ಅ. 9ರಂದು ಉಚಿತ ಕಣ್ಣಿನ ಸಪಾಸಣೆ ಶಿಬಿರ

ಮೂಡಲಗಿ: ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ಹಾಗೂ ಮೂಡಲಗಿ ಕಣ್ಣಿನ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ದೃಷ್ಟಿ ದಿನಾಚರಣೆ-2021’ರ ಅಂಗವಾಗಿ
ಶನಿವಾರ ಅ. 9ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಮೂಡಲಗಿ ಕಣ್ಣಿನ ಆಸ್ಪತ್ರೆಯಲ್ಲಿ (ಎಸ್‍ಎಸ್‍ಆರ್ ಕಾಲೇಜು ಎದುರಿಗೆ) ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಏರ್ಪಡಿಸಿರುವರು.
ಖ್ಯಾತ ಕಣ್ಣಿನ ತಜ್ಞರಾದ ಡಾ. ಸಚಿನ ಟಿ. ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡುವರು.
ಉದ್ಘಾಟನೆ: ಬೆಳಿಗ್ಗೆ 9.30ಕ್ಕೆ ಶಿಬಿರದ ಉದ್ಘಾಟನೆಯನ್ನು ಸಿಪಿಐ ವೆಂಕಟೇಶ ಮುರನಾಳ ನೆರವೇರಿಸುವರು. ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿವಹಿಸವರು. ಮುಖ್ಯ ಅತಿಥಿಯಾಗಿ ಡಾ. ಸಚಿನ ಟಿ. ಮತ್ತು ಡಾ. ಬಿ.ಬಿ. ಅವರಾದಿ ಭಾಗವಹಿಸುವರು ಎಂದು ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸರು ನೊಂದಣಿಗಾಗಿ ಮತ್ತು ಮಾಹಿತಿಗಾಗಿ ಮೊ: 7899358001, 9448839086, 9916246376 ಸಂಪರ್ಕಿಸಲು ತಿಳಿಸಿದ್ದಾರೆ.
IN MUDALGI Latest Kannada News