Breaking News
Home / Recent Posts / ಕನ್ನಡ ನಾಡಿನಲ್ಲಿ ಜನಿಸಿರುವುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ – ರಾಹುಲ್ ಜಾರಕಿಹೊಳಿ

ಕನ್ನಡ ನಾಡಿನಲ್ಲಿ ಜನಿಸಿರುವುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ – ರಾಹುಲ್ ಜಾರಕಿಹೊಳಿ

Spread the love

ಗಣೇಶವಾಡಿಯಲ್ಲಿ ಕರವೇ ಘಟಕ ಉದ್ಘಾಟಿಸಿದ ಯುವ ನಾಯಕ ರಾಹುಲ್ ಜಾರಕಿಹೊಳಿ

ಕನ್ನಡ ನಾಡಿನಲ್ಲಿ ಜನಿಸಿರುವುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ – ರಾಹುಲ್ ಜಾರಕಿಹೊಳಿ

ಮೂಡಲಗಿ: ಅರಭಾಂವಿ ಮತ ಕ್ಷೇತ್ರದ ಗಣೇಶವಾಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕವನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕನ್ನಡ ಭಾμÉಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ನಾಡಿನ ಮಹಾನ ವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಕಲಾವಿದರು, ಕ್ರೀಡಾಪಟುಗಳು ಸೇರಿ ಅನೇಕರು ದೇಶಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸಿ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ನಾಡಿನಲ್ಲಿ ಜನಿಸಿರುವುದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಪ್ರಪಂಚದ ಮೂಲೆ ಮೂಲೆಯಲ್ಲೂ ಕನ್ನಡಿಗರಿದ್ದು, ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ. ಪ್ರತಿಯೊಬ್ಬರು ಕನ್ನಡದ ಮಹತ್ವವನ್ನು ಅರಿಯಬೇಕು. ಭಾμÉಯ ಉಳಿವು ಹಾಗೂ ಬೆಳವಣಿಗೆಗೆ ಶ್ರಮಿಸಬೇಕು ಎಂದರು.
ಬೆಳಗಾವಿ ಗಡಿ ಜಿಲ್ಲೆಯಾಗಿರುವುದರಿಂದ ಕರ್ನಾಟಕ ರಕ್ಷಣಾ ವೇದಿಕೆಯಂತಹ ಸಂಘಟನೆಗಳ ಪಾತ್ರ ಇಲ್ಲಿ ಮಹತ್ವದ್ದಾಗಿದೆ. ಭಾμÉಯ ಬೆಳವಣಿಗೆಗೆ ಸಂಘಟನೆಗಳೊಂದಿಗೆ ಜನರು ಕೂಡ ಕೈಜೋಡಿಸಬೇಕು ಎಂದು ಹೇಳಿದರು.
ಯುವ ಮುಖಂಡರಾದ ಸರ್ವೋತ್ತಮ ಜಾರಕಿಹೊಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಬಸವರಾಜ ಖಾನಪ್ಪನವರ, ಮದನ ದೇಶಪಾಂಡೆ, ಶಿವಲಿಂಗ ಪೂಜೇರಿ, ತ್ರಿಪತಿ ಗಣೇಶವಾಡಿ, ಭರನಗೌಡ ಪಾಟೀಲ, ಲಕ್ಷ್ಮಣ ಗನ್ನಪ್ಪಗೋಳ, ರಮೇಶ ಪೂಜೇರಿ, ಭೀಮಶಿ ಕೆಂಪನಗೋಳ, ಸಿದ್ದರಾಮ ಮೂಲಿಮನಿ , ಪಾಂಡು ಮನ್ನಿಕೆರಿ, ಮುರಳಿದರ ಬಡಿಗೆರ, ಕರವೇ ಘಟಕದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Spread the love

About inmudalgi

Check Also

ಬೆಟಗೇರಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಉಭಯ ಶಾಲೆಗಳ ಮಕ್ಕಳ ಪೋಷಕರ ಹಾಗೂ ಶಿಕ್ಷಕರ ಮಹಾಸಭೆ ಯಶಸ್ವಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ