ಮೂಡಲಗಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿಜಿ ಅವರ ಜನ್ಮದಿನದ ಪ್ರಯುಕ್ತ ಇಲ್ಲಿನ ಯುವ ಜೀವನ ಸೇವಾ ಸಂಸ್ಥೆಯ ಖಜಾಂಚಿ ಮಂಜುನಾಥ ಹೆಳವರ ಅವರು ತಮ್ಮ ಪುತ್ರಿ ಆರಾಧ್ಯಳ ಜನ್ಮದಿನದ ಸವಿ ನೆನಪಿಗಾಗಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಉದ್ಯಾನವನ ನಿರ್ಮಿಸಲು 100 ಗಿಡಗಳನ್ನು ಸಮಾಜ ಸೇವಕ ಮತ್ತು ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅವರಿಗೆ ಹಸ್ತಾಂತರಿಸಿದರು.
ಈ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಸಮಾಜ ಸೇವಕ ಈರಪ್ಪ ಢವಳೇಶ್ವರ ಅವರು ಈಗಾಗಲೆ ಅಂಗನವಾಡಿ ಕೇಂದ್ರವೊಂದನ್ನು ದತ್ತು ಪಡೆದು ಅಲ್ಲಿಯೂ ಉದ್ಯಾನವನ ನಿರ್ಮಿಸಿದ್ದಾರೆ ಮತ್ತು ಹಿಂದೂ ರುದ್ರಭೂಮಿಯಲ್ಲಿ, ಶಾಲಾ,ಕಾಲೇಜುಗಳಲ್ಲಿ,ಸಾರ್ವಜನಿಕ ಸ್ಥಳಗಳಲ್ಲಿ ಅತಿ ಹೆಚ್ಚು ಸಸಿಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆ ಮಾಡುವ ಮೂಲಕ ನಗರ ಸುಂದರತೆಗೆಗಾಗಿ ನಿರಂತರವಾಗಿ ಸ್ವಚ್ಚತೆ ಬಗ್ಗೆ ಅಪಾರ ಪರಿಸರ ಕಾಳಜಿ ಹೊಂದಿರುವ ಅವರ ನಿಸ್ವಾರ್ಥ ಸೇವಾ ಕಾರ್ಯಕ್ಕೆ ಪ್ರಶಸ್ತಿ ಪತ್ರ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ವತಿಯಿಂದ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅವರಿಗೆ 75ನೇ ಅಮೃತ ಮಹೋತ್ಸವದ ಪ್ರಯುಕ್ತ ಸ್ವಚ್ಚ ಭಾರತ ಮಿಷನ್ ಅಡಿಯಲ್ಲಿ ಪ್ರಶಸ್ತಿ ಪತ್ರ ನೀಡಿ ಸತ್ಕರಿಸಿ ಗೌರವಿಸಿದರು.
ಪುರಸಭೆಯ ಮುಖ್ಯಾಧಿಕಾರಿ ದೀಪಕ ಹರ್ದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೈ ಎಂ ಗುಜನಟ್ಟಿ ಪಿಎಸೈ ಎಚ್ ವಾಯ್ ಬಾಲದಂಡಡಿ, ಶಿಕ್ಷಕ ಎ.ಪಿ ಪರಸನ್ನವರ ಶಾಲಾ ಮುಖ್ಯೋಪಾಧ್ಯಾಯ ಸುರೇಶ ಕೋಪರ್ಡೆ, ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಪಿ ಬಂದಿ, ಡಾ.ಭಾರತಿ ಕೋಣಿ, ಆರೋಗ್ಯ ನೀರಿಕ್ಷಕ ಚಿದಾನಂದ ಮುಗಳಖೋಡ, ಪ್ರೀತಮ್ ಬೋವಿ ಮುಖಂಡರಾದ ಎಮ್. ವಾಯ್. ಮರೆಪ್ಪಗೋಳ, ರಮೇಶ ಸಣ್ಣಕ್ಕಿ, ಚೇತನ ನಿಶಾನಿಮಠ, ರಮೇಶ ಉಪ್ಪಾರ, ಬೀರು ವಣಶಣ್ಣಿ, ಓಂ ಸಂತ್, ಗುರು ಗಂಗನ್ನವರ ಶಾಲಾ ಮಕ್ಕಳು ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಮತ್ತು ಇನ್ನಿತರರು ಇದ್ದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …