎಚ್. ಒಂಟಗೋಡಿ ಅವರು ಪ್ರಾಸ್ತಾವಿಕ ಮಾತನಾಡಿ ನಿರೂಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ