ಸಂಜಯ ಪಾಟೀಲ ಹೇಳಿಕೆಗೆ ಆಕ್ರೋಶ
ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಮೂಡಲಗಿ: ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷೀ ಹೆಬ್ಬಾಳಕರ ವಿರುದ್ಧ ಹೇಳಿದ ವಿವಾದ್ಮಾತಕ ಹೇಳಿಕೆ ಖಂಡಿಸಿ ಅವರ ಪ್ರತಿಕೃತಿ ದಹಿಸಿ ಕೂಡಲೆ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಭಾನುವಾರ ಅರಭಾವಿ ಮತ್ತು ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಕಾರ್ಯಕರ್ತರು ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಮಾತನಾಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಬಗ್ಗೆ ಸಂಜಯ ಪಾಟೀಲ ಅವರು ವಿವಾದ್ಮಕ ಹೇಳಿಕೆ ನೀಡಿರುವುದು ಬಿಜೆಪಿಯ ಸಂಸ್ಕøತಿಯನ್ನು ಎತ್ತಿ ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದ ಬೇಟಿ ಬಚಾವೊ ಬೇಟಿ ಪಡಾವೊ ಎಂಬ ಮಾತಿಗೆ ಕವಡೆ ಕಾಸಿನ ಬೆಲೆ ಇಲ್ಲದಂತಾಗಿದೆ. ಅವರು ಈ ರೀತಿ ನಾಲಿಗೆ ಹರಿ ಬಿಟ್ಟು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಇದು ಮಹಿಳಾ ಕುಲಕ್ಕೆ ಮಾಡಿದ ಘೋರ ಅಪಮಾನವಾಗಿದೆ. ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಮಾಜಿ ಅರಭಾವಿ ಬ್ಲಾಕ್ ಅಧ್ಯಕ್ಷ ವಿ ಪಿ ನಾಯ್ಕ ಮಾತನಾಡಿ, ಮಹಿಳೆಯರನ್ನು ಗೌರವದಿಂದ ಕಾಣುವಂತಹ ನಾಡಿನಲ್ಲಿ ಮಹಿಳಾ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬಗ್ಗೆ ಕೇವಲವಾಗಿ ಮಾತನಾಡಿದ ಸಂಜಯ ಪಾಟೀಲ ವ್ಯಕ್ತಿತ್ವ ಹೇಗಿದೆ ಎಂಬುವುದನ್ನು ತೋರಿಸುತ್ತದೆ.ಕೂಡಲೆ ಅವರು ಹೆಬ್ಬಾಳಕರ ಹತ್ತಿರ ಬಹಿರಂಗ ಕ್ಷಮೆ ಯಾಚಿಸಬೇಕು ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಎಸ್ ಆರ್ ಸೋನವಾಲಕರ ಗಿರೀಶ ಕರಡಿ, ಗುರಪ್ಪ ಹಿಟ್ಟಣಗಿ, ರವಿ ತುಪ್ಪದ ಮಾತನಾಡಿ, ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅರಭಾವಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಲೀಮ್ ಇನಾಮದಾರ, ಬಸನಗೌಡ ಪಾಟೀಲ, ರವಿ ಮೂಡಲಗಿ, ಮಹಾಲಿಂಗಯ್ಯ ನಂದಗಾಂವಮಠ, ಜಾಕೀರ ನದಾಫ್, ಮಹಾದೇವ ಮೇತ್ರಿ, ರಮಜಾನ ಬಿಜಾಪೂರ, ಸುರೇಶ ಮಗದುಮ್, ರಾಬರ್ಟ ಮೂಡಲಗಿ, ಜಗದೀಶ ಜೋಗನ್ನವರ, ಮದಾರ ಜಕಾತಿ, ಇಮಾಮ ಹುನ್ನೂರ ಹಾಗೂ ಅನೇಕ ಕಾರ್ಯಕರ್ತರು ಇದ್ದರು.